‘ಅದು ನನ್ನ ಗೆಳತಿಯ ಆಸೆ’; ರಕ್ಷಿತಾಗೆ ಕೊಟ್ಟ ಮಾತು ಈಡೇರಿಸ್ತೀನಿ ಎಂದ ದರ್ಶನ್
ದರ್ಶನ್ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಹಲವು ಸಿನಿಮಾಗಳ ಚಿತ್ರೀಕರಣ ವಿಳಂಬವಾಗಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದರೂ, ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ಅವರು ಪ್ರೇಮ್ ನಿರ್ದೇಶನದ ಚಿತ್ರ ಮಾಡುವುದಾಗಿ ಖಚಿತಪಡಿಸಿದ್ದು, ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನಟ ದರ್ಶನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಅವರಿಗೆ ಓಡಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಊಹಾಪೋಹ ಹುಟ್ಟಿಕೊಂಡಿದೆ. ದರ್ಶನ್ ಅಡ್ವಾನ್ಸ್ ತಿರುಗಿಸಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಈ ಕುರಿತು ಅವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದರಲ್ಲಿ ಅವರು ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.
‘ದಯಮಾಡಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ. ಸೂರಪ್ಪ ಬಾಬು ಅವರಿಗೆ ನಾನು ಹಣವನ್ನು ಮರಳಿ ಕೊಟ್ಟಿದ್ದೇನೆ. ಇಂಡಸ್ಟ್ರಿಯಲ್ಲಿನ ಆಪ್ತರು ನನ್ನ ಬಳಿ ಅವರನ್ನು ಕರೆದುಕೊಂಡು ಬಂದಿದ್ದರು. ಈಗ ಸಮಯವೆಲ್ಲ ವ್ಯರ್ಥವಾಗಿದೆ. ಅವರ ಅಡ್ವಾನ್ಸ್ ಹಣ ಇಟ್ಟುಕೊಂಡರೆ ಅವರ ಕಮಿಟ್ಮೆಂಟ್ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡೋಣ ಎಂದು ಹೇಳಿದ್ದೇನೆ’ ಎಂದಿದ್ದಾರೆ ದರ್ಶನ್.
View this post on Instagram
‘ನಾನು ಪ್ರೇಮ್ ಸಿನಿಮಾ ಮಾಡಿಯೇ ಮಾಡುತ್ತೇವೆ. ನನ್ನ ಗೆಳತಿ ರಕ್ಷಿತಾಳ ಆಸೆ. ಹೀಗಾಗಿ ಮಾಡೇ ಮಾಡ್ತೀವಿ. ಕೆವಿಎನ್ ಪ್ರೊಡಕ್ಷನ್ ಒಂದಷ್ಟು ಸಿನಿಮಾ ಮಾಡ್ತಾ ಇದಾರೆ. ಹೀಗಾಗಿ, ಸಿನಿಮಾ ಮಾಡದೇ ಇರುವವರ ಜೊತೆ ಮೊದಲು ಚಿತ್ರ ಮಾಡುತ್ತೇನೆ. ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ’ ಎಂದು ದರ್ಶನ್ ಹೇಳಿದ್ದಾರೆ. ಈ ಮೂಲಕ ಇವರ ಸಿನಿಮಾ ವಿಳಂಬಕ್ಕೆ ಕಾರಣ ತಿಳಿಸಿದ್ದಾರೆ.
ಇದನ್ನೂ ಓದಿ: ‘ಇದೊಂದು ಬಾರಿ ಕ್ಷಮಿಸಿಬಿಡಿ’; ಅಭಿಮಾನಿಗಳಿಗೆ ದರ್ಶನ್ ವಿಡಿಯೋ ಸಂದೇಶ
ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ಅಭಿಮಾನಿಗಳು ಸಾಕಷ್ಟು ಬೆಂಬಲ ನೀಡಿದ್ದರು. ಈ ವಿಚಾರಕ್ಕೆ ಅವರಿಗೆ ಸಾಕಷ್ಟು ಖುಷಿ ಇದೆ. ‘ಧನ್ವೀರ್, ರಚಿತಾ ರಾಮ್, ರಕ್ಷಿತಾಗೆ ಹಾಗೂ ನನ್ನ ಸೆಲೆಬ್ರಿಟಿಗಳಿ ಥ್ಯಾಂಕ್ಸ್. ನಾನು ಬೇರೆ ಭಾಷೆಗೆ ಹೋಗ್ತೀನಿ ಎನ್ನುವುದೆಲ್ಲ ಸುಳ್ಳು. ಇಲ್ಲಿ ಕೊಟ್ಟ ಪ್ರೀತಿ ನನಗೆ ಸಾಕು’ ಎಂದು ದರ್ಶನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




