AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಕ್ರೌರ್ಯ ಎಷ್ಟಿತ್ತು? ಚಾರ್ಜ್​​ಶೀಟ್​ನಲ್ಲಿ ಮತ್ತೊಂದು ಶಾಕಿಂಗ್ ವಿಚಾರ ರಿವೀಲ್

ಣುಕಾಸ್ವಾಮಿ ಒಂದು ಅಗಳು ತಿಂದ ಕೂಡಲೇ ಅದು ಮಾಂಸಹಾರ ಅನ್ನೋದು ಗೊತ್ತಾಗಿದೆ. ಹೀಗಾಗಿ ಅದನ್ನು ಅವರು ಉಗುಳಿದ್ದಾರೆ. ಅನ್ನ ಉಗುಳುತ್ತೀಯಾ ಬೋ* ಮಗನೆ ಎಂದು ದರ್ಶನ್ ಬೈದಿದ್ದರು. ಆ ಬಳಿಕ ಶೂನಿಂದ ಒದ್ದು ದರ್ಶನ್ ವಿಕೃತಿ‌ ಮೆರೆದಿದ್ದರು.

ದರ್ಶನ್​ ಕ್ರೌರ್ಯ ಎಷ್ಟಿತ್ತು? ಚಾರ್ಜ್​​ಶೀಟ್​ನಲ್ಲಿ ಮತ್ತೊಂದು ಶಾಕಿಂಗ್ ವಿಚಾರ ರಿವೀಲ್
ದರ್ಶನ್
ರಾಚಪ್ಪಾಜಿ ನಾಯ್ಕ್
| Edited By: |

Updated on:Sep 07, 2024 | 10:55 AM

Share

ನಟ ದರ್ಶನ್ ಅವರ ಕ್ರೌರ್ಯ ಮಿತಿ ಮೀರಿತ್ತು ಎನ್ನುವ ವಿಚಾರ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಈ ಬಗ್ಗೆ ಒಂದೊಂದೇ ವಿಚಾರ ರಿವೀಲ್ ಆಗುತ್ತಾ ಇದೆ. ವಿಚಾರಣೆ ವೇಳೆ ನಟ ದರ್ಶನ್ ಅವರು ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಕ್ರೌರ್ಯವನ್ನು ಬಿಂಬಿಸುವ ಘಟನೆ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಮಾಂಸದೂಟ ತಿನ್ನಿಸಿದ್ದಾಗಿ ವರದಿ ಆಗಿತ್ತು. ಇದು ನಿಜ ಅನ್ನೋದು ಚಾರ್ಜ್​​ಶೀಟ್​ನಿಂದ ಗೊತ್ತಾಗಿದೆ. ರೇಣುಕಾಸ್ವಾಮಿ‌ಯನ್ನು ಕಟ್ಟಿ ಹಾಕಿ ಡಿ ಗ್ಯಾಂಗ್ ಊಟ ನೀಡಿತ್ತು. ರೇಣುಕಾಸ್ವಾಮಿ ಒಂದು ಅಗಳು ತಿಂದ ಕೂಡಲೇ ಅದು ಮಾಂಸಹಾರ ಅನ್ನೋದು ಗೊತ್ತಾಗಿದೆ. ಹೀಗಾಗಿ ಅದನ್ನು ಅವರು ಉಗುಳಿದ್ದಾರೆ. ಅನ್ನ ಉಗುಳುತ್ತೀಯಾ ಬೋ* ಮಗನೆ ಎಂದು ದರ್ಶನ್ ಬೈದಿದ್ದರು. ಆ ಬಳಿಕ ಶೂನಿಂದ ಒದ್ದು ದರ್ಶನ್ ವಿಕೃತಿ‌ ಮೆರೆದಿದ್ದರು. ಬಳಿಕ‌ ಬಿರಿಯಾನಿ ಊಟವನ್ನು ಬಲವಂತವಾಗಿ ತಿನ್ನಿಸಿದ್ದರು.

ದರ್ಶನ್ ಶೂ‌ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ

ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರೋದು ಪತ್ತೆ ಆಗಿತ್ತು. ಅದೇ ರೀತಿ ಅವರು ಧರಿಸಿದ ಶೂಗೆ ಅಂಟಿದ್ದು ರೇಣುಕಾಸ್ವಾಮಿ ರಕ್ತ ಅನ್ನೋದು ಗೊತ್ತಾಗಿದೆ. ಶೂಗೆ ರಕ್ತ ಅಂಟಿಸಿಕೊಂಡೇ ಮೈಸೂರಿಗೆ ದರ್ಶನ್​ ತೆರಳಿದ್ದರು. ಮೈಸೂರಿನ ಹೋಟೆಲ್​ನಲ್ಲಿ ದರ್ಶನ್​ನ ಬಂಧಿಸಲಾಗಿತ್ತು. ಆಗ ಬೇರೊಂದು ಶೂ‌ ಧರಿಸಿ ಪೊಲೀಸರ ಜೊತೆಗೆ ದರ್ಶನ್ ತೆರಳಿದ್ದರು. ಹೋಟೆಲ್‌ ಸಿಬ್ಬಂದಿ ಶೂ ಹಾಗೂ ಬಟ್ಟೆ ಪ್ಯಾಕ್ ಮಾಡಿ ಪತ್ನಿ ಮನೆಗೆ ಕಳುಹಿಸಿದ್ದರು. ನಂತರ ಇದನ್ನು ಪೊಲೀಸರು ಜಪ್ತಿ ಮಾಡಿದ್ದರು. ಬಟ್ಟೆ ವಾಶ್ ಮಾಡಿದ್ದರಿಂದ ಕೆಮಿಕಲ್​ನಿಂದ ರೇಣುಕಾಸ್ವಾಮಿ ರಕ್ತ ಪತ್ತೆಯಾಗಿದೆ. ದರ್ಶನ್ ಶೂ ವಾಶ್ ಮಾಡಿರದ ಕಾರಣ ಅದರಲ್ಲಿ ಇದ್ದ ರಕ್ತದಿಂದ ಡಿಎನ್​ಎ ಮ್ಯಾಚ್ ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್​​ ಹಾಗೂ ಪವಿತ್ರಾ ಪತಿ-ಪತ್ನಿಯಾ? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ ಏನು?

ದರ್ಶನ್ ಮೇಲೆ‌ 8 ತಿಂಗಳ ಹಿಂದೆ ಎಫ್ಐಆರ್ ದಾಖಲಾಗಿತ್ತು. ಸಾಕು ನಾಯಿ ಕಚ್ಚಿದ್ದ ಹಿನ್ನಲೆಯಲ್ಲಿ ದರ್ಶನ್ ಮೇಲೆ‌ ಎಫ್ಐಆರ್ ದಾಖಲು ಮಾಡಲಾಗಿತ್ತು. ಈ ವೇಳೆ ನೋಟಿಸ್ ನೀಡಲು ದರ್ಶನ್ ಮನೆಗೆ ಆರ್.ಆರ್.ನಗರ ಇನ್​ಸ್ಪೆಕ್ಟರ್ ಬಂದಿದ್ದರು. ಈ ವೇಳೆ ಇನ್ಸ್​​ಪೆಕ್ಟರ್ ಮುಂದೆಯೇ ದರ್ಶನ್ ಪೊಗರು ತೋರಿಸಿದ್ದರು. ‘ಮನೆವರೆಗೂ ಬಂದಿದ್ದೀರ. ನಾನೇನು ಕೊಲೆ ಮಾಡಿದ್ದೀನಾ? ಕೊಲೆ ಮಾಡಿದ್ರೆ ನಾನೇ ಠಾಣೆಗೆ ಬಂದು ಕುಳಿತುಕೊಳ್ಳುತ್ತೇನೆ’ ಎಂದು ದರ್ಶನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:52 am, Sat, 7 September 24

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ