ಚಂದನವನದ ಖ್ಯಾತ ನಟ ಧ್ರುವ ಸರ್ಜಾ (Dhruva Sarja) ಅವರಿಗೆ ಇಂದು (ಅ.6) ಜನ್ಮದಿನದ ಸಂಭ್ರಮ. ಈ ವರ್ಷದ ಬರ್ತ್ಡೇ ಅವರಿಗೆ ತುಂಬ ಸ್ಪೆಷಲ್. ಇತ್ತೀಚೆಗಷ್ಟೇ ಧ್ರುವ ಪತ್ನಿ ಪ್ರೇರಣಾ ಶಂಕರ್ (Prerana Shankar) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಖುಷಿಯ ಬೆನ್ನಲ್ಲೇ ಧ್ರುವ ಸರ್ಜಾ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಆಪ್ತರು, ಸ್ನೇಹಿತರು ಹಾಗೂ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಪ್ರತಿ ವರ್ಷ ಧ್ರುವ ಸರ್ಜಾ ಅವರು ಅಭಿಮಾನಿಗಳ ಜೊತೆ ಬರ್ತ್ಡೇ (Dhruva Sarja Birthday) ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.
ನವಜಾತ ಶಿಶುವಿನ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಧ್ರುವ ಸರ್ಜಾ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಪತ್ನಿ ಮತ್ತು ಮಗು ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಿದೆ. ಧ್ರುವ ಕೂಡ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬೆರೆಯುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಅವರು ಅಭಿಮಾನಿಗಳ ಜೊತೆ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ.
ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರಿಗೆ ಸಖತ್ ಬೇಡಿಕೆ ಇದೆ. ‘ಅದ್ದೂರಿ’, ‘ಬಹದ್ದೂರ್’, ‘ಭರ್ಜರಿ’ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. 2021ರಲ್ಲಿ ಧ್ರುವ ನಟನೆಯ ‘ಪೊಗರು’ ಚಿತ್ರ ತೆರೆಕಂಡಿತು. ಆ ಬಳಿಕ ಅವರು ‘ಮಾರ್ಟಿನ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
‘ಮಾರ್ಟಿನ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಎ.ಪಿ. ಅರ್ಜುನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಹೊರಬಂದಿರುವ ಟೀಸರ್ ಮತ್ತು ಪೋಸ್ಟರ್ ನೋಡಿದ ಅಭಿಮಾನಿಗಳ ಮನದಲ್ಲಿ ಭಾರಿ ಕೌತುಕ ಮೂಡಿದೆ. ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ‘ಮಾರ್ಟಿನ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.
????? ???????? #??????
ಮಾರ್ಟಿನ್- మార్టిన్- மார்ட்டின்-
മാർട്ടിൻ- मार्टिन??????’? ??????? ?????? ?????#MartinTheMovie #IndiasBiggestActionSaga @DhruvaSarja @AP_Arjun_film @princekukm @I_am_Vaibhavi @satyaphegde @LahariMusic pic.twitter.com/2oelaAhhhF
— AP Arjun (@AP_Arjun_film) October 5, 2022
ಹೆಣ್ಣುಮಗು ಹುಟ್ಟಿದ ಖುಷಿಯಲ್ಲಿ ಧ್ರುವ:
ಅ.2ರಂದು ಧ್ರುವ ಪತ್ನಿ ಪ್ರೇರಣಾ ಶಂಕರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗು ಜನಿಸಬೇಕು ಎಂಬುದು ಧ್ರುವ ಸರ್ಜಾ ಅವರ ಆಸೆ ಆಗಿತ್ತು. ಅವರ ಆಸೆ ಈಡೇರಿದೆ. ಹಾಗಾಗಿ ಇಡೀ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಸಂಭ್ರಮದ ಜೊತೆಗೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಧ್ರುವ
Published On - 9:52 am, Thu, 6 October 22