Swarnalatha: ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಮತ್ತೆ ಎಫ್​ಐಆರ್​; ಪತಿಯಿಂದಲೇ ಪತ್ನಿ ವಿರು​ದ್ಧ ದೂರು

Sreeleela Family: ಅ.3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್​ ಆರೋಪಿಸಿದ್ದಾರೆ. ಆಡುಗೋಡಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

Swarnalatha: ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಮತ್ತೆ ಎಫ್​ಐಆರ್​; ಪತಿಯಿಂದಲೇ ಪತ್ನಿ ವಿರು​ದ್ಧ ದೂರು
ಸ್ವರ್ಣಲತಾ, ಶ್ರೀಲೀಲಾ
Follow us
| Updated By: ಮದನ್​ ಕುಮಾರ್​

Updated on:Oct 05, 2022 | 1:07 PM

ಖ್ಯಾತ ನಟಿ ಶ್ರೀಲೀಲಾ (Sreeleela)  ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ಆದರೆ ಶ್ರೀಲೀಲಾ ತಾಯಿ ಸ್ವರ್ಣಲತಾ (Swarnalatha) ಅವರು ನೆಗೆಟಿವ್​ ಕಾರಣದಿಂದಲೇ ಆಗಾಗ ಸುದ್ದಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಅಲಯನ್ಸ್ ವಿವಿ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈಗ ಅವರ ಸಂಸಾರದಲ್ಲಿಯೇ ಕಿರಿಕ್​ ಆಗಿದ್ದು, ಆ ಪ್ರಕರಣವು ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಸ್ವರ್ಣಲತಾ ವಿರುದ್ಧ ಅವರ ಪತಿ ಸುಭಾಕರ್ ರಾವ್ (Subhakar Rao Surapaneni) ದೂರು ನೀಡಿದ್ದಾರೆ. ‘ನನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಬೀಗ ಒಡೆದು ನನ್ನ ಮನೆಗೆ ನುಗ್ಗಿದ್ದಾರೆ’ ಎಂದು ಆಡುಗೋಡಿ ಠಾಣೆಗೆ ನೀಡಿದ ದೂರಿನಲ್ಲಿ ಸುಭಾಕರ್ ರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಕೋರಮಂಗಲದ ಪ್ರೆಸ್ಟೀಜ್​​ ಅಪಾರ್ಟ್​​​ಮೆಂಟ್​​ನಲ್ಲಿರುವ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಅದನ್ನು ಸ್ವರ್ಣಲತಾಗೆ ಸುಭಾಕರ್ ನೀಡಿದ್ದರು. ಆದರೆ ನಂತರ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಆದಾಗ ಆ ಫ್ಲ್ಯಾಟ್​ಗೆ ಸುಭಾಕರ್ ಬೀಗ ಹಾಕಿದರು. ಅಕ್ಟೋಬರ್​ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್​ ಆರೋಪಿಸಿದ್ದಾರೆ. ಆಡುಗೋಡಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆಯೂ ಸ್ವರ್ಣಲತಾ ಕಿರಿಕ್​:

ಇದನ್ನೂ ಓದಿ
Image
ನಟಿ ಶ್ರೀಲೀಲಾ ಸೌಂದರ್ಯಕ್ಕೆ ಸೋತ ಫ್ಯಾನ್ಸ್; ಇಲ್ಲಿದೆ ಹೊಸ ಫೋಟೋಗಳು
Image
ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​
Image
‘ಬೈ ಟೂ ಲವ್​’ ನೋಡಿ ಪ್ರೇಕ್ಷಕರು ಎಮೋಷನಲ್​ ಆಗುತ್ತಿದ್ದಾರೆ: ಶ್ರೀಲೀಲಾ
Image
ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

ಸೆಪ್ಟೆಂಬರ್​ 10ರಂದು ಮಾರಕಾಸ್ತ್ರಗಳೊಂದಿಗೆ ಬೌನ್ಸರ್​​​ಗಳ ಜತೆ ಅಲಯನ್ಸ್ ವಿವಿಗೆ ನುಗ್ಗಿದ ಆರೋಪ ಸ್ವರ್ಣಲತಾ ಅವರ ಮೇಲಿತ್ತು. ಅಲಯನ್ಸ್ ಕಾಲೇಜು ಒಡೆತನದ ಕುರಿತು ಆಗಾಗ ಕಿರಿಕ್ ಆಗುತ್ತಿದೆ. ‘ಕೋರ್ಟ್ ಆದೇಶವಿದೆ,‌ ಕಾಲೇಜು‌ ನಮ್ಮದು ಅಂತ’ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಅವರು ಕಾಲೇಜಿಗೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಎಫ್​​ಐಆರ್ ಆಗಿತ್ತು. ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:02 pm, Wed, 5 October 22

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ