AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲ್ಲ ಧ್ರುವ ನಟನೆಯ ‘ಮಾರ್ಟಿನ್​’; ಕಾರಣವೇನು?

ಇನ್ನೂ 10-12 ದಿನಗಳ ಶೂಟಿಂಗ್ ಬಾಕಿ ಇದೆ. ಇದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈಗ ಅಂದುಕೊಂಡ ದಿನಾಂಕದಂದು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲ್ಲ ಧ್ರುವ ನಟನೆಯ ‘ಮಾರ್ಟಿನ್​’; ಕಾರಣವೇನು?
ವೈಭವಿ-ಧ್ರುವ
TV9 Web
| Edited By: |

Updated on: Aug 03, 2022 | 6:11 PM

Share

ಧ್ರುವ ಸರ್ಜಾ (Dhruva Sarja) ಅವರು ‘ಪೊಗರು’ ಬಳಿಕ ‘ಮಾರ್ಟಿನ್​’ ಸಿನಿಮಾ (Martin Movie) ಒಪ್ಪಿಕೊಂಡರು. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಎ.ಪಿ. ಅರ್ಜುನ್ ನಿರ್ದೇಶನ ಇರುವ ಈ ಚಿತ್ರಕ್ಕೆ ವಾಸವಿ ಎಂಟರ್ ಪ್ರೈಸಸ್ ಬ್ಯಾನರ್  ಅಡಿಯಲ್ಲಿ ಉದಯ್ ಕೆ.ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ. ಈ ಮೊದಲು ಸಿನಿಮಾ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಈಗ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಇದಕ್ಕೆ ಕಾರಣವನ್ನೂ ಚಿತ್ರತಂಡ ನೀಡಿದೆ.

ಧ್ರುವ ಸರ್ಜಾ ಅವರ ಹೊಸ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಆದರೆ, ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವ ಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿ ದೇವಮ್ಮ ಅವರು ನಿಧನ ಹೊಂದಿದರು. ಅವರು ನಿಧನ ಹೊಂದುವುದಕ್ಕೂ ಮೊದಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಕಾರಣಕ್ಕೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಧ್ರುವಗೆ ಸಾಧ್ಯವಾಗಿಲ್ಲ.

ಇನ್ನೂ 10-12 ದಿನಗಳ ಶೂಟಿಂಗ್ ಬಾಕಿ ಇದೆ. ಇದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈಗ ಅಂದುಕೊಂಡ ದಿನಾಂಕದಂದು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸ್ವಲ್ಪ ಬಾಕಿ ಉಳಿದುಕೊಂಡಿದೆ. ಇದಕ್ಕೆ ಒಂದಷ್ಟು ಸಮಯ ಬೇಕು. ಜತೆಗೆ ಸಿನಿಮಾ ಪ್ರಚಾರಕ್ಕೆ ಒಂದಷ್ಟು ಸಮಯ ಮೀಸಲಿಡಬೇಕು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಚಿತ್ರದ ಬಿಡುಗಡೆ ದಿನಾಂಕವನ್ನು ತಂಡದವರು ಮುಂದೂಡಿಕೊಂಡಿದ್ದಾರೆ.  ಶೀಘ್ರದಲ್ಲೇ ಹೊಸ ರಿಲೀಸ್​ ದಿನಾಂಕ ಘೋಷಣೆ ಆಗಲಿದೆ.

ಎ.ಪಿ. ಅರ್ಜುನ್ ಹಾಗೂ ಧ್ರುವ ಇಬ್ಬರೂ ‘ಅದ್ದೂರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗಿರುವುದಕ್ಕೆ ಸಾಕಷ್ಟು ನಿರೀಕ್ಷೆ ಇದೆ. ‘ಮಾರ್ಟಿನ್​’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹೊಸ ರಿಲೀಸ್ ದಿನಾಂಕ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಧ್ರುವ ಸರ್ಜಾ; ಇಲ್ಲಿದೆ ವಿಡಿಯೋ

ವೈಭವಿ ಶಾಂಡಿಲ್ಯ ಅವರು ‘ಮಾರ್ಟಿನ್​’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರು ಮೊದಲು ನಟಿಸಿದ್ದು ಮರಾಠಿಯ ‘ಎಕ್​ ಅಲ್ಬೇಲಾ’ ಸಿನಿಮಾದಲ್ಲಿ. ನಂತರ ಅವರಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಅವಕಾಶಗಳು ಬರಲಾರಂಭಿಸಿದವು. ‘ರಾಜ್​ ವಿಷ್ಣು’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. ಅದಲ್ಲದೇ, ಬಹುನಿರೀಕ್ಷಿತ ‘ಗಾಳಿಪಟ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದರ ಜತೆಗೆ ‘ಮಾರ್ಟಿನ್​​’ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

Follow Us
Web contact
Web contact

TV9 Kannada

Read More