ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್: ನಾಗಶೇಖರ್ ಹೊಸ ಸಿನಿಮಾಗೆ ಆಕರ್ಷಕ ಟೈಟಲ್
ಕನ್ನಡದ ಖ್ಯಾತ ನಿರ್ದೇಶಕ ನಾಗಶೇಖರ್ ಅವರು ಹೊಸ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಎಂದು ಈ ಸಿನಿಮಾಗೆ ಡಿಫರೆಂಟ್ ಆಗಿ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಈಗಾಗಲೇ ಸಿನಿಮಾಗೆ ಶೂಟಿಂಗ್ ಶುರುವಾಗಿದೆ.

ನಿರ್ದೇಶಕ ನಾಗಶೇಖರ್ (Nagashekar) ಅವರು ನಟನಾಗಿಯೂ ಬೇಡಿಕೆ ಹೊಂದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಿರ್ದೇಶಕನಾಗಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಮೈನಾ’, ‘ಮಾಸ್ತಿ ಗುಡಿ’, ‘ಸಂಜು ವೆಡ್ಸ್ ಗೀತಾ’ ಮುಂತಾದ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದಾರೆ. ಅದರ ನಡುವೆ ಅವರು ನಟನೆಯನ್ನೂ ಮುಂದುವರಿಸಿದ್ದಾರೆ. ಹೌದು, ನಾಗಶೇಖರ್ ಅವರು ಈಗ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಆ ಸಿನಿಮಾಗೆ ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ (Varthegalu Oduttiruva Shankar Nag) ಎಂದು ಆಕರ್ಷಕ ಶೀರ್ಷಿಕೆ ಇಡಲಾಗಿದೆ.
ಹಾಸ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಬಂದವರು ನಾಗಶೇಖರ್. 2002ರಲ್ಲಿ ‘ನಿನಗಾಗಿ’ ಸಿನಿಮಾ ಮೂಲಕ ಅವರು ನಟನೆ ಆರಂಭಿಸಿದರು. ನಂತರ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದರು. ಈಗ ನಾಗಶೇಖರ್ ಅವರು ಬಹಳ ದಿನಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಸಿನಿಮಾ ಸಖತ್ ಕೌತುಕ ಮೂಡಿಸಿದೆ.
‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಸಿನಿಮಾಗೆ ಜಿಯಾ ಉಲ್ಲಾ ಖಾನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ (ನವೆಂಬರ್ 11) ನಾಗಶೇಖರ್ ಅವರ ಹುಟ್ಟುಹಬ್ಬ ಆಚಿಸಲಾಯಿತು. ಅದೇ ದಿನ ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಸಿನಿಮಾಗೆ ಮುಹೂರ್ತ ಕೂಡ ನೆರವೇರಿತು. ಆರ್.ಆರ್. ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.
ಸರಳವಾಗಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ನಾಗಶೇಖರ್ ಅವರ ತಾಯಿ ಈ ಸಿನಿಮಾದ ಪ್ರಥಮ ದೃಶ್ಯಕ್ಕೆ ಕ್ಯಾಪ್ ಮಾಡಿ ಶುಭ ಹಾರೈಸಿದರು. ವಿ.ಎನ್. ಕಿರಣ್ (ವಾಸಣ್ಣ) ಅವರು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ‘ನಾಗರ: ಎ ರಾಮ್ ಚಿರು ಪ್ರೊಡಕ್ಷನ್ ಹೌಸ್’ ಬ್ಯಾನರ್ ಮೂಲಕ ರಾಮ್ ಚಿರು ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಚಿತ್ರಕ್ಕೆ ನವೆಂಬರ್ 15ರಿಂದಲೇ ಮೊದಲ ಹಂತರ ಚಿತ್ರೀಕರಣ ಆರಂಭ ಆಗಿದೆ. ಈ ಸಿನಿಮಾದಲ್ಲಿ ಹಿರೋ ಆಗಿ ನಟಿಸುವುದರ ಜೊತೆಗೆ ನಾಗಶೇಖರ್ ಅವರು ಸಹ-ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಲ್ಲದೇ, ಅವರೇ ಈ ಸಿನಿಮಾಗೆ ಸಂಗೀತ ನಿರ್ದೇಶನ ಕೂಡ ಮಾಡಲಿದ್ದರೆ. ಇನ್ನುಳಿದ ತಾಂತ್ರಿಕ ಬಳಗ ಹಾಗೂ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




