‘ಎಲ್ಲಾ ಬಿಟ್ಟು ಆದಿಮಾನವ ಆಗೋಣ’; ಚುನಾವಣೆ ಮುಗಿದ ಬಳಿಕ ಬದಲಾದ ಯೋಗರಾಜ್ ಭಟ್

ಮತದಾನ ಮುಗಿದ ಬಳಿಕ ‘ನಿಮ್ಮದು ಯಾವ ಪಕ್ಷ, ಯಾರಿಗೆ ವೋಟ್ ಮಾಡಿದ್ರಿ’ ಎಂದು ಕೇಳಲಾಗುತ್ತದೆ. ಇದೇ ವಿಚಾರ ಇಟ್ಟುಕೊಂಡು ನಿರ್ದೇಶಕ ಯೋಗರಾಜ್ ಭಟ್ ವಿಡಿಯೋ ಒಂದನ್ನು ಮಾಡಿದ್ದಾರೆ.

‘ಎಲ್ಲಾ ಬಿಟ್ಟು ಆದಿಮಾನವ ಆಗೋಣ’; ಚುನಾವಣೆ ಮುಗಿದ ಬಳಿಕ ಬದಲಾದ ಯೋಗರಾಜ್ ಭಟ್
ಯೋಗರಾಜ್ ಭಟ್
Follow us
ರಾಜೇಶ್ ದುಗ್ಗುಮನೆ
|

Updated on:May 11, 2023 | 7:22 AM

ವಿಧಾನಸಭೆ ಚುನಾವಣೆ ಮುಗಿದಿದೆ. ಹಲವು ದಿನಗಳ ಕಾಲ ಅಬ್ಬರದ ಪ್ರಚಾರ ಮಾಡಿದ್ದ ರಾಜಕೀಯ ನಾಯಕರು ಈಗ ವಿಶ್ರಾಂತಿಯಲ್ಲಿದ್ದಾರೆ. ಹಲವು ಸಿನಿಮಾ ಕಲಾವಿದರು ಈ ಬಾರಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು. ವಿವಿಧ ಹೀರೋಗಳು ಬೇರೆ ಬೇರೆ ಪಕ್ಷದ ಪರ ಪ್ರಚಾರ ನಡೆಸಿದ್ದರು. ಅವರು ಕೂಡ ಈಗ ವಿಶ್ರಾಂತಿಗೆ ತೆರಳಿದ್ದಾರೆ. ಮತದಾನ ಮುಗಿದ ಬಳಿಕ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ‘ನಿಮ್ಮದು ಯಾವ ಪಕ್ಷ, ಯಾರಿಗೆ ವೋಟ್ ಮಾಡಿದ್ರಿ’ ಎಂದು ಕೇಳಲಾಗುತ್ತದೆ. ಇದೇ ವಿಚಾರ ಇಟ್ಟುಕೊಂಡು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ವಿಡಿಯೋ ಒಂದನ್ನು ಮಾಡಿದ್ದಾರೆ. ಈ ವಿಡಿಯೋ ಸಖತ್ ಫನ್ನಿ ಆಗಿದೆ.

ಮಹಿಳೆ: ಸರ್ ವೋಟ್ ಹಾಕಿದ್ರಾ?

ಯೋಗರಾಜ್ ಭಟ್: ಹೌದು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.

ಮಹಿಳೆ: ನಿಮ್ಮದು ಯಾವ ಪಕ್ಷ, ಯಾರ ಪರ ನೀವು?

ಯೋಗರಾಜ್ ಭಟ್: ನಮ್ಮನ್ನು ಸಿನಿಮಾ ನಿರ್ದೇಶಕರು, ದಿಕ್ಕು ದರ್ಶಕರು ಅಂತಾರೆ. ಟಾಪ್​, ಬಾಟಮ್, ಫ್ರಂಟ್, ಬ್ಯಾಕ್, ಎಡ, ಬಲ ಎಲ್ಲಾ ಒಂದೇ ನಮಗೆ. ಮನುಷ್ಯತ್ವ ಮುಖ್ಯ. ಮನುಷ್ಯನ ದಿಕ್ಕು ತೆಗೆದುಕೊಂಡು ಏನು ಮಾಡೋಣ? ನಾವು ನಿರ್ಲಿಪ್ತ ನಾಗರೀಕರು.

ಮಹಿಳೆ: ಹಾಗಿದ್ರೆ ಎಲ್ಲಾ ರೌಂಡ್ ರೌಂಡ್​. ಇಡೀ ಲೋಕ ಎಲ್ಲಾ ರೌಂಡ್?

ಯೋಗರಾಜ್ ಭಟ್​: ಹೌದು. ನಮ್ಮದು 360 ಡಿಗ್ರಿ ಸಪೋರ್ಟ್​.

ಮಹಿಳೆ: ಸಿನಿಮಾದವರು ಅಲ್ಲಿ ಇಲ್ಲಿ ಪ್ರಚಾರಕ್ಕೆ ಹೋಗಿದಾರೆ ನೀವು ಹೋಗಿಲ್ವಾ?

ಯೋಗರಾಜ್ ಭಟ್: ಅದು ಅವರವರ ಆಸೆ, ಅವರವರ ಆಯ್ಕೆ. ಕೆಲವೊಂದನ್ನ ತಪ್ಪು ಸರಿ ಚರ್ಚೆ ಮಾಡೋಕೆ ಹೋಗಬಾರದು. ಕಾಸು ಖುಷಿ ಕೆಡಿಸ್ತು, ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಎನ್ನುವ ಗಾದೆ ಇದೆ.

ಮಹಿಳೆ: ಯಾವ ಪಾರ್ಟಿ ಬರಬಹುದು?

ಯೋಗರಾಜ್​ ಭಟ್: ಜಮಾನಾ ಫಾಸ್ಟ್​ ಆಗಿದೆ. ಮನುಷ್ಯ ಸ್ಪೀಡ್ ಮಾಡ್ತಾ ಇದಾನೆ. ಮುಂಚೆ 5 ದಿನದ ಟೆಸ್ಟ್​ ಕ್ರಿಕೆಟ್​ ಇತ್ತು. ಆಮೇಲೆ ಒಂದು ದಿನ ಆಡೋದೆ ಕಷ್ಟ ಆಯ್ತು. ಈಗ 20 ಓವರ್​ಗೆ ಬಂದಿದೆ. ಮುಂದೆ ಕೇವಲ ಹೈಲೈಟ್ಸ್ ನೋಡೋದು ಬರಬಹುದು. ಮಕ್ಕಳು ಏಳು ತಿಂಗಳಿಗೆ ಹುಟ್ತಿದಾರೆ. ಜನನ ಕೂಡ ಫಾಸ್ಟ್. 3 ಗಂಟೆ ಸಿನಿಮಾದಿಂದ 20 ಸೆಕೆಂಡ್​ ರೀಲ್ಸ್​ಗೆ ಬಂದಿದೆ. ಇನ್ನು ಐದು ವರ್ಷಕ್ಕೊಂದು ಎಲೆಕ್ಷನ್. ನಾಲ್ಕೈದು ಜನ ಕುರ್ಚಿ ಮೇಲೆ ಕೂತು ಏಳ್ತಾರೆ. ವರ್ಷಕ್ಕೆ ಒಬ್ಬರು ಕೂರ್ತಾರೆ ಅಂದ್ರೆ ವರ್ಷಕ್ಕೆ ಒಂದು ಎಲೆಕ್ಷನ್ ಲೆಕ್ಕವೇ ಆಯ್ತು. ಕಾಲನೇ ಫಾಸ್ಟ್ ಆಗಿದೆ. ಹೀಗಾಗಿ, ಕಾಲನ ಪ್ರಶ್ನೆ ಮಾಡಬಾರದು.

ಮಹಿಳೆ: ನೀವ್ ಏನಾಗ್ತೀರಾ?

ಯೋಗರಾಜ್ ಭಟ್: ಆದಿ ಮಾನವ ಆಗೋಣ ಅಂತಿದೀನಿ. ಎಲ್ಲದರಿಂದ ಮುಕ್ತ.

ಮಹಿಳೆಯ ಮಗಳು: ಈಗ ಹಾಗೇ ಇರೋದು. ಮತ್ತೇಕೆ ಆದಿಮಾನವ ಆಗಬೇಕು?

ಮುಕ್ತಾಯ..

Published On - 7:19 am, Thu, 11 May 23

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!