‘8 ದಿನದಲ್ಲಿ ಹೇಳ್ತೀನಿ ಎಂದವರ ಸುದ್ದಿಯೇ ಇರಲಿಲ್ಲ’; ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ಮಾತನಾಡಿದ್ದ ರಾಜ್​ಕುಮಾರ್  

Dr. Rajkumar Birth Anniversary: ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ರಾಜ್​ಕುಮಾರ್ ಅವರು ಚಿತ್ರರಂಗಕ್ಕೆ ಪರಿಚಯಗೊಂಡರು. ಅದಕ್ಕೂ ಮೊದಲು ಅವರು ರಂಗಭೂಮಿಯಲ್ಲಿದ್ದರು.

‘8 ದಿನದಲ್ಲಿ ಹೇಳ್ತೀನಿ ಎಂದವರ ಸುದ್ದಿಯೇ ಇರಲಿಲ್ಲ’; ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ಮಾತನಾಡಿದ್ದ ರಾಜ್​ಕುಮಾರ್  
ರಾಜ್​ಕುಮಾರ್
Follow us
|

Updated on:Apr 24, 2023 | 8:05 AM

ಡಾ.ರಾಜ್​ಕುಮಾರ್ ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಆದರೆ, ರಾಜ್​ಕುಮಾರ್ ಅವರನ್ನು ಸ್ಮರಿಸುವ ಕಾರ್ಯ ಈಗಲೂ ಆಗುತ್ತಿದೆ. ಅವರು ಹಾಕಿಕೊಟ್ಟ  ಮಾರ್ಗದರ್ಶನವನ್ನು ಈಗಲೂ ಅನೇಕರು ಪಾಲಿಸುತ್ತಿದ್ದಾರೆ. ರಾಜ್​ಕುಮಾರ್ (Rajkumar) ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ರಕ್ತದಾನ, ಅನ್ನದಾನ ಕೆಲಸಗಳು ಇಂದು ನಡೆಯುತ್ತಿವೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ರಾಜ್ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ರಾಜ್​ಕುಮಾರ್ ನಟಿಸಿದ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ (Bedara Kannappa). ಈ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ ಎನ್ನುವುದನ್ನು ಅವರು ಸಂದರ್ಶನ ಒಂದರಲ್ಲಿ ವಿವರಿಸಿದ್ದರು.

‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ರಾಜ್​ಕುಮಾರ್ ಅವರು ಚಿತ್ರರಂಗಕ್ಕೆ ಪರಿಚಯಗೊಂಡರು. ಅದಕ್ಕೂ ಮೊದಲು ಅವರು ರಂಗಭೂಮಿಯಲ್ಲಿದ್ದರು. ಗುಬ್ಬಿ ವೀರಣ್ಣ ಕಂಪನಿಯಲ್ಲಿ ರಾಜ್​ಕುಮಾರ್ ಕಲಾವಿದರಾಗಿದ್ದರು. ‘ಒಂದು ದಿನ ಸ್ಕ್ರೀನ್ ಟೆಸ್ಟ್ ಇದೆ ಎಂದು ಕರೆದರು. ನಾಟಕದ ಬಗ್ಗೆ ನಮಗೆ ಗೊತ್ತು. ಇಲ್ಲಿ (ನಾಟಕದಲ್ಲಿ) ಕೈ ಬೀಸಿಕೊಂಡು ಮಾತನಾಡಬಹುದು. ಆದರೆ, ಸಿನಿಮಾದಲ್ಲಿ ಹಾಗಿರಲ್ಲ. ನಿಗದಿತ ಜಾಗದಲ್ಲಿ, ಹೇಳಿದ್ದಷ್ಟನ್ನೇ ನಟನೆ ಮಾಡಿ ತೋರಿಸಬೇಕು. ನವರಸಗಳನ್ನು ಹೊರಹಾಕಬೇಕು. ನಾನು ನಟಿಸಿ ತೋರಿಸಿದೆ’ ಎಂದು ರಾಜ್​ಕುಮಾರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

‘8 ದಿನದಲ್ಲಿ ಫಲಿತಾಂಶ ತಿಳಿಸುತ್ತೇವೆ ಎಂದರು. 15 ದಿನ ಆದರೂ ಯಾವುದೇ ಸುದ್ದಿ ಇರಲಿಲ್ಲ. ನಂತರ ಒಂದು ಪತ್ರ ಬಂತು. ಸಿನಿಮಾ ಸ್ಕ್ರೀನ್​ಟೆಸ್ಟ್ ಓಕೆ ಆಗಿದೆ ಎಂದು ಲೆಟರ್​​ನಲ್ಲಿ ಬರೆದಿತ್ತು’ ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ಅವರು ಹೇಳಿಕೊಂಡಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಎಚ್​.ಎಲ್​.ಎನ್. ಸಿಂಹ ಅವರ ನಿರ್ದೇಶನ ಇತ್ತು. ಈ ಸಿನಿಮಾದಿಂದ ರಾಜ್​ಕುಮಾರ್ ಅವರ ಖ್ಯಾತಿ ಹೆಚ್ಚಿತು. ಬೇಡರ ಕಣ್ಣಪ್ಪನಾಗಿ ಅವರು ಗಮನ ಸೆಳೆದರು.

ಇದನ್ನೂ ಓದಿ:  ಡಾ. ರಾಜ್​ಕುಮಾರ್ ಪುಣ್ಯತಿಥಿ; ಅಣ್ಣಾವ್ರು ಎಂದಿಗೂ ಮರೆಯಾಗದ ನಕ್ಷತ್ರ

ರಾಜ್​ಕುಮಾರ್ ರಂಗಭೂಮಿ ಹಿನ್ನೆಲೆಯವರು. ಹೀಗಾಗಿ, ಅವರಿಗೆ ಪೌರಾಣಿಕ ಪಾತ್ರಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಪಾತ್ರ ಮಾಡುವಾಗ ಅವರು ನಟಿಸುತ್ತಿರಲಿಲ್ಲ, ಜೀವಿಸುತ್ತಿದ್ದರು. ‘ಶಬ್ದವೇದಿ’ ಅವರ ನಟನೆಯ ಕೊನೆಯ ಸಿನಿಮಾ . ಈ ಸಿನಿಮಾ ಕೂಡ ಎಲ್ಲರ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:18 am, Mon, 24 April 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ