ಒಟ್ಟೊಟ್ಟಿಗೆ ಬಾಲಿವುಡ್​ಗೆ ಹಾರಿದ ಕನ್ನಡದ ಮೂರು ಖ್ಯಾತ ನಿರ್ದೇಶಕರು

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾದ ಜೆಪಿ ತುಮಿನಾಡ್, ಎ. ಹರ್ಷ ಮತ್ತು ಸಚಿನ್ ರವಿ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಜೆಪಿ ಅಜಯ್ ದೇವಗನ್ ಜೊತೆ, ಹರ್ಷ ಮತ್ತು ಸಚಿನ್ ಅವರು ಟೈಗರ್ ಶ್ರಾಫ್ ಜೊತೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಒಟ್ಟೊಟ್ಟಿಗೆ ಬಾಲಿವುಡ್​ಗೆ ಹಾರಿದ ಕನ್ನಡದ ಮೂರು ಖ್ಯಾತ ನಿರ್ದೇಶಕರು
ಕನ್ನಡದ ನಿರ್ದೇಕರು

Updated on: Aug 22, 2025 | 11:44 AM

ಕನ್ನಡ ಚಿತ್ರರಂಗದ ವ್ಯಾಪ್ತಿ ಹಿರಿದಾಗುತ್ತಾ ಹೋಗುತ್ತಿದೆ. ಕನ್ನಡದ ತಂತ್ರಜ್ಞರು ಹಾಗೂ ಕಲಾವಿದರು ಪರಭಾಷೆಗೆ ತೆರಳಿ ಹೆಸರು ಮಾಡುತ್ತಿದ್ದಾರೆ. ನಟಿ ಶ್ರೀಲೀಲಾ, ರಶ್ಮಿಕಾ ಮಂದಣ್ಣ, ನಿರ್ದೇಶಕ ಪ್ರಶಾಂತ್ ನೀಲ್ ಇದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಈಗ ಕನ್ನಡದ ಮೂವರು ನಿರ್ದೇಶಕರು ಕೆಲವೇ ಸಮಯದ ಅಂತರದಲ್ಲಿ ಬಾಲಿವುಡ್​ಗೆ ಹಾರಿದ್ದಾರೆ. ಈ ವಿಚಾರ ಕೇಳಿ ಕೆಲವರಿಗೆ ಖುಷಿ ಆಗಿದೆ, ಇನ್ನೂ ಕೆಲವರಿಗೆ ನಮ್ಮ ಪ್ರತಿಭೆಗಳು ಬಾಲಿವುಡ್ (Bollywood) ಪಾಲಾಗುತ್ತಿವೆಯಲ್ಲ ಎಂದು ಬೇಸರ ಆಗಿದೆ.

ಜೆಪಿ ತುಮಿನಾಡ್

ಜೆಪಿ ತುಮಿನಾಡ್ ಅವರು ‘ಸು ಫ್ರಮ್ ಸೋ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಇತ್ತೀಚೆಗೆ ಅವರು ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿನಿಮಾ ಒಂದರ ಬಗ್ಗೆ ಮಾತುಕತೆ ನಡೆದಿದೆಯಂತೆ. ಅಜಯ್ ದೇವಗನ್ ಅವರು ಚಿತ್ರದ ಕಥೆಯ ಎಳೆ ಹೇಳಿದ್ದು, ಸಂಪೂರ್ಣ ಸ್ಕ್ರಿಪ್ಟ್​ ಜೊತೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ, ಬಾಲಿವುಡ್​ನಲ್ಲಿ ಜೆಪಿಗೆ ಮೊದಲ ಆಫರ್ ಸಿಕ್ಕಂತೆ ಆಗಲಿದೆ. ಈ ಚಿತ್ರಕ್ಕೆ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎಂದು ವರದಿ ಆಗಿದೆ.

ಎ. ಹರ್ಷ

ಶಿವರಾಜ್​ಕುಮಾರ್ ಫೇವರಿಟ್ ನಿರ್ದೇಶಕರಲ್ಲಿ ಎ.ಹರ್ಷ ಕೂಡ ಒಬ್ಬರು. ಈ ಮೊದಲು ‘ಭಜರಂಗಿ’, ‘ಭಜರಂಗಿ 2’ ರೀತಿಯ ಸಿನಿಮಾಗಳನ್ನು ನೀಡಿದ್ದರು ಎ. ಹರ್ಷ. ಅವರು ಈಗ ಕನ್ನಡ ಬಿಟ್ಟು ಬಾಲಿವುಡ್​ಗೆ ಹಾರಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಭಾಗಿ 4’ ಚಿತ್ರವನ್ನು ಇವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಈ ಸಿನಿಮಾ ಹಿಟ್ ಆದರೆ ಬಾಲಿವುಡ್​ನಲ್ಲಿ ಹರ್ಷ ಬೇಡಿಕೆ ಹೆಚ್ಚಲಿದೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ​ ಋಣ ತೀರಿಸಿದ ರಾಜ್
ನಟ ಚಿರಂಜೀವಿ ಅದೆಷ್ಟು ಶ್ರೀಮಂತ ನೋಡಿ; ಪ್ರೈವೆಟ್ ಜೆಟ್ ಒಡೆಯ
ದಳಪತಿ ವಿಜಯ್ ಸಮಾವೇಶಕ್ಕೆ ಸೇರಿದ ಜನರ ಸಂಖ್ಯೆ ನೋಡಿ; ಅಬ್ಬಬ್ಬಾ ಇಷ್ಟೊಂದಾ
ಸ್ಪರ್ಧಿಸೋ ಕ್ಷೇತ್ರದ ಹೆಸರು ಘೋಷಿಸಿದ ದಳಪತಿ ವಿಜಯ್; ಮೈತ್ರಿ ನಿಲುವೇನು?|

ಇದನ್ನೂ ಓದಿ: ಬಾಲಿವುಡ್​ಗೆ ಹಾರಲಿರುವ ‘ಸು ಫ್ರಂ ಸೋ’ ನಿರ್ದೇಶಕ, ಸ್ಟಾರ್ ನಟನೊಟ್ಟಿಗೆ ಸಿನಿಮಾ

ಸಚಿನ್ ರವಿ

ಕನ್ನಡದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮಾಡಿದ್ದು ಸಚಿನ್ ರವಿ. ಈ ಮೊದಲು ಅವರು ರಕ್ಷಿತ್ ಅವರ 7 ಆಡ್ಸ್​ಗಳಲ್ಲಿ ಇವರೂ ಒಬ್ಬರು. ಅಂದರೆ ರಕ್ಷಿತ್ ಸಿನಿಮಾಗಳ ಏಳು ಬರಹಗಾರರಲ್ಲಿ ಸಚಿನ್ ಕೂಡ ಒಬ್ಬರಾಗಿದ್ದರು. ‘ಅವನೇ ಶ್ರೀಮನ್ನಾರಾಯಣ’ ಬಳಿಕ ಅವರು ಬಾಲಿವುಡ್​ಗೆ ಹಾರಿದ್ದಾರೆ. ಶಾಹಿದ್ ಕಪೂರ್ ಜೊತೆ ಸಚಿನ್ ಸಿನಿಮಾ ಮಾಡಬೇಕಿತ್ತು. ಆದರೆ, ಈ ಸಿನಿಮಾ ಸೆಟ್ಟೇರಿಲ್ಲ. ಈಗ ಅವರು ಬಾಲಿವುಡ್​ನಲ್ಲಿ ಟೈಗರ್ ಶ್ರಾಫ್ ಜೊತೆ ಸಿನಿಮಾ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.