ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ನಡೆಯೋದು ಯಾವಾಗ?

Tollywood Reunion: ತೆಲಂಗಾಣ ಸರ್ಕಾರದ ‘ಗದ್ದರ್ ಅವಾರ್ಡ್’ ಘೋಷಣೆ ಮಾಡಿದೆ. ಇದು ತೆಲುಗು ಚಿತ್ರರಂಗದಲ್ಲಿ ಒಂದು ದೊಡ್ಡ ಸಂಭ್ರಮವನ್ನು ತಂದಿದೆ. ಇದರಿಂದ ಸ್ಯಾಂಡಲ್‌ವುಡ್‌ನಲ್ಲಿಯೂ ಇಂತಹ ಒಂದು ಏಕತಾ ಕಾರ್ಯಕ್ರಮದ ಅಗತ್ಯ ಇದೆ ಎಂದು ಅನೇಕರು ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿನ ಒಡಕು ಇದರಿಂದ ಸರಿ ಹೊಂದಬಹುದು.

ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ನಡೆಯೋದು ಯಾವಾಗ?
ಸ್ಯಾಂಡಲ್​ವುಡ್​-ಟಾಲಿವುಡ್​

Updated on: May 31, 2025 | 7:06 AM

14 ವರ್ಷಗಳ ಬಳಿಕ ತೆಲಂಗಾಣ ಸರ್ಕಾರ  ‘ಗದ್ದರ್’ ಅವಾರ್ಡ್​ನ (Gaddar Award) ಘೋಷಣೆ ಮಾಡಿದೆ. ಅಂದರೆ ತೆಲುಗು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ನೀಡುವ ಅವಾರ್ಡ್ ಇದಾಗಿದೆ. ವಿವಿಧ ಕಲಾವಿದರಿಗೆ ಈ ಅವಾರ್ಡ್ ಸಿಕ್ಕಿದೆ. ಜೂನ್ 14ರಂದು ಪ್ರಶಸ್ತಿ ಪ್ರಧಾನ ಕಾರ್ಯ ನಡೆಯಲಿದೆ. ಈ ಅವಾರ್ಡ್​ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲಾ ಟಾಲಿವುಡ್ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಹಾಗಾದರೆ ಸ್ಯಾಂಡಲ್​ವುಡ್​ನಲ್ಲಿ ಈ ರೀತಿ ನಡೆಯೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

ಟಾಲಿವುಡ್​ನಲ್ಲಿ ಕಳೆದ 14 ವರ್ಷಗಳಿಂದ ಹೀಗೊಂದು ಅವಾರ್ಡ್ ಕಾರ್ಯಕ್ರಮ ನಡೆದೇ ಇರಲಿಲ್ಲ ಎನ್ನಬಹುದು. ಈ ಮೊದಲು ಸೈಮಾ ರೀತಿಯ ಅವಾರ್ಡ್​ ಫಂಕ್ಷನ್​ಗಳು ನಡೆದಿವೆ. ಆದರೆ, ಈ ಸಂದರ್ಭದಲ್ಲಿ ಅಲ್ಲಿ ಎಲ್ಲಾ ಕಲಾವಿದರ ಆಗಮನ ಆಗುತ್ತಿರಲಿಲ್ಲ. ಇದು ರಾಜ್ಯ ಪ್ರಶಸ್ತಿ ಆಗಿರುವುದರಿಂದ ಎಲ್ಲರೂ ಒಟ್ಟಾಗಿ ಸೇರುವ ಸಾಧ್ಯತೆ ಇದೆ.

ಇನ್ನು ಕನ್ನಡದಲ್ಲಿಯೂ ಈ ರೀತಿಯ ರೀ-ಯೂನಿಯನ್ ನಡೆಯದೇ ಸಾಕಷ್ಟು ವರ್ಷಗಳು ಕಳೆದಿವೆ. ಟಾಲಿವುಡ್​ನಲ್ಲಿ ಆದಂತೆ ಸ್ಯಾಂಡಲ್​ವುಡ್​ನವರಿಗೂ ಸೈಮಾ ರೀತಿಯ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದ ವೇಳೆ ಎಲ್ಲಾ ಸ್ಟಾರ್ ಹೀರೋಗಳು ಆಗಮಿಸುವುದಿಲ್ಲ. ಇನ್ನು ಕರ್ನಾಟಕ ರಾಜ್ಯ ಪ್ರಶಸ್ತಿ ಕಾರ್ಯಕ್ರಮ ಕೂಡ ಸರಿಯಾಗಿ ಆಯೋಜನೆ ಆಗಿಲ್ಲ. ಕೆಲವರಿಗೆ ಅವಾರ್ಡ್ ನೀಡಿದ ಬಗ್ಗೆಯೇ ಅಪಸ್ವರ ಇದೆ. ಹೀಗಾಗಿ, ರೀ-ಯೂನಿಯನ್ ಕಷ್ಟ.

ಇದನ್ನೂ ಓದಿ
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಸ್ಯಾಂಡಲ್​ವುಡ್​ನಲ್ಲಿ ಒಗ್ಗಟ್ಟು ಕಡಿಮೆ ಆಗುತ್ತಿದೆ ಎನ್ನುವ ಆರೋಪ ಜೋರಾಗಿದೆ. ಹೌದು, ಸ್ಯಾಂಡ್​ಲ್​ವುಡ್​ನಲ್ಲಿ ಒಬ್ಬ ಹೀರೋ ವೇದಿಕೆ ಮೇಲೆ ಇದ್ದರೆ ಮತ್ತೋರ್ವ ಹೀರೋ ವೇದಿಕೆ ಏರುವುದಿಲ್ಲ ಎನ್ನುವ ಪರಿಸ್ಥಿತಿ ಇದೆ ಎಂಬುದು ಕೆಲವರ ಅಭಿಪ್ರಾಯ. ಇರುವುದೇ ಕೆಲವೇ ಸ್ಟಾರ್ಸ್​ಗಳು. ಅವರು ಒಟ್ಟಾಗಿ ಚಿತ್ರರಂಗದ ಪರವಾಗಿ ನಿಲ್ಲುವ ಅಗತ್ಯವಿದೆ. ಇದಕ್ಕೆ ಒಂದೊಳ್ಳೆಯ ರೀ-ಯೂನಿಯನ್ ಅಗತ್ಯವಿದೆ. ಈ ವೇಳೆ ಮಾತುಕತೆಗಳ ಮೂಲಕ ಒಂದಷ್ಟು ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ತೆಗಳಿದವರಿಂದಲೇ ಸನ್ಮಾನ, ಅಲ್ಲು ಅರ್ಜುನ್​ಗೆ ಪ್ರಶಸ್ತಿ ಘೋಷಿಸಿದ ತೆಲಂಗಾಣ ಸರ್ಕಾರ

ಸದ್ಯ ಕಮಲ್ ಹಾಸನ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿ ತಮ್ಮ ಅಜ್ಞಾನ ತೋರಿಸಿದ್ದಾರೆ. ಈ ಕಾರಣಕ್ಕೆ ಅವರು ಹಲವರ ಟೀಕೆಗೆ ಗುರಿಯಾಗಿದ್ದಾರೆ. ಕನ್ನಡದ ಕೆಲವು ಸೆಲೆಬ್ರಿಟಿಗಳು ಅವರ ಹೇಳಿಕೆಯನ್ನು ತೆಗಳಿದ್ದಾರೆ. ಇನ್ನೂ ಕೆಲವರು ಈ ವಿಚಾರದಲ್ಲಿ ಮೌನ ತಾಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.