ಗ್ಯಾಂಗ್​ಸ್ಟರ್​ ಕಥೆಯ ‘ಕೆಂಡ’ ಚಿತ್ರಕ್ಕೆ ಬಂಡವಾಳ ಹೂಡಿದ ‘ಗಂಟುಮೂಟೆ’ ನಿರ್ದೇಶಕಿ ರೂಪಾ ರಾವ್​

ಸಾಮಾನ್ಯವಾಗಿ ಮಹಿಳೆಯರು ನಿರ್ಮಾಣ ಮಾಡುವ ಸಿನಿಮಾ ಎಂದರೆ ಅದರ ಕಥೆ ಬೇರೆಯದೇ ರೀತಿ ಇರುತ್ತದೆ. ಅವರ ಸಂಸ್ಥೆಯಿಂದ ಭೂಗತ ಲೋಕದ ಕಥೆಗಳು ಹೊರಬರುವುದು ವಿರಳ. ರೂಪಾ ರಾವ್​ ಅವರು ಅಂಥ ಅಪರೂಪದ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ‘ಕೆಂಡ’ ಸಿನಿಮಾದಲ್ಲಿ ಪಕ್ಕಾ ಗ್ಯಾಂಗ್​ಸ್ಟರ್​ ಕಹಾನಿ ಇರಲಿದೆ.

ಗ್ಯಾಂಗ್​ಸ್ಟರ್​ ಕಥೆಯ ‘ಕೆಂಡ’ ಚಿತ್ರಕ್ಕೆ ಬಂಡವಾಳ ಹೂಡಿದ ‘ಗಂಟುಮೂಟೆ’ ನಿರ್ದೇಶಕಿ ರೂಪಾ ರಾವ್​
ರೂಪಾ ರಾವ್, ‘ಕೆಂಡ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Nov 09, 2023 | 4:33 PM

ಚಿತ್ರರಂಗದಲ್ಲಿ ಪುರುಷರ ಪ್ರಾಬಲ್ಯ ಸಾಕಷ್ಟು ಇದೆ ಎಂಬುದು ಗೊತ್ತಿರುವ ವಿಷಯ. ನಿರ್ದೇಶನ ಮತ್ತು ನಿರ್ಮಾಣದಲ್ಲಂತೂ ಪುರುಷರೇ ಹಿಡಿತ ಸಾಧಿಸಿದ್ದಾರೆ. ಅದರ ನಡುವೆಯೂ ಕೆಲವು ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ನಿರ್ದೇಶನ ಹಾಗೂ ನಿರ್ಮಾಣ ಎರಡರಲ್ಲೂ ತೊಡಗಿಕೊಂಡ ಸ್ತ್ರೀಯರ ಸಂಖ್ಯೆ ಕಡಿಮೆ. ಅಂಥವರ ಸಾಲಿನಲ್ಲಿ ರೂಪಾ ರಾವ್​ (Roopa Rao) ಕೂಡ ಇದ್ದಾರೆ. ಈ ಹಿಂದೆ ‘ಗಂಟುಮೂಟೆ’ (Gantumoote) ಸಿನಿಮಾದ ಮೂಲಕ ನಿರ್ದೇಶಕಿಯಾಗಿ ರೂಪಾ ರಾವ್​ ಗಮನ ಸೆಳೆದಿದ್ದರು. ಈಗ ಅವರು ‘ಕೆಂಡ’ (Kenda) ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ವೃತ್ತಿಜೀವನದಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಗ್ಯಾಂಗ್​ಸ್ಟರ್​ ಕಹಾನಿ ಇರಲಿದೆ.

‘ಕೆಂಡ’ ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಒಂದಷ್ಟು ಕಾರಣಗಳಿವೆ. ಈ ಸಿನಿಮಾಗೆ ಸಹದೇವ್ ಕೆಲವಡಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪಾತ್ರಗಳನ್ನು ಪರಿಚಯ ಮಾಡಿಸಲು ಒಂದಷ್ಟು ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ‘ಗಂಟುಮೂಟೆ’ ಸಿನಿಮಾದಲ್ಲಿ ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಜೊತೆಯಾಗಿ ಕೆಲಸ ಮಾಡಿದ್ದರು. ‘ಗಂಟೂಮೂಟೆ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಸಹದೇವ್​ ಈಗ ‘ಕೆಂಡ’ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ. ಅವರ ಪ್ರತಿಭೆ ಮೇಲೆ ನಂಬಿಕೆ ಇಟ್ಟಿರುವ ರೂಪಾ ರಾವ್​ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಇದನ್ನೂ ಓದಿ: ‘ಕೆಂಡ’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಹೊಸ ವಿಡಿಯೋ ಬಿಡುಗಡೆ; ಇಲ್ಲಿದೆ ಝಲಕ್​

ಸಾಮಾನ್ಯವಾಗಿ ಮಹಿಳೆಯರು ನಿರ್ಮಾಣ ಮಾಡುವ ಸಿನಿಮಾ ಎಂದರೆ ಅದರ ಕಥೆ ಬೇರೆಯದೇ ರೀತಿ ಇರುತ್ತದೆ. ಅವರ ನಿರ್ಮಾಣ ಸಂಸ್ಥೆಯಿಂದ ಭೂಗತಲೋಕದ ಕಥೆಗಳು ಹೊರಬರುವುದು ವಿರಳ. ರೂಪಾ ರಾವ್​ ಅವರ ಅಂಥ ಅಪರೂಪದ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ‘ಕೆಂಡ’ ಸಿನಿಮಾದಲ್ಲಿ ಪಕ್ಕಾ ಗ್ಯಾಂಗ್​ಸ್ಟರ್​ ಕಹಾನಿ ಇರಲಿದೆ. ಅದರ ಝಲಕ್​ ತೋರಿಸುವ ರೀತಿಯಲ್ಲಿ ಕ್ಯಾರೆಕ್ಟರ್​ ಪೋಸ್ಟರ್​ಗಳು ಅನಾವರಣ ಆಗಿವೆ. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಾಗಿದೆ.

ಇದನ್ನೂ ಓದಿ: ಆಟೋ ಓಡಿಸಿ ಪ್ರಚಾರ ಮಾಡಿದ ‘ಗರಡಿ’ ಚಿತ್ರದ ಯಶಸ್ ಸೂರ್ಯ-ಸೋನಲ್

ಒಂದಷ್ಟು ವಿಶೇಷತೆಗಳನ್ನು ಒಳಗೊಂಡಿರುವ ‘ಕೆಂಡ’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗುವುದು. ಅದಕ್ಕಾಗಿ ಚಿತ್ರತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವರು ಚಿತ್ರೋತ್ಸವಗಳಲ್ಲಿ ‘ಕೆಂಡ’ ಸಿನಿಮಾ ಪ್ರದರ್ಶನ ಕಂಡಿದೆ. ಇದರ ನಡುವೆ ರೂಪಾ ರಾವ್ ಅವರು ತಮ್ಮ ನಿರ್ದೇಶನದ ಕಸುಬನ್ನು ನಿಲ್ಲಿಸಿಲ್ಲ. ಕ್ರಿಯಾಶೀಲರಾಗಿರುವ ಅವರು ‘ಆಸ್ಮಿನ್’ ಶೀರ್ಷಿಕೆಯ ಸಿನಿಮಾವೊಂದರ ನಿರ್ದೇಶನ ಮಾಡಿದ್ದಾರೆ. ನೇರವಾಗಿ ಒಟಿಟಿ ಮೂಲಕ ಆ ಸಿನಿಮಾ ಬಿಡುಗಡೆ ಆಗಲಿದೆ. ‘ಕೆಂಡ’ ರಿಲೀಸ್​ ಆದ ಬಳಿಕ ರೂಪಾ ರಾವ್ ನಿರ್ದೇಶನದ ಹೊಸ ಸಿನಿಮಾದ ಕೆಲಸಗಳಿಗೆ ಚಾಲನೆ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ