‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ 12 ದಿನಗಳಲ್ಲಿ ಗಳಿಸಿದ ಹಣ ಎಷ್ಟು? ಗೆದ್ದ ಗಣೇಶ್

| Updated By: Digi Tech Desk

Updated on: Aug 27, 2024 | 9:33 AM

Krishnam Pranaya Sakhi Box Office Collection: ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಿನಿಮಾದ ಲೆಕ್ಕದ ಬಗ್ಗೆ sacnilk ವರದಿ ಮಾಡಿದೆ.

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ 12 ದಿನಗಳಲ್ಲಿ ಗಳಿಸಿದ ಹಣ ಎಷ್ಟು? ಗೆದ್ದ ಗಣೇಶ್
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ 12 ದಿನಗಳಲ್ಲಿ ಗಳಿಸಿದ ಹಣ ಎಷ್ಟು? ಗೆದ್ದ ಗಣೇಶ್
Follow us on

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಗಣೇಶ್, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ, ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಶ್ರೀನವಾಸ ಮೂರ್ತಿ, ಗಿರಿ ಶಿವಣ್ಣ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಯಿತು. ಈ ಸಿನಿಮಾ 12 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಬೀಗಿದೆ. ಈ ಚಿತ್ರದಿಂದ ನಿರ್ಮಾಪಕರು ಲಾಭ ಕಂಡಿದ್ದಾರೆ.

‘ಕೃಷ್ಣಂ ಪ್ರಣಯ ಸಖಿ’ 12 ದಿನಗಳಲ್ಲಿ 12.74 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಈ ವಿಚಾರ ಕೇಳಿ ಗಣೇಶ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರ ವೀಕೆಂಡ್​ನಲ್ಲಿ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಿಂದ ಗಣೇಶ್ ಅವರು ಗೆದ್ದು ಬೀಗಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಇತ್ತು. ಹೀಗಾಗಿ, ಮೊದಲ ದಿನವೇ ಸರ್ಕಾರಿ ರಜೆ ಇದ್ದಿದ್ದರಿಂದ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತು. ಬಾಯಿಮಾತಿನ ಪ್ರಚಾರವೂ ಚಿತ್ರಕ್ಕೆ ಸಿಕ್ಕಿದೆ.

ಗಣೇಶ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಅವರಿಗೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಕೊನೆಗೂ ಸಿನಿಮಾ ಗೆಲುವು ಕಂಡಿದೆ. ವಾರದ ದಿನಗಳಲ್ಲಿ ಸಾಧಾರಣ ಗಳಿಕೆ ಮಾಡುತ್ತಿರುವ ಈ ಸಿನಿಮಾ, ವೀಕೆಂಡ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ವಾರವೂ ಉತ್ತಮ ಗಳಿಕೆ ಆಗೋ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್​ಗೆ ಮರುಳಾದ ಪ್ರೇಕ್ಷಕರು

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಆಗಿದೆ. ಕಥೆ ಹಳೆಯದೇ ಆದರೂ ಅದನ್ನು ಹೇಳಿರುವ ರೀತಿ ಬೇರೆ ರೀತಿಯಲ್ಲಿದೆ. ಕಾಮಿಡಿಯಲ್ಲೂ ಹೊಸತನ ಕೂಡಿರುವುದರಿಂದ ಫ್ಯಾನ್ಸ್ ಚಿತ್ರವನ್ನು ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Tue, 27 August 24