ನಟ ದುನಿಯಾ ವಿಜಯ್ಗೆ (Duniya Vijay Birthday) ಇಂದು (ಜನವರಿ 20) ಹುಟ್ಟು ಹಬ್ಬದ ಸಂಭ್ರಮ. ಸ್ಯಾಂಡಲ್ವುಡ್ನಲ್ಲಿ (Sandalwood) ಹಲವು ವರ್ಷಗಳಿಂದ ಸ್ಟಾರ್ ಆಗಿ ಮಿಂಚುತ್ತಿರುವ ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಜನ್ಮದಿನದ ಶುಭಾಶಯ ಸಂದೇಶ ಬಂದಿದೆ. ಟ್ವಿಟರ್ನಲ್ಲಿ ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಯ್ಯ ನಟನೆಯ ಮುಂದಿನ ಚಿತ್ರದಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರತಂಡದಿಂದ ಪೋಸ್ಟರ್ ರಿಲೀಸ್ ಆಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ದುನಿಯಾ ವಿಜಯ್ ಈ ಮೊದಲೇ ತಿಳಿಸಿದ್ದಾರೆ. ಹೀಗಾಗಿ, ಅಭಿಮಾನಿಗಳಿಗೆ ಈ ವಿಚಾರದಲ್ಲಿ ಕೊಂಚ ನಿರಾಸೆ ಆಗಿದೆ.
ದುನಿಯಾ ವಿಜಯ್ಗೆ ಈ ವರ್ಷದ ಬರ್ತ್ಡೇ ವಿಶೇಷ ಆಗಬೇಕಿತ್ತು. ಕಳೆದ ವರ್ಷ ತೆರೆಗೆ ಬಂದಿರುವ ‘ಸಲಗ’ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ ವಿಜಯ್. ನಿರ್ದೇಶಕನಾಗಿ ದುನಿಯಾ ವಿಜಯ್ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ರೌಡಿಸಂ ಕಥೆಯನ್ನು ಅವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು ಅವರು. ಹೀಗಾಗಿ, ಅಭಿಮಾನಿಗಳು ಖುಷಿಪಟ್ಟಿದ್ದರು. ಹೀಗಾಗಿ, ಅವರ ಬರ್ತ್ಡೇ ಜೋರಾಗಿ ಇರಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಸಾಕಷ್ಟು ಕಹಿ ಘಟನೆಗಳು ನಡೆದವು.
ಸ್ಯಾಂಡಲ್ವುಡ್ನ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ ತಿಂಗಳಲ್ಲಿ ಮೃತಪಟ್ಟರು. ಇದು ಇಡೀ ಚಿತ್ರರಂಗಕ್ಕೆ ನೋವು ತಂದಿದೆ. ದುನಿಯಾ ವಿಜಯ್ ಅವರಿಗೂ ಈ ವಿಚಾರ ದುಃಖ ನೀಡಿದೆ. ಕಳೆದ ವರ್ಷ ದುನಿಯಾ ವಿಜಯ್ ಅವರ ತಂದೆ, ತಾಯಿ ಇಬ್ಬರೂ ಮೃತಪಟ್ಟರು. ದುನಿಯಾ ವಿಜಯ್ಗೆ ಬೆನ್ನೆಲುಬಾಗಿದ್ದ ಇಬ್ಬರನ್ನೂ ಒಂದೇ ವರ್ಷ ಕಳೆದುಕೊಂಡಿದ್ದು ಅವರಿಗೆ ಸಾಕಷ್ಟು ನೋವು ತಂದಿದೆ. ಈ ಮೂರು ಪ್ರಮುಖ ಕಾರಣಕ್ಕೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
ದೇಶದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸೋಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಹಲವು ಕಠಿಣ ನಿಯಮ ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಮನೆಯ ಬಳಿ ಸೇರಿದರೆ ಕೊವಿಡ್ ಹೆಚ್ಚುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮನೆಯ ಸಮೀಪ ಅಭಿಮಾನಿಗಳು ಬರದಂತೆ ದುನಿಯಾ ವಿಜಯ್ ಕೋರಿಕೊಂಡಿದ್ದಾರೆ. ಈ ಮೂಲಕ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಬಾಲಯ್ಯ 107ನೇ ಚಿತ್ರಕ್ಕೆ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿದೆ. ಇದರ ಜತೆಗೆ ಯಾವುದಾದರೂ ಹೊಸ ಸಿನಿಮಾ ಘೋಷಣೆ ಆದರೆ, ಅಭಿಮಾನಿಗಳ ಖುಷಿ ದುಪ್ಪಟ್ಟಾಗಲಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ದುನಿಯಾ ವಿಜಯ್ ಭಾಗಿ; ನೀರಿಗಾಗಿ ಹೋರಾಟಕ್ಕೆ ‘ಸಲಗ’ ಬೆಂಬಲ
‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್ಡೇ ಆಚರಣೆಗೆ ದುನಿಯಾ ವಿಜಯ್ ಬ್ರೇಕ್