‘ದೇವ್ರಾಣೆ ನಾಯಿ ಕೊಟ್ಟು ಪಟಾಯಿಸಿಲ್ಲ’; ಹರಿಪ್ರಿಯಾ ಜತೆಗಿನ ಲವ್​ ಸ್ಟೋರಿ ಬಿಚ್ಚಿಟ್ಟ ವಸಿಷ್ಠ ಸಿಂಹ

| Updated By: ರಾಜೇಶ್ ದುಗ್ಗುಮನೆ

Updated on: Jan 12, 2023 | 7:13 AM

Vasishta Simha-Haripriya: ವಸಿಷ್ಠ ಸಿಂಹ ಅವರು ನಾಯಿ ಕೊಟ್ಟು ಹರಿಪ್ರಿಯಾಗೆ ಪ್ರೀತಿ ಹುಟ್ಟುವಂತೆ ಮಾಡಿದರು ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಇದನ್ನು ಈ ಜೋಡಿ ಅಲ್ಲಗಳೆದಿದೆ.

‘ದೇವ್ರಾಣೆ ನಾಯಿ ಕೊಟ್ಟು ಪಟಾಯಿಸಿಲ್ಲ’; ಹರಿಪ್ರಿಯಾ ಜತೆಗಿನ ಲವ್​ ಸ್ಟೋರಿ ಬಿಚ್ಚಿಟ್ಟ ವಸಿಷ್ಠ ಸಿಂಹ
ವಸಿಷ್ಠ ಸಿಂಹ-ಹರಿಪ್ರಿಯಾ
Follow us on

ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ಇವರ ನಿಶ್ಚಿತಾರ್ಥ ಕೂಡ ನೆರವೇರಿದೆ. ಜನವರಿ 26ರಂದು ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರುತ್ತಿದೆ. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ವಸಿಷ್ಠ ಸಿಂಹ ಅವರು ನಾಯಿ ಕೊಟ್ಟು ಹರಿಪ್ರಿಯಾಗೆ (Haripriya) ಪ್ರೀತಿ ಹುಟ್ಟುವಂತೆ ಮಾಡಿದರು ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಇದನ್ನು ಈ ಜೋಡಿ ಅಲ್ಲಗಳೆದಿದೆ.

‘ಇಬ್ಬರೂ ಕಷ್ಟಪಟ್ಟಿದ್ದೇವೆ. ಗೆಳೆತನದಿಂದ ಪರಸ್ಪರ ಇಬ್ಬರ ಕಷ್ಟಗಳು ಗೊತ್ತಾದವು. ಪರಸ್ಪರ ನಾವು ಹೆಗಲುಕೊಟ್ಟೆವು. ನಾನು ಚಿಕ್ಕವಯಸ್ಸಿನಲ್ಲಿ ತಾಯಿನ ಕಳೆದುಕೊಂಡೆ. ಅವರು ತಂದೆಯನ್ನು ಕಳೆದುಕೊಂಡಿದ್ದರು. ನಾನು ನನ್ನ ತಾಯಿಯನ್ನು ಇವರಲ್ಲಿ ಕಂಡೆ’ ಎಂದಿದ್ದಾರೆ ವಸಿಷ್ಠ ಸಿಂಹ. ‘ನಾನು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಯಲ್ಲಿರುವ ಅನೇಕ ಗುಣಗಳು ಸಿಂಹನಲ್ಲಿದೆ’ ಎಂದರು ಹರಿಪ್ರಿಯಾ.

ಹಾಗಾದರೆ ವಸಿಷ್ಠ ಸಿಂಹ ಪ್ರಪೋಸ್ ಮಾಡಿದ್ದು ಯಾವಾಗ? ಈ ಪ್ರಶ್ನೆಗೆ ವಸಿಷ್ಠ ಸಿಂಹ ಅವರೇ ಉತ್ತರ ಕೊಟ್ಟಿದ್ದಾರೆ. ‘ಅದು ಹರಿಪ್ರಿಯಾ ಅವರ ತಂದೆಯ ಕಾರ್ಯದ ದಿನ. ಆದಿನ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ತಡೆಯಲಾರದೇ ಪ್ರಪೋಸ್ ಮಾಡಿದ್ದೆ. ಅದು ಮಧ್ಯರಾತ್ರಿ ಆಗಿತ್ತು. ಮುಂಜಾನೆ ಕಾರ್ಯ ಇದ್ದಿದ್ದರಿಂದ ಅವರು ನಿದ್ದೆ ಮಾಡಬೇಕಿತ್ತು. ನೀವು ಏನೂ ಉತ್ತರಿಸಬಾರದು ಎಂದು ಪ್ರಪೋಸ್ ಮಾಡಿದ್ದೆ’ ಎಂದಿದ್ದಾರೆ ವಸಿಷ್ಠ ಸಿಂಹ.

ಇದನ್ನೂ ಓದಿ
Hariprriya: ಕಿರುತೆರೆಗೆ ಕಾಲಿಡಲಿದ್ದಾರೆ ನಟಿ ಹರಿಪ್ರಿಯಾ; ಏನಿದು ಸಮಾಚಾರ?
ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ
Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?
ಕನ್ನಡಿಗರಿಗೆ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಜಾಗವಿಲ್ಲ ಯಾಕೆ? ಹರಿಪ್ರಿಯಾ ಕಿಡಿಕಿಡಿ

‘ವಸಿಷ್ಠ ಸಿಂಹ ಅವರನ್ನು ಕಂಡರೆ ನನಗೂ ಇಷ್ಟ ಇತ್ತು. ಅದನ್ನು ಹೇಳಿಕೊಳ್ಳಬೇಕು ಎನ್ನುವ ಆಸೆ ನನಗೂ ಇತ್ತು. ನನನ್ನು ವಿಶೇಷವಾಗಿ ನೋಡಿಕೊಂಡರು. ನನ್ನ ತಂದೆ ತೀರಿಕೊಂಡ ದಿನವೇ ಇವರು ನನಗೆ ಸಿಕ್ಕರು. ನನ್ನ ತಂದೆಯೇ ನನಗೆ ಇವರನ್ನು ನೀಡಿದರು ಅನಿಸಿತು’ ಎಂದಿದ್ದಾರೆ ಹರಿಪ್ರಿಯಾ.

ಇದನ್ನೂ ಓದಿ: Haripriya Marriage Date: ಜನವರಿ 26ಕ್ಕೆ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ; ಮೈಸೂರಿನಲ್ಲಿ ನಡೆಯಲಿದೆ ಶುಭ ಕಾರ್ಯ

ಇಬ್ಬರ ಮಧ್ಯೆ ಪ್ರೀತಿ ಬೆಳೆಯುವುದಕ್ಕೂ ಮುನ್ನವೇ ಹರಿಪ್ರಿಯಾ ಹಾಗೂ ವಸಿಷ್ಠ ಒಂದು ಸಿನಿಮಾ ಒಪ್ಪಿಕೊಂಡಿದ್ದರು. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಹೀಗಾಗಿ, ಸೆಟ್​ನಲ್ಲಿ ಸಾಮಾನ್ಯರಂತೆ ವರ್ತಿಸುವುದು ಇವರಿಗೆ ಕಷ್ಟವಾಗಿತ್ತಂತೆ. ಈ ಮಾತನ್ನು ಕೂಡ ವಸಿಷ್ಠ ಸಿಂಹ ಹೇಳಿದ್ದಾರೆ. ‘ದೇವ್ರಾಣೆ ನಾಯಿ ಕೊಟ್ಟಿ ಪಟಾಯಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ ವಸಿಷ್ಠ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ