AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯ ಪ್ರಕರಣ: ಸಾಧು ಕೋಕಿಲ, ಮಂಡ್ಯ ರಮೇಶ್​ಗೆ ಬಿಗ್ ರಿಲೀಫ್

Mandya Ramesh-Sadhu Kokila: ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲಾ ಮತ್ತು ನಟ ಮಂಡ್ಯ ರಮೇಶ್ ವಿರುದ್ಧ ಮಾಡಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಬ್ಬರೂ ನಟರಿಗೆ ಹೈಕೋರ್ಟ್​ ಬಿಗ್ ರಿಲೀಫ್ ನೀಡಿದೆ. 2017 ರಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ರದ್ದು ಮಾಡಿ ಹೈಕೋರ್ಟ್ ಆದೇಶ ನೀಡಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಸಾಧು ಕೋಕಿಲ, ಮಂಡ್ಯ ರಮೇಶ್​ಗೆ ಬಿಗ್ ರಿಲೀಫ್
Mandya Ramesh Sadhukokila
ಮಂಜುನಾಥ ಸಿ.
|

Updated on: Feb 11, 2026 | 6:05 PM

Share

ಕನ್ನಡ ಚಿತ್ರರಂಗದ (Sandalwood) ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲಾ ಮತ್ತು ನಟ ಮಂಡ್ಯ ರಮೇಶ್ ವಿರುದ್ಧ ಮಾಡಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಬ್ಬರೂ ನಟರಿಗೆ ಹೈಕೋರ್ಟ್​ ಬಿಗ್ ರಿಲೀಫ್ ನೀಡಿದೆ. 2017 ರಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ರದ್ದು ಮಾಡಿ ಹೈಕೋರ್ಟ್ ಆದೇಶ ನೀಡಿದೆ.

2017 ರಲ್ಲಿ ಸಾಧು ಕೋಕಿಲ ಮತ್ತು ನಟ ಮಂಡ್ಯ ರಮೇಶ್ ಅವರು ಮೈಸೂರಿನ ಪಾರ್ಲರ್ ಒಂದರಲ್ಲಿ ಮಸಾಜ್ ಮಾಡಿಸಿಕೊಂಡ ಬಳಿಕ, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಬ್ಬರು ನಟರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಇಬ್ಬರು ನಟರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು, ಬಳಿಕ 2019 ರಲ್ಲಿ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು.

ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಮರಳಿ ಬಂದ ‘ಯಾರೇ ನೀನು ಚೆಲುವೆ’ ಹೀರೋಯಿನ್ ಸಂಗೀತಾ

ಎಫ್‌ಐಆರ್‌ನಲ್ಲಿ ಹೆಸರಿಲ್ಲ, ಹಾಗೂ ಆರೋಪಕ್ಕೆ ಸಾಕ್ಷ್ಯಗಳಿಲ್ಲವೆಂದು ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲ ಪರವಾಗಿ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ವಾದ ಮಂಡಿಸಿದ್ದರು. ಅದರಂತೆ ಸೂಕ್ತ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಪ್ರಕರಣವನ್ನು ರದ್ದು ಮಾಡಲಾಗಿದೆ. ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶವನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ