‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಪವರ್ ನೋಡಿ ಎಗ್ಸೈಟ್ ಆದ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್

Yash Movie Toxic: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಅವರು ಈ ಚಿತ್ರಕ್ಕಾಗಿ ಭಾರತದಲ್ಲೇ ಇರಲಿದ್ದಾರೆ. ಅವರು ಭಾರತೀಯ ತಂಡದೊಂದಿಗೆ ಕೆಲಸ ಮಾಡುವುದರಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಮಾರ್ಚ್ 2026ರಲ್ಲಿ ಬಿಡುಗಡೆಯಾಗಲಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಪವರ್ ನೋಡಿ ಎಗ್ಸೈಟ್ ಆದ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್
ಯಶ್

Updated on: Aug 25, 2025 | 10:19 PM

ಯಶ್ ಸಿನಿಮಾದ ‘ಟಾಕ್ಸಿಕ್’ ಸಿನಿಮಾ (Toxic Movie) ಶೂಟ್ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈಗ ಚಿತ್ರ ತಂಡದವರು ಸಿನಿಮಾ ಸೆಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ ಸಿನಿಮಾದ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪಿರ್ರಿ ಅವರು. ಅವರು ಈ ಚಿತ್ರಕ್ಕಾಗಿ 45 ಭಾರತದಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಅವರು ಯಶ್ ಜೊತೆ ಕೆಲಸ ಮಾಡಲು ಎಗ್ಸೈಟ್ ಆಗಿದ್ದಾರೆ.

ಜೆಜೆ ಪೆರ್ರಿ ಅವರು ಸದ್ಯ ಭಾರತಕ್ಕೆ ಬಂದಿದ್ದಾರೆ. ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಅವರು ತಮ್ಮ ಟೀಂನ ಇಲ್ಲಿಗೆ ಕರೆತಂದಿಲ್ಲ. ಬದಲಿಗೆ ಇಲ್ಲಿನ ತಂಡದವರ ಜೊತೆ ಅವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೂಡ ನೀಡಿದ್ದಾರೆ.

‘ಭಾರತದ ಸಿಬ್ಬಂದಿ ಒಳ್ಳೆಯ ಗುಣಮಟ್ಟ ಹೊಂದಿದ್ದಾರೆ. ಈ ಕಾರಣದಿಂದಲೇ ನಾನು ಇವರ ಜೊತೆ ಕೆಲಸ ಮಾಡಲು ಒಪ್ಪಿದೆ. ನಾವು ಪ್ರಮುಖ ದೃಶ್ಯಗಳನ್ನು ಈಗ ಶೂಟ್ ಮಾಡುತ್ತಿದ್ದೇವೆ. ಇದು ದೊಡ್ಡ ಚಾಲೆಂಜ್. ನನಗೆ ದೊಡ್ಡ ಚಾಲೆಂಗ್​ಗಳು ಎಂದರೆ ಇಷ್ಟ. ನಾವು ಗಡಿಗಳನ್ನು ಮೀರಿ ಕೆಲಸ ಮಾಡಬೇಕಿದೆ’ ಎಂದು ಜೆಜೆ ಹೇಳಿದ್ದಾರೆ.

ಇದನ್ನೂ ಓದಿ
VIDEO: ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಹಿರಿಯ ನಟ ದಿನೇಶ್​ಗೆ ಇದ್ದ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ
‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’; ದರ್ಶನ್ ಧರಿಸಿದ್ದ ಜಾಕೆಟ್ ಬೆಲೆ ಎಷ್ಟು?
ದಿನೇಶ್​ಗಾಗಿ ಮಂಗಳೂರು ಮೀನಿನ ಅಡುಗೆ ಮಾಡಿಸಿದ್ದ ಅಣ್ಣಾವ್ರು

‘ನನ್ನ 35 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಬರೋಬ್ಬರಿ 39 ರಾಷ್ಟ್ರಗಳಲ್ಲಿ ಸಿನಿಮಾ ಮಾಡಿದ್ದೇನೆ. ಆದರೆ, ನಾನು ಭಾರತದ ಸಿನಿಮಾ ಅಭಿಮಾನಿ. ಇಲ್ಲಿ ನಿಜಕ್ಕೂ ಕ್ರಿಯೆಟಿವ್ ಸಿನಿಮಾ ಮಾಡಲಾಗುತ್ತಿದೆ. ಗೀತು ಅವರು ದೊಡ್ಡ ವಿಷನ್ ಹೊಂದಿದ್ದಾರೆ. ರಾಜೀವ್ ರವಿ ಕೂಡ ಒಳ್ಳೆಯ ಛಾಯಾಗ್ರಹಣ ಮಾಡುತ್ತಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಜೆಜೆ ಪೆರ್ರಿ ಅವರು ಹಾಲಿವುಡ್ ಆ್ಯಕ್ಷನ್ ನಿರ್ದೇಶಕರು. ಹಾಲಿವುಡ್​​ನಲ್ಲೀ ಭರ್ಜರಿ ಸ್ಟಂಟ್​ಗಳನ್ನು ಮಾಡಲಾಗುತ್ತದೆ. ಅವರು ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಜಾನ್ ವಕ್’ ‘ಡೇ ಶಿಫ್ಟ್’ ರೀತಿಯ ಸಿನಿಮಾಗಳಿಗೆ ಆ್ಯಕ್ಷನ್ ಹೇಳಿದ್ದಾರೆ. ಅವರು ಕನ್ನಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಾಗಲೇ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ ಮನೆಗೆ ಬಂದಳು ಮಹಾಲಕ್ಷ್ಮೀ; ದಂಪತಿಯಿಂದ ಗುಡ್ ನ್ಯೂಸ್

‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡದ ಜೊತೆ ಇಂಗ್ಲಿಷ್​ನಲ್ಲೂ ಬರುತ್ತಿದೆ. ಈ ಸಿನಿಮಾನ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಯಶ್ ಕೂಡ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:19 pm, Mon, 25 August 25