ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎಂಬ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆಯ ಹಿಂದಿನ ಅಸಲಿಯತ್ತೇನು?

ಮುಕೇಶ್ ಅಂಬಾನಿ ಅವರು ಅದ್ದೂರಿಯಾಗಿ ಮಗನ ಮದುವೆ ಮಾಡಿದ್ದಾರೆ. ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ವಿವಾಹದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ಮಧ್ಯೆ ಸುದೀಪ್ ಅವರು ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದರು. ಈ ವಿಡಿಯೋದ ಅಸಲಿಯತ್ತು ಈ ವಿಡಿಯೋದಲ್ಲಿ ಇದೆ.

ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎಂಬ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆಯ ಹಿಂದಿನ ಅಸಲಿಯತ್ತೇನು?
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Jul 16, 2024 | 11:48 AM

ಇದು ಸೋಶಿಯಲ್ ಮೀಡಿಯಾ ಯುಗ. ವಿಡಿಯೋಗಳನ್ನು ತಿರುಚಿ ಜನರನ್ನು ನಂಬಿಸೋದು ನೀರು ಕುಡಿದಷ್ಟೇ ಸುಲಭ. ಈ ಕಾರಣಕ್ಕೆ ಯಾವುದೇ ವಿಡಿಯೋ ವೈರಲ್ ಆದರೂ ಪ್ರಮಾಣಿಸಿ ನೋಡಿಯೇ ನಂಬ ಬೇಕು. ಈಗ ಸುದೀಪ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಅಂಬಾನಿ ಮನೆಯ ಮದುವೆಗೆ ಏಕೆ ಹೋಗಿಲ್ಲ ಎಂಬುದನ್ನು ವಿವರಿಸಿದ್ದಾರೆ. ಆದರೆ, ಈ ವಿಡಿಯೋ ಅಸಲಿಯತ್ತು ಬೇರೆಯದೇ ಇದೆ. ಇದು ಅಂಬಾನಿ ಮನೆಯ ಮದುವೆ ವಿಚಾರದ ಬಗ್ಗೆ ಹೇಳಿದ್ದು ಅಲ್ಲವೇ ಅಲ್ಲ.

ಮುಕೇಶ್ ಅಂಬಾನಿ ಅವರ ಕೊನೆಯ ಮಗ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್​ನ ಕೈ ಹಿಡಿದಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ತೆರಳಿದ್ದರು. ಕನ್ನಡದ ಯಶ್ ಕೂಡ ಈ ಮದುವೆಗೆ ತೆರಳಿದ್ದಾರೆ. ಕನ್ನಡ ಚಿತ್ರರಂಗದಿಂದ ಈ ಮದುವೆಯಲ್ಲಿ ಕಾಣಿಸಿದ್ದು ಯಶ್ ಮಾತ್ರ. ಹಾಗಾದರೆ ಸುದೀಪ್​ಗೆ ಆಮಂತ್ರಣ ಇದ್ದೂ ಹೋಗಿಲ್ಲವೇ? ಆ ವಿಡಿಯೋದಲ್ಲಿ ಅವರು ಹೇಳಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ವಿಡಿಯೋದಲ್ಲೇನಿದೆ?

‘ನನಗೆ ಸ್ವಲ್ಪ ಹುಷಾರಿರಲಿಲ್ಲ. ಅಲ್ಲಿ ತುಂಬ ಕಟ್ಟುನಿಟ್ಟಾದ ಪ್ರೋಟೋಕಾಲ್​ ಇತ್ತು. ಶೀತ, ಜ್ವರ ಇತ್ಯಾದಿ ಇದ್ದರೆ ಆರ್​ಟಿಪಿಸಿಆರ್​ ಮಾಡಬೇಕಿತ್ತು. ಅದರಿಂದ ನನಗೆ ಕಂಫರ್ಟ್​ ಇರಲಿಲ್ಲ. ನನಗೆ ಸ್ವಲ್ಪ ಟೆಂಪ್ರೇಚರ್​ ಇತ್ತು. ಬೇರೆ ಬೇರೆ ಕೆಲಸಗಳಲ್ಲಿ ನಾನು ತೊಡಗಿಕೊಂಡಿದ್ದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿದ ಬಳಿಕ ಜ್ವರ ಇದೆ ಅಂತ ಒಳಗೆ ಬಿಡದಿದ್ದರೆ? ಅಲ್ಲಿತನಕ ಹೋಗಿ ವಾಪಸ್​ ಬಂದರೆ ತಪ್ಪಾಗುತ್ತದೆ. ಸಂಬಂಧಿಸಿದವರಿಗೆ ಫೋನ್​ ಮಾಡಿ ವಿಷಯ ತಿಳಿಸಿದೆ’ ಎಂದು ಸುದೀಪ್​ ವಿಡಿಯೋದಲ್ಲಿ ಹೇಳಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ ಭೇಟಿಗೆ ಸುದೀಪ್​ ಯಾಕೆ ಬರಲಿಲ್ಲ? ಅಸಲಿ ಕಾರಣ ವಿವರಿಸಿದ ಕಿಚ್ಚ

ಹಳೆಯ ವಿಡಿಯೋ

2023 ಫೆಬ್ರವರಿಯಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು, ಯಶ್​ ಹಾಗೂ ಅಯ್ಯೋ ಶ್ರದ್ಧಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ಸುದೀಪ್​ಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರಿಗೆ ಅನಾರೋಗ್ಯ ಕಾರಣದಿಂದ ಹೋಗೋಕೆ ಸಾಧ್ಯ ಆಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನ ಇದಾಗಿದೆ. ಇದನ್ನು ಫ್ಯಾನ್​ ಪೇಜ್​ಗಳು ಬೇರೆ ರೀತಿಯಲ್ಲಿ ಹಾಕಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ