AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaggesh: ಪುನೀತ್ ಮೇಲಿನ ಪ್ರೀತಿ​ಗಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡ ಜಗ್ಗೇಶ್

ಜಗ್ಗೇಶ್​ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಜಗ್ಗೇಶ್​ ರಾಯರ ಭಕ್ತರು. ಪುನೀತ್​ ಅವರು ಜಗ್ಗೇಶ್​ ಜತೆ ಅನೇಕ ಬಾರಿ ಮಂತ್ರಾಲಯಕ್ಕೆ ತೆರಳಿದ್ದರು. ವೇದಿಕೆ ಮೇಲೆ ಸಿಕ್ಕರೆ ಇಬ್ಬರೂ ಪ್ರೀತಿಯಿಂದ ಮಾತನಾಡುತ್ತಿದ್ದರು.

Jaggesh: ಪುನೀತ್ ಮೇಲಿನ ಪ್ರೀತಿ​ಗಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡ ಜಗ್ಗೇಶ್
ಜಗ್ಗೇಶ್​-ಪುನೀತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 09, 2022 | 2:10 PM

Share

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ನಾಲ್ಕು ತಿಂಗಳು ಕಳೆದು ಹೋಗಿದೆ. ಅವರಿಲ್ಲ ಎನ್ನುವ ನೋವು ನಿತ್ಯವೂ ಕಾಡುತ್ತಿದೆ. ಅಭಿಮಾನಿಗಳು ಹಾಗೂ ಕುಟುಂಬದವರು ಈಗಲೂ ಪುನೀತ್​ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಈ ನೋವು ಇಂದು ನಾಳೆಗೆ ಮಾಸುವುದಲ್ಲ. ಪುನೀತ್​ ನಿಧನ ಹೊಂದಿದ ನಂತರ ಅವರ ಮೇಲಿದ್ದ ಪ್ರೀತಿ ಹಾಗೂ ಗೌರವವನ್ನು ಅಭಿಮಾನಿಗಳು ನಾನಾ ರೀತಿಯಲ್ಲಿ ತೋರಿಸುತ್ತಿದ್ದಾರೆ. ಜಗ್ಗೇಶ್​ (Jaggesh) ಕೂಡ ಪುನೀತ್​ ವಿಚಾರದಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಜಗ್ಗೇಶ್​ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಜಗ್ಗೇಶ್​ ರಾಯರ ಭಕ್ತರು. ಪುನೀತ್​ ಅವರು ಜಗ್ಗೇಶ್​ ಜತೆ ಅನೇಕ ಬಾರಿ ಮಂತ್ರಾಲಯಕ್ಕೆ ತೆರಳಿದ್ದರು. ವೇದಿಕೆ ಮೇಲೆ ಸಿಕ್ಕರೆ ಇಬ್ಬರೂ ಪ್ರೀತಿಯಿಂದ ಮಾತನಾಡುತ್ತಿದ್ದರು. ಅಪ್ಪು ಅವರನ್ನು ಕಳೆದುಕೊಂಡಿದ್ದು, ಜಗ್ಗೇಶ್​ಗೆ ತೀವ್ರ ನೋವು ತಂದಿದೆ. ಈ ಬಗ್ಗೆ ಅವರು ಸಾಕಷ್ಟು ಬಾರಿ ನೋವು ಹೊರ ಹಾಕಿದ್ದಾರೆ. ಈ ವರ್ಷ ಜಗ್ಗೇಶ್​ ತಮ್ಮ ಬರ್ತ್​​ಡೇ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಪ್ರತಿ ವರ್ಷ ಜನ್ಮದಿನವನ್ನು ಅಭಿಮಾನಿಗಳ ಜತೆ ಆಚರಣೆ ಮಾಡುತ್ತಾರೆ. ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬರುತ್ತದೆ. ಮನೆ ಎದುರು ಬರುವ ಅಭಿಮಾನಿಗಳು, ಕೇಕ್​ ಹಾಗೂ ಹಾರ ತರುತ್ತಾರೆ. ಜಗ್ಗೇಶ್​ಗೆ ಮಾರ್ಚ್​ 17 ಹುಟ್ಟುಹಬ್ಬದ ದಿನ. ಆದರೆ, ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಜಗ್ಗೇಶ್​ ನೇರವಾಗಿಯೇ ಹೇಳಿದ್ದಾರೆ. ಪುನೀತ್​ ಅವರನ್ನು ಕಳೆದುಕೊಂಡ ದುಃಖದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪುನೀತ್​ ಜತೆ ಇರುವ ಫೋಟೋ ಹಂಚಿಕೊಂಡಿರುವ ಜಗ್ಗೇಶ್, ‘ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆಚರಿಸುವ ಮನಸ್ಸು ಕೂಡ ಇಲ್ಲ. ಕಾರಣ, ಪ್ರತಿ ಮಾರ್ಚ್​ 17ಕ್ಕೆ ತಪ್ಪದೇ ಪುನೀತ್ ಕರೆ ಮಾಡುತ್ತಿದ್ದ. ಅಣ್ಣಾ happy birthday ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಪುನೀತ್​ ಜೊತೆ ಕೊನೆಯ ಚಿತ್ರ’ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.

ವಿಚಿತ್ರ ಎಂದರೆ ಪುನೀತ್​ ಬರ್ತ್​ಡೇ ಕೂಡ ಮಾರ್ಚ್​​ 17. ಅವರು ಈ ವರ್ಷ ಇದ್ದಿದ್ದರೆ 47ನೇ ವರ್ಷ ಬರ್ತ್​ಡೇಯನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು. ಅವರ ಜತೆ ಕುಳಿತೇ ಅಭಿಮಾನಿಗಳು ‘ಜೇಮ್ಸ್​’ ಸಿನಿಮಾ ನೋಡಬಹುದಿತ್ತು. ಆದರೆ, ಅವರಿಲ್ಲದೆ, ‘ಜೇಮ್ಸ್​’ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ

Rashmika Mandanna: ಜೂನ್​ 10 ರಶ್ಮಿಕಾ ಮಂದಣ್ಣ ಪಾಲಿಗೆ ವಿಶೇಷ ದಿನ; ಈಡೇರುತ್ತಿದೆ ಹಲವು ವರ್ಷಗಳ ಕನಸು

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ