ಶಶಿಕುಮಾರ್ ಬಂದು ಆಫರ್ ಕಿತ್ತುಕೊಂಡಾಗ ಅತ್ತಿದ್ದ ಜಗ್ಗೇಶ್; ಇಲ್ಲಿದೆ ಅಪರೂಪದ ಘಟನೆ

ಜಗ್ಗೇಶ್ ಅವರು ತಮ್ಮ ಯೌವನದಲ್ಲಿ ಇದ್ದಾಗ ಸಾಕಷ್ಟು ಸಿನಿಮಾ ಮಾಡುತ್ತಿದ್ದರು. ಅದೇ ರೀತಿ ಅನೇಕ ಆಫರ್​ಗಳನ್ನು ಕಳೆದುಕೊಂಡಿದ್ದರು. ಅವರು ನಟಿಸಬೇಕಿದ್ದ ಸಿನಿಮಾದಲ್ಲಿ ಶಶಿಕುಮಾರ್ ಅವರನ್ನು ಕರೆದುಕೊಂಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದರು. ಆ ಫನ್ನಿ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಶಶಿಕುಮಾರ್ ಬಂದು ಆಫರ್ ಕಿತ್ತುಕೊಂಡಾಗ ಅತ್ತಿದ್ದ ಜಗ್ಗೇಶ್; ಇಲ್ಲಿದೆ ಅಪರೂಪದ ಘಟನೆ
ಶಶಿಕುಮಾರ್-ಜಗ್ಗೇಶ್
Updated By: ರಾಜೇಶ್ ದುಗ್ಗುಮನೆ

Updated on: Apr 30, 2025 | 8:16 AM

ಕನ್ನಡದ ನಟ ಶಶಿಕುಮಾರ್ (Shshikumar) ಅವರು ಸ್ಟಾರ್ ಹೀರೋ ಆಗಿದ್ದರು. ಅವರಿಗೆ ಸಖತ್ ಬೇಡಿಕೆ ಇತ್ತು. ಅವರು ಮಾಡುತ್ತಿದ್ದ ಡ್ಯಾನ್ಸ್ ಆಗಿನ ಕಾಲಕ್ಕೆ ಸಾಕಷ್ಟು ಫೇಮಸ್ ಆಗಿತ್ತು. ಅವರು ಸ್ಮಾರ್ಟ್ ಹೀರೋ ಎಂದು ಕೂಡ ಅನಿಸಿಕೊಂಡಿದ್ದರು. ಒಮ್ಮೆ ಜಗ್ಗೇಶ್ ಅವರ ಆಫರ್​ನ ಶಶಿಕುಮಾರ್ ಕಿತ್ಗೊಂಡು ಬಿಟ್ಟಿದ್ರು ಎಂಬ ವಿಚಾರ ನಿಮಗೆ ಗೊತ್ತೇ? ಆ ವಿಚಾರವನ್ನು ಜಗ್ಗೇಶ್ ಅವರೇ ಹೇಳಿಕೊಂಡಿದ್ದರು. ಈ ವೇಳೆ ಜಗ್ಗೇಶ್ ಅವರು ಬೇಸರದಿಂದ ಅತ್ತೇ ಬಿಟ್ಟಿದ್ದರು ಎಂಬ ಬಗ್ಗೆ ನಾವು ನಿಮಗೆ ಹೇಳುತ್ತಿದದ್ದೇವೆ.

ಜಗ್ಗೇಶ್ ಅವರು ಜೀ ಕನ್ನಡದ ವೇದಿಕೆ ಮೇಲೆ ಮಾತನಾಡಿದ್ದರು. ಹಳೆಯ ಘಟನೆಯನ್ನು ಅವರು ವಿವರಿಸಿದರು. ‘ಓರ್ವ ಹುಡಗ ಬಂದ. ನಾನು ಜಲಸ್​ನಲ್ಲಿ ನೋಡ್ತಾ ಇದೀನಿ. ಬೆಳ್ಳಗೆ ಇದ್ದ, ಉದ್ದ ಕೂದಲು ಬಿಟ್ಟಿದ್ದಾನೆ. ಅವನು ಬೇರಾರು ಅಲ್ಲ, ಶಶಿಕುಮಾರ್. ಅಂದಿನ ಕಾಲಕ್ಕೆ ಇಂಗ್ಲಿಷ್ ಹಾಡನ್ನು ಹಾಕಿ ಆಡಿಷನ್ ಕೊಟ್ಟ. ಕೆವಿ ರಾಜು ಅವರು ಶಶಿಕುಮಾರ್​ನ ಆಯ್ಕೆ ಮಾಡೇಬಿಟ್ಟರು. ನಾನು ರಾಜಣ್ಣ ಎಂದೆ. ಸುಮ್ಮನಿರಪ್ಪ ಎಂದರು. ನಾನು ಅಳುತ್ತಾ ಕೂತೆ’ ಎಂದರು ಜಗ್ಗೇಶ್.

ಇದನ್ನೂ ಓದಿ
‘ಒಡಹುಟ್ಟಿದವರು’ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ತಮನ್ನಾ ಹಾಟ್ ಅವತಾರಕ್ಕೆ ಬದಲಾಯ್ತು ‘ರೇಡ್ 2’ ಸೆನ್ಸಾರ್ ಪ್ರಮಾಣಪತ್ರ?  
ಸಂಧ್ಯಾ ಥಿಯೇಟರ್ ಕಾಲ್ತುಳಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೀತೇಜ್
‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ

‘ಎಳೆ ಮಕ್ಕಳು ಚಾಕಲೇಟ್ ಕಿತ್ತುಕೊಂಡಾಗ ಅಳುವಂತೆಯೇ ನಾನು ಅಳುತ್ತಾ ಇದ್ದೆ. ತುಗೂದೀಪ ಶ್ರೀನಿವಾಸ್ ಕಾಂಪೋಂಡ್ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದರು. ನನ್ನನ್ನು ಕರೆದು ಏನಾಯಿತು ಎಂದು ಕೇಳಿದರು. ನಾನು ವಿವರಿಸಿದೆ. ಆಗ ಅವರು ಹಾಗಲ್ಲ ಎಂದು ಸಮಾಧಾನ ಮಾಡಿದರು. ಅವರಿಗೆ ಏನೋ ಸೆಟ್ ಆಗಿದೆ ಬಿಡು ಎಂದರು’ ಎಂಬುದಾಗಿ ಜಗ್ಗೇಶ್ ವಿವರಿಸಿದ್ದರು.

ಜಗ್ಗೇಶ್ ಅವರು ತುಂಬಾನೇ ಕಷ್ಟಪಟ್ಟು ಮೇಲೆ ಬಂದವರು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಅವರು, 10 ವರ್ಷಗಳ ಬಳಿಕ ಹೀರೋ ಆದರು. ‘ತರ್ಲೆ ನನ್ಮಗ’ ಅವರ ಜೀವನವನ್ನೇ ಬದಲಿಸಿಬಿಟ್ಟಿತು. ಆ ಬಳಿಕ ಹೀರೋ ಆಗಿ ಅವರು ಸಿನಿಮಾ ಮಾಡಿದರು. ಸದ್ಯ ಜಗ್ಗೇಶ್ ಅವರು ಸಿನಿಮಾಗಿಂತ ರಾಜಕೀಯದಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. ಅವರ ಯಾವುದೇ ಹೊಸ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿಲ್ಲ.

ಇದನ್ನೂ ಓದಿ: ಹೀರೋ ಆಗುವುದಕ್ಕೂ ಮೊದಲು 30ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ಜಗ್ಗೇಶ್; ಬದುಕು ಬದಲಿಸಿತು ಆ ಚಿತ್ರ

ಇನ್ನು ಶಶಿಕುಮಾರ್ ಅವರು ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಅವರಿಗೆ ಸಂಭವಿಸಿದ ಅಪಘಾತದ ವೇಳೆ ಕಾಲಿಗೆ ಪೆಟ್ಟಾಗಿತ್ತು. ಇದು ಅವರ ವೃತ್ತಿ ಜೀವನಕ್ಕೆ ದೊಡ್ಡ ಶಾಪವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.