‘ಮನೆ ಬಳಿ ಬಂದು ಕಾಯಬೇಡಿ, ಹುಟ್ಟುಹಬ್ಬ ಆಚರಿಸಬೇಡಿ’: ಅಭಿಮಾನಿಗಳಿಗೆ ‘ಜೋಗಿ’ ಪ್ರೇಮ್ ಮನವಿ​

ನಿರ್ದೇಶಕ ‘ಜೋಗಿ’ ಪ್ರೇಮ್​ ಅವರು ಸದ್ಯ ‘ಏಕ್​ ಲವ್​ ಯಾ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಅಭಿಮಾನಿಗಳೊಂದಿಗೆ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಮುಂಚಿತವಾಗಿಯೇ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಮನೆ ಬಳಿ ಬಂದು ಕಾಯಬೇಡಿ, ಹುಟ್ಟುಹಬ್ಬ ಆಚರಿಸಬೇಡಿ’: ಅಭಿಮಾನಿಗಳಿಗೆ ‘ಜೋಗಿ’ ಪ್ರೇಮ್ ಮನವಿ​
ಜೋಗಿ ಪ್ರೇಮ್​

ಸ್ಯಾಂಡಲ್​ವುಡ್​ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ‘ಜೋಗಿ’ ಪ್ರೇಮ್​ ಅವರಿಗೆ ಅ.22ರಂದು ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಅವರೊಂದು ವಿಡಿಯೋ ಸಂದೇಶ ನೀಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಅದನ್ನು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ‘ಏಕ್​ ಲವ್​ ಯಾ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಬಗ್ಗೆಯೂ ಅಪ್​ಡೇಟ್​ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ‘ಏಕ್​ ಲವ್​ ಯಾ’ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಲಿದೆ.

‘ಅ.22 ನನ್ನ ಹುಟ್ಟುಹಬ್ಬ. ಪ್ರತಿ ಸಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ಬಂಧು-ಬಳಗದವರು ಬಂದು ವಿಶ್​ ಮಾಡುತ್ತಿದ್ರಿ. ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಯಾಕೆಂದರೆ ಮುಂಬೈನಲ್ಲಿ ‘ಏಕ್​ ಲವ್​ ಯಾ’ ಸಿನಿಮಾ ಕೆಲಸ ನಡೆಯುತ್ತಿದೆ. ಹಾಗಾಗಿ ತಾವು ಯಾರೂ ಕೂಡ ನನ್ನ ಮನೆ ಬಳಿ ಬರುವುದಾಗಲಿ, ಬಂದು ಕಾಯುವುದಾಗಲಿ ಮಾಡಬೇಡಿ ಅಂತ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೇ ಇದ್ದರೂ ದೂರದಿಂದ ಆಶೀರ್ವಾದ ಮಾಡಿ’ ಎಂದು ಪ್ರೇಮ್​ ಮನವಿ ಮಾಡಿಕೊಂಡಿದ್ದಾರೆ.

‘ನ.4ರಂದು ದೀಪಾವಳಿ ಹಬ್ಬದ ದಿನ ‘ಏಕ್​ ಲವ್​ ಯಾ’ ಸಿನಿಮಾದ ಮೂರನೇ ಹಾಡು ರಿಲೀಸ್​ ಮಾಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಆಗಿರುವ 2 ಹಾಡುಗಳನ್ನು ದೊಡ್ಡ ಹಿಟ್​ ಮಾಡಿಕೊಟ್ಟಿದ್ದೀರಿ. ಈಗ ಮೂರನೇ ಸಾಂಗ್​ ಬರುತ್ತಿದೆ. ಇದು ಲವ್​ ಬ್ರೇಕಪ್​ ಸಾಂಗ್​. ಅದು ಹುಡುಗಿಯರಿಗಾಗಿ ಮಾಡಿರುವ ವಿಶೇಷ ಹಾಡು. ಆ ಹಾಡು ನೋಡಿ ಹಾರೈಸಿ. ಜನವರಿ 21ಕ್ಕೆ ಎಲ್ಲ ಕಡೆ ಈ ಸಿನಿಮಾ ರಿಲೀಸ್​ ಮಾಡುತ್ತೇವೆ’ ಎಂದು ಪ್ರೇಮ್​ ಹೇಳಿದ್ದಾರೆ.

‘ಆ್ಯಕ್ಷನ್​ ಪ್ರಿನ್ಸ್’​ ಧ್ರುವ ಸರ್ಜಾ ಜೊತೆಗೂ ಪ್ರೇಮ್​ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ.

ಇದನ್ನೂ ಓದಿ:

16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

Click on your DTH Provider to Add TV9 Kannada