ಭರ್ಜರಿ ರೇಟಿಂಗ್ ಪಡೆದ ‘ಕಾಟೇರ’; ಇಲ್ಲಿದೆ ದರ್ಶನ್ ಸಿನಿಮಾದ ಮಾರ್ಕ್ಸ್ ಕಾರ್ಡ್
Katera Movie Rating: ವಿಮರ್ಶಕರು ಕೂಡ ‘ಕಾಟೇರ’ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲೂ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Katera Movie) ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಮೊದಲ ದಿನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 19.72 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್ ವೇಳೆ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ದರ್ಶನ್ ಅವರಿಗೆ ಸಿಕ್ಕ ಯಶಸ್ಸಿನಿಂದ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ಜೊತೆ ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಪಡೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದರ್ಶನ್ ಹಾಗೂ ತರುಣ್ ಸುಧೀರ್ ಅವರದ್ದು ಹಿಟ್ ಕಾಂಬಿನೇಷನ್. ಇಬ್ಬರೂ ಒಂದಾದಾಗಲೇ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಡಿಸೆಂಬರ್ 29ರಂದು ‘ಕಾಟೇರ’ ಸಿನಿಮಾ ರಿಲೀಸ್ ಆಗಿದ್ದು, ಉತ್ತಮವಾಗಿ ಮೂಡಿ ಬಂದಿದೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ವಿಮರ್ಶಕರು ಕೂಡ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲೂ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ.
ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಈವರೆಗೆ (ಡಿಸೆಂಬರ್ 30, ಬೆಳಿಗ್ಗೆ 10.30ರವರೆಗೆ) 13 ಸಾವಿರ ಜನರು ವೋಟ್ ಮಾಡಿದ್ದು 9.5 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ ಕೇವಲ 554 ಜನರು ವೋಟ್ ಮಾಡಿದ್ದು 8.2 ರೇಟಿಂಗ್ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಇಂದು (ಡಿಸೆಂಬರ್ 30) ಹಾಗೂ ನಾಳೆ (ಡಿಸೆಂಬರ್ 31) ಚಿತ್ರಕ್ಕೆ ಉತ್ತಮ ಗಳಿಕೆ ಆಗಲಿದೆ. ಜನವರಿ 1ರಂದು ಕೆಲವು ಕಡೆಗಳಲ್ಲಿ ರಜೆ ಇರುವುದರಿಂದ ಅಂದು ಕೂಡ ಒಳ್ಳೆಯ ಕಲೆಕ್ಷನ್ ಆಗಲಿದೆ.
ಇದನ್ನೂ ಓದಿ: Kaatera Collection: ದರ್ಶನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ; ‘ಕಾಟೇರ’ ಮೊದಲ ದಿನದ ಗಳಿಕೆ ಎಷ್ಟು?
‘ಕಾಟೇರ’ ಸಿನಿಮಾದಲ್ಲಿ ದರ್ಶನ್ ಜೊತೆಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಜಗಪತಿ ಬಾಬು, ಶ್ರುತಿ ಮೊದಲಾದವರು ನಟಿಸಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳು ಅಂದುಕೊಂಡ ರೀತಿ ಮೂಡಿ ಬಂದಿಲ್ಲ ಎಂದು ಫ್ಯಾನ್ಸ್ ಆರೋಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ