Ashwath Ninasam: ಚೆಕ್​ ಬೌನ್ಸ್​ ಪ್ರಕರಣದಲ್ಲಿ ನಟ ನೀನಾಸಂ ಅಶ್ವತ್ಥ್ ಬಂಧನ; ಜಾಮೀನಿನ ಮೇಲೆ ಬಿಡುಗಡೆ

Cheque Bounce Case: ನ್ಯಾಯಾಲದ ಮುಂದೆ ಹಾಜರುಪಡಿಸಿದಾಗ ನೀನಾಸಂ ಅಶ್ವತ್ಥ್​ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶೇಕಡ 25ರಷ್ಟು ಹಣವನ್ನು ನೀಡಿದ್ದಾರೆ.

Ashwath Ninasam: ಚೆಕ್​ ಬೌನ್ಸ್​ ಪ್ರಕರಣದಲ್ಲಿ ನಟ ನೀನಾಸಂ ಅಶ್ವತ್ಥ್ ಬಂಧನ; ಜಾಮೀನಿನ ಮೇಲೆ ಬಿಡುಗಡೆ
ನೀನಾಸಂ ಅಶ್ವತ್ಥ್​
Follow us
TV9 Web
| Updated By: ಮದನ್​ ಕುಮಾರ್​

Updated on:Jul 09, 2023 | 2:47 PM

ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ನೀನಾಸಂ ಅಶ್ವತ್ಥ್​ (Ashwath Ninasam) ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಚೆಕ್​ ಬೌನ್ಸ್​ (Cheque Bounce) ಪ್ರಕರಣದಲ್ಲಿ ಅವರ ಬಂಧನ ಆಗಿದೆ. ಹಾಸನದ (Hassan) ಬಡಾವಣೆ ಠಾಣೆ ಪೊಲೀಸರು ನೀನಾಸಂ ಅಶ್ವತ್ಥ್ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಜಡ್ಜ್​ ಎದುರು ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶೇ. 25ರಷ್ಟು ಹಣವನ್ನು ಪಾವತಿ ಮಾಡಿದ್ದಾರೆ. ಹಾಗಾಗಿ ನೀನಾಸಂ ಅಶ್ವತ್ಥ್​ ಅವರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಇನ್ನುಳಿದ ಹಣವನ್ನು ಪಾವತಿಸಲು ಅವರು ಸಮಯಾವಕಾಶ ಕೋರಿದ್ದಾರೆ.

ಏನಿದು ಪ್ರಕರಣ?

ನಟ ನೀನಾಸಂ ಅಶ್ವತ್ಥ್​ ಅವರು ಹಾಸನದ ರೋಹಿತ್​ ಎಂಬುವವರಿಂದ ಹಸು ಖರೀದಿ ಮಾಡಿದ್ದರು. ಆಗ 1.5 ಲಕ್ಷ ರೂಪಾಯಿ ಮೌಲ್ಯದ ಚೆಕ್​ ನೀಡಿದ್ದರು. ಆದರೆ ಹಣ ಪಡೆಯಲು ರೋಹಿತ್​ ಅವರು ಬ್ಯಾಂಕ್​ಗೆ ಹೋದಾಗ ಚೆಕ್​ಬೌನ್ಸ್​ ಆಗಿರುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಾಸನದ ಜೆಎಮ್‌ಎಫ್‌ಸಿ‌ ಕೋರ್ಟ್‌ನಲ್ಲಿ‌ ರೋಹಿತ್​ ಅವರು ಕೇಸ್ ಹಾಕಿದ್ದರು. ಈ ಪ್ರಕರಣದಲ್ಲಿ ನೀನಾಸಂ ಅಶ್ವತ್ಥ್​ ಅವರು ಕೋರ್ಟ್​ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ: ಮನೆಗೆ ಹೋಗಲು ಬಿಡ್ತಿಲ್ಲ, ಸಂಬಳ ಕೊಡ್ತಿಲ್ಲ.. ನಟ ನೀನಾಸಂ ಅಶ್ವತ್ಥ್ ವಿರುದ್ಧ ಕೆಲಸಗಾರರಿಂದ ಮತ್ತೊಂದು ಆರೋಪ

ತಪ್ಪು ಒಪ್ಪಿಕೊಂಡ ನೀನಾಸಂ ಅಶ್ವತ್ಥ್​:

ನ್ಯಾಯಾಲದ ಮುಂದೆ ಹಾಜರುಪಡಿಸಿದಾಗ ನೀನಾಸಂ ಅಶ್ವತ್ಥ್​ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶೇಕಡ 25ರಷ್ಟು ಹಣವನ್ನು ನೀಡಿದ್ದಾರೆ. ಇನ್ನುಳಿದ ಮೊತ್ತ ಪಾವತಿ ಮಾಡಲು ಜಡ್ಜ್​ ಬಳಿ ಸಮಯಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನೀನಾಸಂ ಅಶ್ವತ್ಥ್ ಅವರಿಗೆ ಜಾಮೀನು ನೀಡಲಾಗಿದೆ. ಅವರನ್ನು ಬಿಡುಗಡೆ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:30 pm, Sun, 9 July 23

ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ