ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಒಪ್ಪಿಕೊಂಡ ನಟಿ ರನ್ಯಾ ರಾವ್; ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Mar 07, 2025 | 4:02 PM

ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡಿದ ಆರೋಪದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಡಿಆರ್​ಐ ಅಧಿಕಾರಿಗಳು ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ರನ್ಯಾ ರಾವ್ ನೀಡಿದ ಹೇಳಿಕೆಯ ವಿವರಗಳು ‘ಟಿವಿ9’ಗೆ ಲಭ್ಯವಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ರನ್ಯಾ ರಾವ್ ಒಪ್ಪಿಕೊಂಡಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಒಪ್ಪಿಕೊಂಡ ನಟಿ ರನ್ಯಾ ರಾವ್; ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಇಲ್ಲಿದೆ..
Ranya Rao
Follow us on

ಹಿರಿಯ ಇಂಟಲಿಜೆನ್ಸ್ ಅಧಿಕಾರಿ ಮುಂದೆ ಹರ್ಷವರ್ದಿನಿ ರನ್ಯಾ ಅವರು ಈ ಹೇಳಿಕೆ ದಾಖಲಿಸಿದ್ದಾರೆ. ಮಾರ್ಚ್​ 4ರಂದು ಕಸ್ಟಮ್ಸ್ ಆಕ್ಟ್-1962ರ ಸೆಕ್ಷನ್ 108ರ ಅಡಿಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ಸಭಾಂಗಣದಲ್ಲಿ ಹಿರಿಯ ಇಂಟಲಿಜೆನ್ಸ್ ಅಧಿಕಾರಿ ಮುಂದೆ ರನ್ಯಾ ರಾವ್ (Ranya Rao) ದಾಖಲಿಸಿರುವ ಹೇಳಿಕೆ ಇಲ್ಲಿದೆ.

‘ನನ್ನ ಸ್ವಾಧೀನದಿಂದ ಚಿನ್ನವನ್ನು ವಶಪಡಿಸಿಕೊಂಡ ವಿಚಾರವಾಗಿ ದಿನಾಂಕ 04.03.2025ರ ಸಮನ್ಸ್‌ಗೆ ನಾನು ನಿಮ್ಮ ಮುಂದೆ ಹಾಜರಾಗಿದ್ದೇನೆ. ನಾನು ಸತ್ಯವನ್ನು ಹೇಳಲು ಬದ್ಧನಾಗಿರುತ್ತೇನೆ. ನನ್ನ ಹೇಳಿಕೆಯ ವಿಷಯಗಳು ಅಪೂರ್ಣವಾಗಿದ್ದರೆ, ತಪ್ಪುದಾರಿಗೆಳೆಯುವ ಅಥವಾ ಸುಳ್ಳಾಗಿದ್ದರೆ ಕಾನೂನು ಕ್ರಮ ಜರುಗಿಸಲು ಹೊಣೆಗಾರನಾಗಿದ್ದೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನನಗೆ ಇಂಗ್ಲಿಷ್ ಓದಲು, ಬರೆಯಲು ಮತ್ತು ಮಾತನಾಡಲು ಮತ್ತು ಕನ್ನಡದಲ್ಲಿ ಮಾತನಾಡಲು ಬರುತ್ತದೆ. ಈ ಹೇಳಿಕೆಯನ್ನು ನಿಮ್ಮ ಅಧಿಕಾರಿಯೊಬ್ಬರು ಕಂಪ್ಯೂಟರ್‌ನಲ್ಲಿ ಟೈಪ್ ಮಾಡುತ್ತಾರೆ.’

ಪ್ರಶ್ನೆ 1. ನಿಮ್ಮ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ.

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ಉತ್ತರ: ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ತಂದೆ ಕೆ.ಎಸ್. ಹೆಗ್ದೇಶ್ ರಿಯಾಲಿಟಿ ಕ್ಷೇತ್ರದ ಉದ್ಯಮಿ. ನಾನು 12 ನೇ ತರಗತಿಯವರೆಗೆ ಓದಿದ್ದೇನೆ ಮತ್ತು ನಾನು ಚಲನಚಿತ್ರೋದ್ಯಮ & ರಂಗಭೂಮಿಯಲ್ಲಿ ಕಲಾವಿದೆ. ನಾನು ದುಬೈನಲ್ಲಿ ಫ್ರಿಲ್ಯಾನ್ಸ್ ರಿಯಲ್ ಎಸ್ಟೇಟ್ ಮತ್ತು ವನ್ಯಜೀವಿ ಛಾಯಾಗ್ರಾಹಕಿ. ನಾನು ಆರ್ಕಿಟೆಕ್ಟ್ ಆಗಿರುವ ಜತಿನ್ ಹುಕ್ಕೇರಿ ಅವರನ್ನು ವಿವಾಹವಾಗಿದ್ದು, ನಂ.62, ನಂದವಾಣಿ ಮ್ಯಾನ್ಷನ್, 5 ನೇ ಕ್ರಾಸ್, ಲಾವೆಲ್ಲೆ ರಸ್ತೆ, ಬೆಂಗಳೂರಿನಲ್ಲಿ ವಾಸವಾಗಿದ್ದೇನೆ.

ಪ್ರಶ್ನೆ 2. ನಿಮ್ಮಿಂದ ವಶಪಡಿಸಿಕೊಂಡ ಚಿನ್ನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ.

ಉತ್ತರ: ನಾನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 03.03.2025/04.03.2025ರಂದು ನಡೆದ ಮಹಜರ್ ಅನ್ನು ಓದಿದ್ದೇನೆ. ಈ ಮಹಜರ್ ಅನ್ನು ನೋಡಿ ಸಹಿಯನ್ನು ಮಾಡಿದ್ದೇನೆ. ದಿನಾಂಕ 03.03.2025/2025 ರಂದು ಮಹಜರ್‌ನ ವಿಷಯಗಳನ್ನ ನಾನು ಒಪ್ಪುತ್ತೇನೆ. ಮಹಜರ್ ಪ್ರಕ್ರಿಯೆಯ ಸಂದರ್ಭದಲ್ಲಿ ನಾನು ಹಾಜರಿದ್ದು, ನನ್ನ ವಶದಿಂದ 17 ಚಿನ್ನದ ಪೀಸ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ನಾನು ಪುನರುಚ್ಚರಿಸುತ್ತೇನೆ. ಈ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಖಾಸಗಿಯಾಗಿ ಇರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ.

ಪ್ರಶ್ನೆ.3. ಇತ್ತೀಚಿನ ದಿನಗಳಲ್ಲಿ ನೀವು ವಿದೇಶಕ್ಕೆ ಭೇಟಿ ನೀಡಿದ ಸ್ಥಳಗಳು ಮತ್ತು ಆ ಸ್ಥಳಗಳಿಗೆ ನೀವು ಎಷ್ಟು ಬಾರಿ ಪ್ರಯಾಣಿಸಿದ್ದೀರಿ ಎಂಬುದನ್ನು ತಿಳಿಸಿ.

ಉತ್ತರ. ನಾನು ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದ್ದೇನೆ. ದುಬೈ, ಸೌದಿ ಅರೇಬಿಯಾಗಳಿಗೆ ಭೇಟಿ ನೀಡಿದ್ದೇನೆ. ನಾನು ವಿಶ್ರಾಂತಿ ಪಡೆಯದ ಕಾರಣ ಈಗ ದಣಿದಿದ್ದು, ನಾಳೆ ನನ್ನ ಹೇಳಿಕೆ ದಾಖಲಿಸಿಕೊಳ್ಳಿ ಎಂದು ಮನವಿ ಮಾಡ್ತೇನೆ.

ಇದನ್ನೂ ಓದಿ: ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್​ 3 ದಿನ ಡಿಆರ್​ಐ ಕಸ್ಟಡಿಗೆ

ಪ್ರಶ್ನೆ 4 – ನೀವು ಬೇರೆ ಏನಾದರೂ ಹೇಳಲು ಬಯಸುವಿರಾ..?

ಉತ್ತರ: ನಾನು ಹೇಳಲು ಹೆಚ್ಚೇನೂ ಇಲ್ಲ. ಈಗ ನಡೆಯುತ್ತಿರುವ ತನಿಖೆಗೆ ನಾನು ಸಹಕರಿಸುತ್ತೇನೆ ಮತ್ತು ನೀವು ಕರೆದಾಗ ನಿಮ್ಮ ಮುಂದೆ ಹಾಜರಾಗುತ್ತೇನೆ ಎಂದು ಪುನರುಚ್ಚರಿಸುತ್ತೇನೆ. ಈ ಹೇಳಿಕೆಯನ್ನು ದಾಖಲಿಸುವಾಗ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿಲ್ಲ. ನನಗೆ ಕಾಲಕಾಲಕ್ಕೆ ಆಹಾರ ಮತ್ತು ನೀರು ನೀಡಲಾಗುತ್ತಿದೆ. ಆದರೆ ನನಗೆ ಹಸಿವಾಗದ ಕಾರಣ ಮತ್ತು ನೀರು ಕುಡಿಯುವುದರಿಂದ ನಾನು ಏನನ್ನ ತಿನ್ನದಿರಲು ನಿರ್ಧರಿಸಿದ್ದೇನೆ. ನನ್ನ ಈ ಹೇಳಿಕೆಯನ್ನು ಯಾವುದೇ ಬಲಪ್ರಯೋಗ, ಬೆದರಿಕೆ ಅಥವಾ ಪ್ರಚೋದನೆ ಇಲ್ಲದೆ ಮತ್ತು ನನ್ನ ಸಾಮಾನ್ಯ ಮನಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ನೀಡಲಾಗಿದೆ. ಈ ಹೇಳಿಕೆಯ ವಿಷಯಗಳನ್ನು ಓದಲಾಗಿದೆ.
ಇಂತಿ
ಹರ್ಷವರ್ದಿನಿ ರನ್ಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.