AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ‘ಕಾಂತಾರ: ಚಾಪ್ಟರ್ 1’ ಬುಕಿಂಗ್ ಸುನಾಮಿ; ದುಬಾರಿ ಆಯ್ತು ಟಿಕೆಟ್ ದರ

Kantara Chapter 1 Advance Booking: ‘ಕಾಂತಾರ’: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಚಿತ್ರ ಸದ್ಯ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುವ ಸೂಚನೆ ನೀಡಿದೆ. ಅಡ್ವಾನ್ಸ್ ಬುಕಿಂಗ್​ನಿಂದಲೇ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಹರಿದು ಬರಲಿದೆ. ಅಡ್ವಾನ್ಸ್ ಬುಕಿಂಗ್​​ನಲ್ಲಿ ‘ಕಾಂತಾರ’ ಸುನಾಮಿ ಸೃಷ್ಟಿ ಮಾಡಿದೆ.

ಬೆಂಗಳೂರಲ್ಲಿ ‘ಕಾಂತಾರ: ಚಾಪ್ಟರ್ 1’ ಬುಕಿಂಗ್ ಸುನಾಮಿ; ದುಬಾರಿ ಆಯ್ತು ಟಿಕೆಟ್ ದರ
ಕಾಂತಾರ
ರಾಜೇಶ್ ದುಗ್ಗುಮನೆ
|

Updated on:Sep 26, 2025 | 2:30 PM

Share

‘ಕಾಂತಾರ: ಚಾಪ್ಟರ್ 1’ ಚಿತ್ರದ (Kantara: Chapter 1) ಬಿಡುಗಡೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಪಿವಿಆರ್, ಐನಾಕ್ಸ್ ಸೇರಿ ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರಕ್ಕೆ ಸಾಕಷ್ಟು ಶೋಗಳನ್ನು ನೀಡಲಾಗಿದೆ. ಇದರ ಜೊತೆಗೆ ಸಿಂಗಲ್​ ಸ್ಕ್ರೀನ್​ಗಳ ಟಿಕೆಟ್​ಗಳನ್ನು ಆನ್​ಲೈನ್​​ನಲ್ಲಿ ಬಿಡಲಾಗಿದೆ. ಬುಕಿಂಗ್ ಆರಂಭ ಆಗುತ್ತಿದ್ದಂತೆ ಹಲವು ಶೋಗಳು ಸೋಲ್ಡ್​ಔಟ್ ಆಗಿವೆ. ಇನ್ನು, ಸಿನಿಮಾ ಟಿಕೆಟ್ ದರವನ್ನು ದುಬಾರಿ ಮೊತ್ತಕ್ಕೆ ಮಾರಟ ಮಾಡಲಾಗುತ್ತಿದೆ.

‘ಕಾಂತಾರ’: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಚಿತ್ರ ಸದ್ಯ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುವ ಸೂಚನೆ ನೀಡಿದೆ. ಅಡ್ವಾನ್ಸ್ ಬುಕಿಂಗ್​ನಿಂದಲೇ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಹರಿದು ಬರಲಿದೆ. ಅಡ್ವಾನ್ಸ್ ಬುಕಿಂಗ್​​ನಲ್ಲಿ ‘ಕಾಂತಾರ’ ಸುನಾಮಿ ಸೃಷ್ಟಿ ಮಾಡಿದೆ.

ಬೆಂಗಳೂರು ಒಂದರಲ್ಲೇ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ನೂರಾರು ಶೋಗಳನ್ನು ನೀಡಲಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಲ್ಲಿ ಮೊದಲ ದಿನ ಆರು ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಪಿವಿಆರ್​ ಜೊತೆ ಹೊಂಬಾಳೆ ಒಪ್ಪಂದ ಮಾಡಿಕೊಂಡಿದ್ದು, ಇದರ ಅನ್ವಯ ಐನಾಕ್ಸ್ ಹಾಗೂ ಪಿವಿಆರ್​​ ಇದ್ದ ಕಡೆ ಸಿನಿಮಾಗೆ ಹೆಚ್ಚಿನ ಶೋ ಸಿಗೋ ನಿರೀಕ್ಷೆ ಇದೆ.

ಇದನ್ನೂ ಓದಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ
Image
‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್
Image
ಬಿಗ್ ಬಾಸ್​ಗೆ ಶಾಕ್; ಬಿತ್ತು ಎರಡು ಕೋಟಿ ರೂಪಾಯಿ ಕೇಸ್
Image
‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ

ಬೆಂಗಳೂರಿನ ಜನಪ್ರಿಯ ಮಲ್ಟಿಪ್ಲೆಕ್ಸ್​ಗಳಲ್ಲಿ ಒರಾಯನ್​ ಪಿವಿಆರ್ ಕೂಡ ಒಂದು. ಇಲ್ಲಿ ಸದ್ಯ ಅಕ್ಟೋಬರ್ 2ಕ್ಕೆ 15 ಶೋಗಳನ್ನು ನೀಡಲಾಗಿದೆ. ಈ ಎಲ್ಲಾ ಶೋಗಳ ಹೌಸ್​ಫುಲ್ ಆಗುತ್ತಿವೆ. ಕೆಲವೇ ಸೀಟ್​ಗಳು ಮಾರಾಟ ಆದರೆ, ಈ ಶೋಗಳು ಸೋಲ್ಡ್​ಔಟ್ ಆಗಲಿವೆ.

ಟಿಕೆಟ್ ಬೆಲೆ ಎಷ್ಟು?

ಈ ಮೊದಲು ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತಂದಿತ್ತು. ಇದರ ಅನ್ವಯ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ 200 ರೂಪಾಯಿ ಮೀರುವಂತಿರಲಿಲ್ಲ. ಶೇ.18 ಟ್ಯಾಕ್ಸ್ ಮೊತ್ತ ಸೇರಿದರೆ ಟಿಕೆಟ್ ದರ 236 ರೂಪಾಯಿ ಆಗುತ್ತಿತ್ತು. ಆದರೆ, ಇದನ್ನು ಪಿವಿಆರ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕೋರ್ಟ್​ನಲ್ಲಿ ಪ್ರಶ್ನೆ ಮಾಡಿತ್ತು. ಸದ್ಯ ಕೋರ್ಟ್ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಪರಿಣಾಮ ‘ಕಾಂತಾರ: ಚಾಪ್ಟರ್ 1’ ಟಿಕೆಟ್ ದರದಲ್ಲಿ ಏರಿಕೆ ಆಗಿದೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಪಡೆದ ಸಂಭಾವನೆ ಎಷ್ಟು? ಊಹೆಗೂ ಮೀರಿದ್ದು

ಮಲ್ಟಿಪ್ಲೆಕ್ಸ್​ಗಳಲ್ಲಿ ಕ್ಲಾಸಿಕ್ ಅಂದರೆ ಕೆಳ ಹಂತದ ಆಸನಗಳಿಗೆ 340-400 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರೈಮ್​ ಆಸನಗಳಿಗೆ 450-500 ರೂಪಾಯಿ ಟಿಕೆಟ್ ದರ ನಿಗದಿ ಆಗಿದೆ. ರಿಕ್ಲೈನರ್​ ಆಸನಗಳಿಗೆ 800 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ಇದೆ. ಥಿಯೇಟರ್​ನಲ್ಲಿ 200 ರೂಪಾಯಿಯಿಂದ 350 ರೂಪಾಯಿ ಆಸುಪಾಸಿನಲ್ಲಿ ದರ ನಿಗದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:30 pm, Fri, 26 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ