Kantara Chapter 1: ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ; ಇದು ಬೇರೆಯದೇ ಕಥೆ..

‘ಕಾಂತಾರ 2’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರುತ್ತಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.

Kantara Chapter 1: ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ; ಇದು ಬೇರೆಯದೇ ಕಥೆ..
ಕಾಂತಾರ ಪೋಸ್ಟರ್
Follow us
|

Updated on:Nov 27, 2023 | 12:53 PM

ಕಾಂತಾರ 2’ ಚಿತ್ರ ಬರಲಿದೆ ಎಂದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಒಂದು ಕುತೂಹಲ ಇತ್ತು. ಈ ಕುತೂಹಲವನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಪೋಸ್ಟ್ ಮೂಡಿಬಂದಿದೆ. ಇಂದು (ನವೆಂಬರ್ 27) ಚಿತ್ರತಂಡ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ‘ಕಾಂತಾರ ಚಾಪ್ಟರ್ 1’  (Kantara Chapter 1) ಚಿತ್ರದ ಮುಹೂರ್ತ ನೆರವೇರಿಸುವುದರ ಜೊತೆಗೆ ಮೊದಲ ಪೋಸ್ಟರ್ ಅನಾವರಣ ಮಾಡಿದೆ. ಇದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.

‘ಕಾಂತಾರ’ ಚಿತ್ರ ಮೊದಲು ಕನ್ನಡದಲ್ಲಿ ರಿಲೀಸ್ ಆಯಿತು. ಆ ಬಳಿಕ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಬಿಡುಗಡೆ ಕಂಡಿತು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿತು. ಈಗ ‘ಕಾಂತಾರ 2’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರುತ್ತಿದೆ.

ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿರಲಿದೆ ಎಂಬ ಮಾಹಿತಿಯನ್ನು ತಂಡ ಬಿಟ್ಟುಕೊಟ್ಟಿದೆ. ರಿಷಬ್ ಶೆಟ್ಟಿ ಅವರು ಉಗ್ರಾವತಾರ ತಾಳಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಇದೆ. ಅವರು ಬಾವಿಯಲ್ಲಿ ನಿಂತಂತೆ ಕಂಡಿದೆ. ಮೇಲ್ಭಾಗದಲ್ಲಿ ಬೆಂಕಿ ಇದೆ. ಅವರ ಮೇಲೆ ಯಾರೋ ದಾಳಿ ಮಾಡಲು ಬರುತ್ತಿದ್ದಾರೆ. ಕನ್ನಡದ ಜೊತೆ ಏಳು ಭಾಷೆಗಳಲ್ಲಿ ಟೀಸರ್ ಲಭ್ಯವಿದೆ. ಯೂಟ್ಯೂಬ್​ನಲ್ಲಿ ಇಷ್ಟದ ಆಯ್ಕೆಯ ಭಾಷೆಯಲ್ಲಿ ಟೀಸರ್ ನೋಡಬಹುದು.

‘ಕಾಂತಾರ’ ಚಿತ್ರದಲ್ಲಿ ದೈವದ ಕುರಿತು ಇತ್ತು. ‘ಕಾಂತಾರ 2’ ಚಿತ್ರದಲ್ಲೂ ಅದು ಮುಂದುವರಿಯಲಿದೆ. ಇದರ ಜೊತೆಗೆ ಬೇರೆ ರೀತಿಯ ಕಥೆಯನ್ನು ‘ಕಾಂತಾರ 2’ ಹೊಂದಿರಲಿದೆ ಎಂದು ಊಹಿಸಲಾಗುತ್ತಿದೆ.

ಇದನ್ನೂ ಓದಿ: ‘ಕಾಂತಾರ 2’ ಮುಹೂರ್ತಕ್ಕೆ ಸಿದ್ಧವಾದ ಆನೆಗುಡ್ಡೆ ವಿನಾಯಕ ದೇವಸ್ಥಾನ; ಇಲ್ಲಿದೆ ವಿಡಿಯೋ

‘ಕಾಂತಾರ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. ಸಣ್ಣ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈಗ ‘ಕಾಂತಾರ 2’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ತಂಡ ನಿರ್ಧರಿಸಿದೆ. ರಿಷಬ್ ಶೆಟ್ಟಿ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:30 pm, Mon, 27 November 23