ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ – ಪವನ್ ತೇಜ ಅಭಿನಯದ “ಅಲೆಕ್ಸಾ” ಟ್ರೇಲರ್

Aditi Prabhudeva: ಅದಿತಿ ಪ್ರಭುದೇವ ನಟಿಸಿರುವ ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯುಳ್ಳ ‘ಅಲೆಕ್ಸಾ’ ಸಿನಿಮಾದ ಟ್ರೈಲರ್, ಹಾಡುಗಳು ಬಿಡುಗಡೆ ಆಗಿದೆ.

ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ - ಪವನ್ ತೇಜ ಅಭಿನಯದ ಅಲೆಕ್ಸಾ ಟ್ರೇಲರ್
ಅದಿತಿ ಪ್ರಭುದೇವ
Follow us
ಮಂಜುನಾಥ ಸಿ.
|

Updated on: Nov 26, 2023 | 9:45 PM

ಒಟಿಟಿಗಳ (OTT) ಜನಪ್ರಿಯತೆ ಹೆಚ್ಚಾದ ಬಳಿಕ ಥ್ರಿಲ್ಲರ್ ಸಿನಿಮಾಗಳು ತುಸು ಹೆಚ್ಚಾಗಿವೆ. ಅದರಲ್ಲಿಯೂ ಥ್ರಿಲ್ಲರ್ ಸಿನಿಮಾಗಳಲ್ಲಿ ಪುರುಷರೇ ನಾಯಕರಾಗಿ ಇರುತ್ತಿದ್ದಿದ್ದು ಸಾಮಾನ್ಯ ಆಗಿರುತ್ತಿತ್ತು, ಆದರೆ ಇತ್ತೀಚೆಗೆ ಮಹಿಳಾ ಪ್ರಧಾನ ಥ್ರಿಲ್ಲರ್ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಕನ್ನಡದಲ್ಲೂ ಸಹ ಈ ರೀತಿಯ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ನಟಿ ಅದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ.

ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ – ನಾಯಕಿಯಾಗಿ‌ ನಟಿಸಿರುವ ‘ಅಲೆಕ್ಸಾ’ ಹೆಸರಿನ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿವೆ. ಟ್ರೈಲರ್ ಹಾಗೂ ಹಾಡುಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ‘ಅಲೆಕ್ಸಾ’ ಸಿನಿಮಾವನ್ನು ವಿ.ಚಂದ್ರು ನಿರ್ಮಾಣ ಮಾಡಿದ್ದಾರೆ. ಜೀವ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ “ಭುಜಂಗ” ಹೆಸರಿನ ಸಿನಿಮಾ ನಿರ್ದೇಶಿಸಿದ್ದ ಜೀವ ‘ಅಲೆಕ್ಸಾ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಜೀವ ‘”ಅಲೆಕ್ಸಾ” ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ “ಅಲೆಕ್ಸಾ” ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ 29 ನಮ್ಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದರು.

ಇದನ್ನೂ ಓದಿ:ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ..

ಸಿನಿಮಾದಲ್ಲಿ ನಾಯಕಿ ಅದಿತಿ ಪ್ರಭುದೇವ ಇನ್​ಸ್ಪೆಕ್ಟರ್ ಆಗಿ ನಟಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ, ಸಿನಿಮಾದಲ್ಲಿ “ಅಲೆಕ್ಸಾ” ನನ್ನ ಪಾತ್ರದ ಹೆಸರು. ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ ಎಂದರು.

ನಮ್ಮದು ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎನ್ನಬಹುದು. ಈ ಹಿಂದೆ ಕನ್ನಡದಲ್ಲಿ ಮರ್ಡರ್ ಮಿಸ್ಟರಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವರ್ಷದ ಕೊನೆಗೆ ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಪವನ್ ತೇಜ್. ಚಿತ್ರದಲ್ಲಿ ನಟಿಸಿರುವ ನಾಗಾರ್ಜುನ, ಛಾಯಾಗ್ರಾಹಕ ಸತೀಶ್ ಚಂದ್ರ ಹಾಗೂ ಸಂಕಲನಕಾರ ಉಮೇಶ್ ಆರ್ ಬಿ ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಅಲೆಕ್ಸಾ” ಚಿತ್ರದ ಕುರಿತು ಮಾತನಾಡಿದರು.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆಲುತ್ತಿದೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ‌. ಡಿಸೆಂಬರ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ