‘ಕಾಂತಾರ’ ಚಿತ್ರಕ್ಕೆ ಬರಲಿದೆ ಮತ್ತೊಂದು ಪಾರ್ಟ್? ಟಾಲಿವುಡ್ ಖ್ಯಾತ ಹೀರೋಗೆ ಮಣೆ?
Kantara: Chapter 1: ಕಾಂತಾರ ಚಿತ್ರದ ಭಾರೀ ಯಶಸ್ಸಿನ ಬಳಿಕ, ಚಿತ್ರಕ್ಕೆ ಪ್ರಿಕ್ವೆಲ್ ಬರುತ್ತಿದೆ.ಅಕ್ಟೋಬರ್ 2ರಂದು ಪ್ರಿಕ್ವೆಲ್ ಬಿಡುಗಡೆಯಾಗಲಿದೆ. ಸೀಕ್ವೆಲ್‌ನಲ್ಲಿ ಜೂನಿಯರ್ ಎನ್ಟಿಆರ್ ನಟಿಸುವ ಸಾಧ್ಯತೆಯಿದೆ ಎಂಬುದು ಸದ್ಯದ ಸುದ್ದಿ. ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಈ ಚಿತ್ರಗಳು ಮೂಡಿ ಬರುತ್ತಿವೆ.

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಸಿನಿಮಾದ ಬಗ್ಗೆ ಭರ್ಜರಿ ಅಪ್ಡೇಟ್ ಒಂದು ಸಿಕ್ಕಿದೆ. ‘ಕಾಂತಾರ’ (Kantara) ಸಿನಿಮಾಗೆ ಪ್ರೀಕ್ವೆಲ್ ಮಾತ್ರವಲ್ಲ, ಸೀಕ್ವೆಲ್ ಕೂಡ ಬರಲಿದೆಯಂತೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ 280ಕ್ಕೂ ಹೆಚ್ಚು ದಿನ ಶೂಟ್ ಮಾಡಲಾಗಿದೆ. ರಿಷಬ್ ಅವರು ಕಳೆದ ಮೂರು ವರ್ಷಗಳಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ಮೋಹನ್ಲಾಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈಗ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.
‘ಕಾಂತಾರ: ಚಾಪ್ಟರ್ 1’ಗೆ ಸಿನಿಮಾ ಪೂರ್ಣಗೊಳ್ಳುವುದಿಲ್ಲವಂತೆ. ಈ ಸಿನಿಮಾಗೆ ಸೀಕ್ವೆಲ್ ತರುವ ಆಲೋಚನೆ ಕೂಡ ಇದೆ. ಹಾಗೆ ಏನಾದರೂ ನಡೆದರೆ, ‘ಕಾಂತಾರ: ಚಾಪ್ಟರ್ 2’ ಎನ್ನುವ ಶೀರ್ಷಿಕೆ ಇಡಬಹುದು. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ರಿಷಬ್ ಶೆಟ್ಟಿ ಹಾಗೂ ಜೂನಿಯರ್ ಎನ್ಟಿಆರ್ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಮೊದಲು ಜೂನಿಯರ್ ಎನ್ಟಿಆರ್ ಅವರು ತಮ್ಮ ತಾಯಿ ಜೊತೆ ಕುಂದಾಪುರಕ್ಕೆ ತೆರಳಿದ್ದರು. ಈ ವೇಳೆ ‘ಕಾಂತಾರ’ ಸಿನಿಮಾದಲ್ಲಿ ನಟಿಸುವ ಆಫರ್ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಅಂದುಕೊಂಡ ದಿನಾಂಕದಂದೇ ಬರಲಿದೆ ‘ಕಾಂತಾರ: ಚಾಪ್ಟರ್ 1’
ಈಗಾಗಲೇ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಚಿತ್ರದ ಮೂಲಕ ಹಿಂದಿಗೆ ಕಾಲಿಟ್ಟಿದ್ದಾರೆ. ಅವರು ಕನ್ನಡದಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಒಂದೊಮ್ಮೆ ಅವರು ಕನ್ನಡಕ್ಕೆ ಬಂದರೆ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. ಸದ್ಯ ಅವರು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Mon, 4 August 25




