‘ಕಾಂತಾರ ಬಾಕ್ಸ್​ ಆಫೀಸ್​ ಓಟಕ್ಕಿಲ್ಲ ಬ್ರೇಕ್​; ಹಿಂದಿಯಲ್ಲಿ 50 ಕೋಟಿ ರೂ. ದಾಟಿದ ಕಲೆಕ್ಷನ್

| Updated By: Digi Tech Desk

Updated on: Nov 04, 2022 | 5:35 PM

ಸೋಮವಾರ (ಅಕ್ಟೋಬರ್ 31) ಮತ್ತು ಮಂಗಳವಾರ (ನವೆಂಬರ್ 1) ತಲಾ 2.30 ಕೋಟಿ ಗಳಿಸಿಕೊಂಡಿ ಕೊಂಡಿದ್ದ ‘ಕಾಂತಾರ’ ಚಿತ್ರ ಬುಧವಾರ (ನವೆಂಬರ್ 2) 2.05 ಕೋಟಿ ರೂ. ಗಳಿಸಿಕೊಂಡು ಓಟ ಮುಂದುವರಿಸಿತ್ತು. ‘

‘ಕಾಂತಾರ ಬಾಕ್ಸ್​ ಆಫೀಸ್​ ಓಟಕ್ಕಿಲ್ಲ ಬ್ರೇಕ್​; ಹಿಂದಿಯಲ್ಲಿ 50 ಕೋಟಿ ರೂ. ದಾಟಿದ ಕಲೆಕ್ಷನ್
ರಿಷಬ್ ಶೆಟ್ಟಿ
Follow us on

‘ಕಾಂತಾರ’ (Kantara Movie) ಸಿನಿಮಾ ರಿಲೀಸ್​ ಆದಾಗಿನಿಂದಲು ಎಷ್ಟೇ ಅಡೆತಡೆ ಬಂದರೂ ಇದರ ಓಟಕ್ಕೆ ಬ್ರೇಕ್​ ಬಿದ್ದಿಲ್ಲ. ರಿಷಬ್ ಶೆಟ್ಟಿ (Rishab Shetty) ನಟನೆಯ ಈ ಚಿತ್ರ ಹಿಂದಿಯಲ್ಲಿ ತೆರೆಕಂಡು 20 ದಿನಗಳಾಗಿವೆ. ಹಿಂದಿಯಲ್ಲಿ ‘ಕಾಂತಾರ’ ಸಿನಿಮಾ  ಇಂದು (ನವೆಂಬರ್ 4) 50 ಕೋಟಿ ದಾಟಿದೆ. ‘ಕಾಂತಾರ’ ಚಿತ್ರವು ಕನ್ನಡದಲ್ಲಿ ಸೆಪ್ಟಂಬರ್ 30ಕ್ಕೆ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಇದಾದ ಬೆನ್ನಲ್ಲೇ ಹಿಂದಿಯಲ್ಲೂ ಈ ಚಿತ್ರ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಸೋಮವಾರ (ಅಕ್ಟೋಬರ್ 31) ಮತ್ತು ಮಂಗಳವಾರ (ನವೆಂಬರ್ 1) ತಲಾ 2.30 ಕೋಟಿ ಗಳಿಸಿಕೊಂಡಿ ಕೊಂಡಿದ್ದ ‘ಕಾಂತಾರ’ ಚಿತ್ರ ಬುಧವಾರ (ನವೆಂಬರ್ 2) 2.05 ಕೋಟಿ ರೂ. ಗಳಿಸಿಕೊಂಡು ಓಟ ಮುಂದುವರಿಸಿತ್ತು. ‘ಕಾಂತಾರ’ ಚಿತ್ರದ ಕ್ರೇಜ್​ ಕಡಿಮೆಯಾಗಿಲ್ಲ. ಹಿಂದಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಚಿತ್ರದ ಅಬ್ಬರ ಇರಲಿದೆ.

‘ಕಾಂತಾರ’ ಚಿತ್ರವನ್ನು ರಿಷಬ್​ ಅವರು ನಿರ್ದೇಶಿಸಿ ನಟಿಸಿದ್ದಾರೆ. ಸದಾ ಹೊಸದನ್ನು ಪ್ರಯತ್ನಿಸುವ ಅವರು ಈ ಬಾರಿ ‘ಕಾಂತಾರ’ ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಪ್ರತಿ ಚಿತ್ರದ ಗೆಲುವಿನ ನಂತರ ಅದೇ ಶೈಲಿಯ ಸಿನಿಮಾಗೆ ಜೋತು ಬಿಳದೇ ಹೊಸದನ್ನು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

‘ಕಾಂತಾರ’ ಚಿತ್ರದ ಮುಂದೆ ಬಾಲಿವುಡ್​ ಹೀರೋ ಅಕ್ಷಯ ಕುಮಾರ್ ಅಭಿಯನದ ‘ರಾಮ್​ ಸೇತು’ ಸಿನಿಮಾ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ-ಅಜಯ್ ದೇವಗನ್ ನಟನೆಯ ‘ಥ್ಯಾಂಕ್​ ಗಾಡ್’ ಹೇಳಿಕೊಳ್ಳುವಷ್ಟು ಕಲೆಕ್ಷನ್​ ಮಾಡಿಲ್ಲ.

ರಿಷಬ್​ ಶೆಟ್ಟಿ ಅವರ ಈ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆದ ಕೆಲ ದಿನ ಸಾಧಾರಣ ಗಳಿಕೆ ಮಾಡಿತ್ತು. ದೀಪಾವಳಿ ನಂತರದಲ್ಲಿ ಚಿತ್ರಕ್ಕೆ ಬಾಯಿಮಾತಿನ ಪ್ರಚಾರ ಸಿಕ್ಕಿದೆ. ಇದು ಚಿತ್ರಕ್ಕೆ ವರದಾನವಾಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಈಗಲೂ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಈ ಚಿತ್ರ ರಿಲೀಸ್ ಆಗಿ ತಿಂಗಳ ಮೇಲಾದರೂ ಚಿತ್ರದ ಅಬ್ಬರ ಕಡಿಮೆ ಆಗಿಲ್ಲ.