ಐಎಂಡಿಬಿಯಲ್ಲಿ 249 ಚಿತ್ರಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದ ‘ಕಾಂತಾರ’; ರಿಷಬ್ ಸಿನಿಮಾ ನಡೆದಿದ್ದೇ ಹಾದಿ

ಐಎಂಡಿಬಿಯಲ್ಲಿ ಪ್ರೇಕ್ಷಕರು ಸಿನಿಮಾಗಳಿಗೆ ರೇಟಿಂಗ್ ನೀಡುತ್ತಾರೆ. ಈ ರೇಟಿಂಗ್ ಆಧರಿಸಿ ಅನೇಕರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಈಗ ‘ಕಾಂತಾರ’ ಚಿತ್ರಕ್ಕೆ ಐಎಂಡಿಬಿಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 9.4 ರೇಟಿಂಗ್ ಸಿಕ್ಕಿದೆ.

ಐಎಂಡಿಬಿಯಲ್ಲಿ 249 ಚಿತ್ರಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದ ‘ಕಾಂತಾರ’; ರಿಷಬ್ ಸಿನಿಮಾ ನಡೆದಿದ್ದೇ ಹಾದಿ
ಕಾಂತಾರ
Edited By:

Updated on: Oct 18, 2022 | 10:16 PM

‘ಆನೆ ನಡೆದಿದ್ದೇ ಹಾದಿ’ ಎಂಬ ಮಾತು ಕನ್ನಡದ ‘ಕಾಂತಾರ’ (Kantara Movie)ಸಿನಿಮಾಗೆ ಸರಿಯಾಗಿ ಅನ್ವಯ ಆಗುತ್ತದೆ. ಈ ಚಿತ್ರ ಸ್ಯಾಂಡಲ್​ವುಡ್​ ಮಾತ್ರವಲ್ಲ ಪರಭಾಷೆಯಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರ ಸೃಷ್ಟಿ ಮಾಡುತ್ತಿರುವ ದಾಖಲೆಗಳು ಹಲವು. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಚಿತ್ರ ಅಬ್ಬರಿಸುತ್ತಿದೆ. ಈಗ ‘ಕಾಂತಾರ’ ಚಿತ್ರ ಐಎಂಡಿಬಿ ರೇಟಿಂಗ್​ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದೆ. ಭಾರತದ 250 ಟಾಪ್​ ರೇಟೆಡ್ ಚಿತ್ರಗಳ ಪೈಕಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾಗೆ ಮೊದಲ ಸ್ಥಾನ ಸಿಕ್ಕಿದೆ.

ಐಎಂಡಿಬಿಯಲ್ಲಿ ಪ್ರೇಕ್ಷಕರು ಸಿನಿಮಾಗಳಿಗೆ ರೇಟಿಂಗ್ ನೀಡುತ್ತಾರೆ. ಈ ರೇಟಿಂಗ್ ಆಧರಿಸಿ ಅನೇಕರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಈಗ ‘ಕಾಂತಾರ’ ಚಿತ್ರಕ್ಕೆ ಐಎಂಡಿಬಿಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 9.4 ರೇಟಿಂಗ್ ಸಿಕ್ಕಿದೆ. ಹೀಗಾಗಿ ಭಾರತದ ಟಾಪ್​ 250 ಚಿತ್ರಗಳ ಪೈಕಿ ಈ ಸಿನಿಮಾಗೆ ಅಗ್ರಸ್ಥಾನ ಸಿಕ್ಕಿದೆ. ‘ಪಿಕೆ’, ‘3 ಈಡಿಯಟ್ಸ್​’, ‘ಜೈ ಭೀಮ್’, ‘96’, ‘ಅಸುರನ್’, ಸೇರಿ ಬೇರೆ ಬೇರೆ ಭಾಷೆಯ ಅನೇಕ ಸೂಪರ್​ ಹಿಟ್ ಚಿತ್ರಗಳನ್ನು ‘ಕಾಂತಾರ’ ಹಿಂದಿಕ್ಕಿದೆ. ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ 8ನೇ ಸ್ಥಾನದಲ್ಲಿದೆ. ‘ಲೂಸಿಯಾ’, ‘ಕೆಜಿಎಫ್ 1’, ದಿಯಾ ಮೊದಲಾದ ಕನ್ನಡದ ಚಿತ್ರಗಳು ಈ ಲಿಸ್ಟ್​ನಲ್ಲಿವೆ.

ಇದನ್ನೂ ಓದಿ
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

ಬುಕ್​ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್

‘ಕಾಂತಾರ’ ಚಿತ್ರಕ್ಕೆ ಕನ್ನಡದವರು ನೀಡಿದ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಕನ್ನಡದಲ್ಲೇ ಈ ಚಿತ್ರವನ್ನು ನೋಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರು. ಆ ಬಳಿಕ ಬೇರೆ ಭಾಷೆಗೂ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಒತ್ತಾಯ ಹೆಚ್ಚಿದ್ದರಿಂದ ಚಿತ್ರವನ್ನು ಹಿಂದಿ, ತೆಲುಗು, ತಮಿಳಿನಲ್ಲಿ ರಿಲೀಸ್ ಮಾಡಲಾಯಿತು. ಅಲ್ಲಿನವರಿಂದಲೂ ಸಿನಿಮಾಗೆ ಶಹಭಾಷ್​ಗಿರಿ ಸಿಕ್ಕಿದೆ.

ಹಿಂದಿಯಲ್ಲಿ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಸಿನಿಮಾ ಕೋಟಿಕೋಟಿ ಕಲೆಕ್ಷನ್ ಮಾಡುತ್ತಿದೆ. ಬುಕ್ ಮೈ ಶೋನಲ್ಲಿ ಹಿಂದಿ ವರ್ಷನ್​​ಗೆ 26.5 ಸಾವಿರ ಮಂದಿ ವೋಟ್ ಮಾಡಿದ್ದು 9.5 ರೇಟಿಂಗ್ ಪಡೆದುಕೊಂಡಿದೆ. ತಮಿಳಿನಲ್ಲಿ ಈ ಸಿನಿಮಾಗೆ 5.8 ಸಾವಿರ ವೋಟ್ ಬಿದ್ದಿದ್ದು, 9.1 ರೇಟಿಂಗ್ ಸಿಕ್ಕಿದೆ. ತೆಲುಗಿನವರಂತೂ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. 25 ಸಾವಿರಕ್ಕೂ ಅಧಿಕ ವೋಟಿಂಗ್ ಸಿಕ್ಕಿದ್ದು, 9.4 ರೇಟಿಂಗ್ ಸಿಕ್ಕಿದೆ. ಅಕ್ಟೋಬರ್ 20ರಂದು ಚಿತ್ರ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ.

Published On - 7:52 pm, Tue, 18 October 22