‘ಕಪ್ಪೆ ರಾಗ’ ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯುಮೆಂಟರಿಗೆ ಪ್ರತಿಷ್ಠಿತ ಪ್ರಶಸ್ತಿ; ಇದರ ವಿಶೇಷತೆಗಳೇನು?
ಪ್ರಶಾಂತ್ ಅವರು ಮಳೆ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಒಂದು ಅಪರೂಪದ ಕಪ್ಪೆಯ ಬಗ್ಗೆ ತಿಳಿಯಿತು. ಕಪ್ಪೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಡಾ. ಗಿರೀಶ್ ಜನ್ನೆ ಈ ಕಪ್ಪೆಯ ವಿಶೇಷತೆ ಬಗ್ಗೆ ತಿಳಿಸಿದರು. ಆಗ ಹುಟ್ಟಿದ್ದೇ ಕಪ್ಪೆ ರಾಗ.
ಸಿನಿಮಾ ವಿಚಾರಗಳಲ್ಲಿ ಮಾತ್ರವಲ್ಲ ಡಾಕ್ಯುಮೆಂಟರಿ ನಿರ್ಮಾಣದಲ್ಲೂ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಆ ಸಾಲಿನಲ್ಲಿ ‘ಕಪ್ಪೆ ರಾಗ’ (Kappe Raga) ಕೂಡ ಒಂದು. ಇದು ಕನ್ನಡದ ಮೊದಲ ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯುಮೆಂಟರಿ ಫಿಲಂ ಎಂಬ ಹೆಗ್ಗಳಿಕೆ ಇದಕ್ಕೆ ಸಲ್ಲಿಕೆ ಆಗುತ್ತದೆ. ಈ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಖ್ಯಾತಿ ಪಡೆದಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ದೊರೆತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಸಿಎಂ ಆಫ್ ಕರ್ನಾಟಕ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ‘ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ ‘ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ’ ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ನಂತಹ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ’ ಎಂದು ಬರೆಯಲಾಗಿದೆ.
‘ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತು ಅವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ. ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ’ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಪ್ರಶಾಂತ್ ಅವರು ಮಳೆ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಒಂದು ಅಪರೂಪದ ಕಪ್ಪೆಯ ಬಗ್ಗೆ ತಿಳಿಯಿತು. ಕಪ್ಪೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಡಾ. ಗಿರೀಶ್ ಜನ್ನೆ ಈ ಕಪ್ಪೆಯ ವಿಶೇಷತೆ ಬಗ್ಗೆ ತಿಳಿಸಿದರು. ಆಗ ಹುಟ್ಟಿದ್ದೇ ಕಪ್ಪೆ ರಾಗ. ಹೀಗಾಗಿ ಮ್ಯೂಸಿಕ್ ಮೂಲಕ ಈ ವಿಚಾರವನ್ನು ಹೇಳಲು ಪ್ರಶಾಂತ್ ನಿರ್ಧರಿಸಿದರು. ಗೌತಮ್ ಸಿನಿಮಾ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಗೆದ್ದ ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಡಾಕ್ಯುಮೆಂಟರಿ
ಮಾನ್ಸೂನ್ನಲ್ಲಿ ಈ ಸಿನಿಮಾನ ಶೂಟ್ ಮಾಡೋದು ಒಂದು ಚಾಲೆಂಜ್ ಆದರೆ, ಈ ಕಪ್ಪೆಯನ್ನು ಗುರುತಿಸೋದು ಮತ್ತೊಂದು ಸವಾಲು. ಈ ಎಲ್ಲಾ ಚಾಲೆಂಜ್ನ ಸ್ವೀಕರಿಸಿ ಅವರು ಈ ಮ್ಯೂಸಿಕ್ ಡಾಕ್ಯುಮೆಂಟರಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ