ಪ್ರಶಸ್ತಿ ಗೆದ್ದ ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಡಾಕ್ಯುಮೆಂಟರಿ
ಪತ್ರಕರ್ತರ ಮೇಲಿನ ದಾಳಿ ಭಾರತಕ್ಕೆ ಸೀಮಿತವಾಗಿಲ್ಲ, ಇದು ದೇಶಕ್ಕೆ ಹೊಸದೂ ಅಲ್ಲ. ಆದರೆ ಕಳೆದ ಒಂದು ದಶಕದಲ್ಲಿ ಈ ದಾಳಿಗಳು ನಡೆದಿರುವ ತೀವ್ರತೆಯ ಬಗ್ಗೆ ಅನೇಕರು ಆತಂಕ ಹೊರ ಹಾಕಿದ್ದಾರೆ.
ಪತ್ರಕರ್ತರ ಮೇಲೆ ಆಗುತ್ತಿರುವ ಹಲ್ಲೆ, ಹತ್ಯೆ ಹಾಗೂ ಗೌರಿ ಲಂಕೇಶ್ (Gauri Lankesh) ಅವರನ್ನು ಆಧರಿಸಿ ಸಿದ್ಧಗೊಂಡ ‘ಗೌರಿ’ ಡಾಕ್ಯುಮೆಂಟರಿ ‘ಟೊರೊಂಟೊ ಮಹಿಳಾ ಚಲನಚಿತ್ರೋತ್ಸವ 2022’ನಲ್ಲಿ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ ‘ಬೆಸ್ಟ್ ಹ್ಯೂಮನ್ ರೈಟ್ಸ್ ಅವಾರ್ಡ್’ ಬಾಚಿಕೊಂಡಿದೆ. ಈ ಸಿನಿಮಾ ಈ ಮೊದಲು ಮಾಂಟ್ರಿಯಲ್ನ ದಕ್ಷಿಣ ಏಷ್ಯಾ ಸಿನಿಮೋತ್ಸವ, ಆಂಸ್ಟರ್‌ಡ್ಯಾಮ್‌ನ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ ಸೇರಿ ಹಲವು ಫಿಲ್ಮ್ ಫೆಸ್ಟಿವಲ್ನಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು.
ಕಳೆದ ಐದು ವರ್ಷಗಳಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರಮೇಲೆ ಹಲ್ಲೆ ಆಗಿರುವ ಬಗ್ಗೆ ವರದಿ ಆಗಿದೆ. 30ಕ್ಕೂ ಹೆಚ್ಚು ಜರ್ನಲಿಸ್ಟ್ಗಳನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ತಿಳಿಯುವುದು ಈ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ‘ಮಾಧ್ಯಮಗಳ ಸ್ವಾತಂತ್ರ್ಯ ಇಂಡೆಕ್ಸ್’ನಲ್ಲಿ ಭಾರತಕ್ಕೆ 150ನೇ ಸ್ಥಾನ ಸಿಕ್ಕಿದೆ. ಪತ್ರಕರ್ತರ ಮೇಲಿನ ದಾಳಿ ಭಾರತಕ್ಕೆ ಸೀಮಿತವಾಗಿಲ್ಲ, ಇದು ದೇಶಕ್ಕೆ ಹೊಸದೂ ಅಲ್ಲ. ಆದರೆ ಕಳೆದ ಒಂದು ದಶಕದಲ್ಲಿ ಈ ದಾಳಿಗಳು ನಡೆದಿರುವ ತೀವ್ರತೆಯ ಬಗ್ಗೆ ಅನೇಕರು ಆತಂಕ ಹೊರ ಹಾಕಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನಿಸಿ ‘ಗೌರಿ’ ಡಾಕ್ಯುಮೆಂಟರಿ ಮೂಡಿ ಬಂದಿದೆ.
ಭಾರತದಲ್ಲಿ ಮಾಧ್ಯಮದವರು ಎದುರಿಸುತ್ತಿರುವ ಬೆದರಿಕೆ, ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ‘ಗೌರಿ’ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಇದಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗಲೇ ಈ ಡಾಕ್ಯುಮೆಂಟರಿ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೈನಿಂಗ್ ನೀಡಿದ್ದ ಪ್ರದೇಶವನ್ನೇ ಅಡ್ಡಾ ಮಾಡಿಕೊಂಡ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು
ಕವಿತಾ ಅವರು ಚಿತ್ರರಂಗದಲ್ಲಿ ಈ ಮೊದಲಿನಂದಲೂ ಗುರುತಿಸಿಕೊಂಡಿದ್ದಾರೆ. 1999ರಲ್ಲಿ ಅವರ ನಿರ್ದೇಶನದ ಮೊದಲ ಸಿನಿಮಾ ‘ದೇವೀರಿ’ ತೆರೆಗೆ ಬಂತು. ಈ ಸಿನಿಮಾ ಅಂತಾರಾಷ್ಟ್ರೀಯ ಪ್ರಶಸ್ತಿ, ಎರಡು ರಾಷ್ಟ್ರ ಪ್ರಶಸ್ತಿ, 9 ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿತು. ನಂತರ ‘ಪ್ರೀತಿ ಪ್ರೇಮ ಪ್ರಣಯ’, ‘ಕ್ರೇಜಿ ಲೋಕ’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದರು. ಹಲವು ಸಿನಿಮೋತ್ಸವಗಳಿಗೆ ಅವರು ಜ್ಯೂರಿ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಜ್ಞಾನ ಇದೆ.