ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದಿಂದ ಹೊರನಡೆದ ಕರೀನಾ ಕಪೂರ್​ ಖಾನ್​?

ಬಹುನಿರೀಕ್ಷಿತ ‘ಟಾಕ್ಸಿಕ್​’ ಸಿನಿಮಾದ ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ. ನಟ ಯಶ್​ ಅವರಿಗೆ ಇದು ಮಹತ್ವಾಕಾಂಕ್ಷಿ ಪ್ರಾಜೆಕ್ಟ್​. ಈ ಸಿನಿಮಾದಲ್ಲಿ ಅವರ ಜೊತೆ ಯಾರೆಲ್ಲ ನಟಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ. ಕರೀನಾ ಕಪೂರ್​ ಖಾನ್​ ಅವರು ಈ ಚಿತ್ರದಲ್ಲಿ ನಟಿಸುತ್ತಾರೆ ಎಂದು ಗಾಸಿಪ್​ ಹಬ್ಬಿತ್ತು. ಆದರೆ ಈಗ ಅವರು ಚಿತ್ರತಂಡದಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ.

ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದಿಂದ ಹೊರನಡೆದ ಕರೀನಾ ಕಪೂರ್​ ಖಾನ್​?
ಯಶ್​, ಕರೀನಾ ಕಪೂರ್​
Follow us
ಮದನ್​ ಕುಮಾರ್​
|

Updated on: May 03, 2024 | 6:23 PM

ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​ (Yash) ಅವರ ಸಂಪೂರ್ಣ ಗಮನ ಈಗ ‘ಟಾಕ್ಸಿಕ್​’ (Toxic) ಸಿನಿಮಾದ ಮೇಲಿದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗಿದ್ದರೂ ಕೂಡ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಇವು ಪ್ಯಾನ್​ ಇಂಡಿಯಾ ಪ್ರಾಜೆಕ್ಟ್​ ಆದ್ದರಿಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕಲಾವಿದರಿಗೆ ಮಣೆ ಹಾಕಲಾಗುತ್ತಿದೆ ಎನ್ನಲಾಗಿದೆ. ಕೆಲವು ದಿನಗಳಿಂದೀಚೆಗೆ ನಟಿ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರ ಹೆಸರು ಕೇಳಿಬಂದಿತ್ತು. ಆದರೆ ಈಗ ಅವರು ‘ಟಾಕ್ಸಿಕ್​’ ಸಿನಿಮಾದಿಂದ ಹೊರನಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿವೆ.

ವರದಿಗಳ ಪ್ರಕಾರ, ಕರೀನಾ ಕಪೂರ್​ ಖಾನ್​ ಅವರು ಡೇಟ್ಸ್​ ಸಮಸ್ಯೆಯಿಂದ ‘ಟಾಕ್ಸಿಕ್​’ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈ ಚಿತ್ರದಲ್ಲಿ ಅಭಿನಯಿಸಲು ಅವರಿಗೆ ಸಂಪೂರ್ಣ ಇಷ್ಟ ಇತ್ತು. ಆದರೆ ‘ಟಾಕ್ಸಿಕ್​’ ಚಿತ್ರೀಕರಣಕ್ಕೆ ಅವಶ್ಯಕತೆ ಇರುವಷ್ಟು ಕಾಲ್​ಶೀಟ್​ ನೀಡಲು ಕರೀನಾಗೆ ಸಾಧ್ಯವಾಗಿಲ್ಲ. ಆ ಕಾರಣದಿಂದ ಅವರನ್ನು ಚಿತ್ರತಂಡದಿಂದ ಹೊರಗಿಡುವುದು ಅನಿವಾರ್ಯ ಆಗಿದೆ ಎಂಬ ಗಾಸಿಪ್​ ಹರಿದಾಡುತ್ತಿದೆ.

ಒಂದು ದೊಡ್ಡ ಸಿನಿಮಾ ಎಂದಾಗ ನೂರಾರು ಗಾಸಿಪ್​ಗಳು ಕೇಳಿಬರುತ್ತವೆ. ಪಾತ್ರಧಾರಿಗಳ ಹೆಸರು ಬಹಿರಂಗ ಆಗುವುದಕ್ಕೂ ಮೊದಲೇ ಅನೇಕ ಅಂತೆ-ಕಂತೆಗಳು ಹುಟ್ಟಿಕೊಳ್ಳುವುದು ಕೂಡ ಸಹಜ. ಅದೇ ರೀತಿ ‘ಟಾಕ್ಸಿಕ್​’ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ಅವರು ಯಶ್​ ಸಹೋದರಿಯಾಗಿ ನಟಿಸುತ್ತಾರೆ ಎಂದು ಗಾಸಿಪ್​ ಹರಡಿತ್ತು. ಆದರೆ ಈಗ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಕರೀನಾ ಕಪೂರ್​ ಅವರಾದರೂ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಸರ್ಕಾರದ ಈವರೆಗಿನ ಕೆಲಸ ತೃಪ್ತಿ ನೀಡಿದೆಯಾ? ಮತಗಟ್ಟೆಯಲ್ಲೇ ಉತ್ತರ ನೀಡಿದ ಯಶ್​

ಯಶ್​ ಹಾಗೂ ಅವರ ಅಭಿಮಾನಿಗಳ ಪಾಲಿಗೆ ‘ಟಾಕ್ಸಿಕ್​’ ಒಂದು ಮಹತ್ವಾಕಾಂಕ್ಷಿ ಪ್ರಾಜೆಕ್ಟ್​. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಅತಿ ದೊಡ್ಡ ಗೆಲುವಿನ ಬಳಿಕ ಯಶ್​ ಒಪ್ಪಿಕೊಂಡ ಸಿನಿಮಾ ಇದು. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಪ್ಲ್ಯಾನಿಂಗ್​ ಮಾಡಿಕೊಂಡು ಯಶ್​ ಅವರು ಪ್ರತಿ ಹೆಜ್ಜೆ ಇಡುತ್ತಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಮೂಲಕ ‘ಟಾಕ್ಸಿಕ್​’ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.