ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್​; ಸಿನಿಮಾ ಪ್ರದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ

ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್​; ಸಿನಿಮಾ ಪ್ರದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ
ಸ್ಯಾಂಡಲ್​ವುಡ್​

ಬಂದ್​ ವಿಚಾರದ ಕುರಿತಂತೆ ಇಂದು (ಡಿಸೆಂಬರ್​ 24) ವಾಣಿಜ್ಯ ಮಂಡಳಿ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕೇವಲ ನೈತಿಕ ಬೆಂಬಲ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.

TV9kannada Web Team

| Edited By: Rajesh Duggumane

Dec 24, 2021 | 6:17 PM

ಕನ್ನಡದ ಬಾವುಟಕ್ಕೆ ಅವಮಾನ, ಎಂಇಎಸ್​ ಪುಂಡಾಟಿಕೆ ಖಂಡಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್​​ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಇನ್ನೂ ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ನೀಡಿವೆ. ಈ ಬಂದ್​ಅನ್ನು ಬೆಂಬಲಿಸ ಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ದೀರ್ಘ ಚರ್ಚೆ ನಡೆದಿತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿ ಕನ್ನಡ ಚಿತ್ರರಂಗದವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಬಂದ್​ಗೆ ಕೇವಲ ನೈತಿಕ ಬೆಂಬಲ ಕೊಡುವುದಾಗಿ ಘೋಷಣೆ ಮಾಡಲಾಗಿದೆ.

ಬಂದ್​ ವಿಚಾರದ ಕುರಿತಂತೆ ಇಂದು (ಡಿಸೆಂಬರ್​ 24) ವಾಣಿಜ್ಯ ಮಂಡಳಿ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕೇವಲ ನೈತಿಕ ಬೆಂಬಲ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸೆಂಬರ್​ 31 ಶುಕ್ರವಾರ ಬಂದಿದೆ. ಆ ದಿನ ಹಲವು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಈಗಾಗಲೇ ಕೊವಿಡ್​ನಿಂದ ಚಿತ್ರರಂಗದ ಸಾಕಷ್ಟು ತೊಂದರೆ ಅನುಭವಿಸಿದೆ. ಈಗ ಸಿನಿಮಾ ರಿಲೀಸ್​ ದಿನವೇ ಬಂದ್​ ಆದರೆ, ಚಿತ್ರರಂಗದ ಮೇಲೆ ಹೊಡೆತ ಬೀಳಲಿದೆ. ಈ ಕಾರಣಕ್ಕೆ ಕೇವಲ ನೈತಿಕ ಬೆಂಬಲ ನೀಡುವುದಾಗಿ ವಾಣಿಜ್ಯ ಮಂಡಳಿ ಘೋಷಿಸಿದೆ.

ವಾಣಿಜ್ಯ ಮಂಡಳಿಯ ಈ ನಿರ್ಧಾರದಿಂದ ಡಿಸೆಂಬರ್​ 31ರಂದು ಎಂದಿನಂತೆ ಚಿತ್ರಗಳು ಪ್ರದರ್ಶನ ಕಾಣಲಿವೆ. ಚಿತ್ರದ ಶೂಟಿಂಗ್​ ಕೂಡ ನಡೆಯಲಿದೆ, ಹೀಗಾಗಿ, ಈ ಬಂದ್​ನಿಂದ ಚಿತ್ರರಂಗಕ್ಕೆ ನೇರವಾಗಿ ಅಷ್ಟೊಂದು ತೊಂದರೆ ಆಗುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಈ ಬಗ್ಗೆ ವಾಟಾಳ್​ ನಾಗರಾಜ್​ ಅಸಮಾಧಾನಗೊಂಡಿದ್ದಾರೆ. ‘ನಿಮ್ಮ ನೈತಿಕ ಬೆಂಬಲ ತಿರಸ್ಕರಿಸಿದ್ದೇನೆ. ಫಿಲ್ಮ್ ಚೇಂಬರ್ ನೀಡಿರುವ ನೈತಿಕ ಬೆಂಬಲ‌ ನಮಗೆ ಬೇಡ. ಎಲ್ಲರೂ ಬೀದಿಗೆ ಇಳಿದು ಸಪೋರ್ಟ್​ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕನ್ನಡದ ಹೋರಾಟ ಎಂಬುದು ಕನ್ನಡಿಗರ ವಿರುದ್ಧದ ಹೋರಾಟ ಆಗಬಾರದು. ಹೀಗೆಲ್ಲ ಬಂದ್​ ಮಾಡಿದರೆ ನಾವು ಸೂಸೈಡ್​ ಮಾಡಿಕೊಳ್ಳಬೇಕು ಅಷ್ಟೇ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ ಸಿನಿಮಾ ಬಿಡುಗಡೆ ಆಗುವುದು ಶುಕ್ರವಾರ. ಅದೇ ದಿನ ಬಂದ್​ ಮಾಡಬೇಕೋ ಬೇಡವೋ ಎಂಬುದು ವಾಣಿಜ್ಯ ಮಂಡಳಿಯವರಿಗೆ ತಿಳಿಯುವುದಿಲ್ಲವಾ’ ಎಂದು ನಿರ್ದೇಶಕ ಗುರು ದೇಶಪಾಂಡೆ ಪ್ರಶ್ನಿಸಿದ್ದರು.

ಇದನ್ನೂ ಓದಿ: Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್

Karnataka Bandh: ಡಿ 31 ಕರ್ನಾಟಕ ಬಂದ್ -ಯಾರದೆಲ್ಲ ಬೆಂಬಲ ಇದೆ? ಕರವೇ, ಚಿತ್ರೋದ್ಯಮದ ನಿರ್ಧಾರವೇನು?

Follow us on

Most Read Stories

Click on your DTH Provider to Add TV9 Kannada