ಸ್ಯಾಂಡಲ್​ವುಡ್​ನಲ್ಲಿ ಶಿವಣ್ಣ-ರವಿಚಂದ್ರನ್​ ಬರ್ತ್​ಡೇ ಸಂಭ್ರಮ; ಸ್ಟಾರ್ ನಟರ ಹುಟ್ಟುಹಬ್ಬ ಒಟ್ಟಾಗಿ ಆಚರಿಸಲು ಪ್ಲ್ಯಾನ್

| Updated By: ರಾಜೇಶ್ ದುಗ್ಗುಮನೆ

Updated on: Aug 04, 2022 | 4:56 PM

ಶಿವರಾಜ್​ಕುಮಾರ್ ಅವರು ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್​ಡೇಯನ್ನು ದೊಡ್ಡದಾಗಿ ನಡೆಸಲು ಪ್ಲ್ಯಾನ್ ನಡೆದಿದೆ.

ಸ್ಯಾಂಡಲ್​ವುಡ್​ನಲ್ಲಿ ಶಿವಣ್ಣ-ರವಿಚಂದ್ರನ್​ ಬರ್ತ್​ಡೇ ಸಂಭ್ರಮ; ಸ್ಟಾರ್ ನಟರ ಹುಟ್ಟುಹಬ್ಬ ಒಟ್ಟಾಗಿ ಆಚರಿಸಲು ಪ್ಲ್ಯಾನ್
ರವಿಚಂದ್ರನ್​-ಶಿವಣ್ಣ
Follow us on

ನಟ ಶಿವರಾಜ್​ಕುಮಾರ್ (Shivarajkumar) ಹಾಗೂ ರವಿಚಂದ್ರನ್​ ಅವರು ಸಮಕಾಲೀನರು. ಅವರ ನಡುವೆ ಒಂದು ವರ್ಷ ವಯಸ್ಸಿನ ಅಂತರವಿದೆ. ಇಬ್ಬರೂ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಶಿವರಾಜ್​​​ಕುಮಾರ್ ಅವರು 125ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ರವಿಚಂದ್ರನ್ (Ravichandran) ಅವರು ನಟನೆಯ ಜತೆಗೆ ನಿರ್ಮಾಪಕನಾಗಿ, ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ. ಶಿವಣ್ಣಗೆ 60 ವರ್ಷ ವಯಸ್ಸು. ರವಿಚಂದ್ರನ್​ಗೆ 61 ವರ್ಷ ತುಂಬಿದೆ. ಈಗ ಇಬ್ಬರ ಬರ್ತ್​ಡೇಯನ್ನು ಒಟ್ಟಾಗಿ ಆಚರಿಸಲು ಕರ್ನಾಟಕ ಫಿಲಂ​ ಚೇಂಬರ್ ನಿರ್ಧರಿಸಿದೆ.

ಶಿವರಾಜ್​ಕುಮಾರ್ ಅವರು ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್​ಡೇಯನ್ನು ದೊಡ್ಡದಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಫಿಲಂ​ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಫಿಲಂ​ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವರಾಜ್​ಕುಮಾರ್ ಅವರು ಈ ಬಾರಿ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬರ್ತ್​​ಡೇಯನ್ನು ದೊಡ್ಡದಾಗಿ ಆಚರಿಸಲು ಪುನೀತ್ ರಾಜ್​ಕುಮಾರ್ ಈ ಮೊದಲು ನಿರ್ಧರಿಸಿದ್ದರು. ಆದರೆ, ಪುನೀತ್ ಅಕಾಲಿಕ ಮರಣ ಹೊಂದಿದರು. ಅಪ್ಪು ಇಲ್ಲ ಎಂಬ ಕಾರಣಕ್ಕೆ ಶಿವರಾಜ್​ಕುಮಾರ್ ಅವರು ಈ ಬಾರಿ ಬರ್ತ್​ಡೇ ಆಚರಿಸಿಕೊಂಡಿಲ್ಲ. ಈ ಕಾರಣಕ್ಕೆ ಅಕ್ಟೋಬರ್ ಅಥವಾ ನವೆಂಬರ್​​ನಲ್ಲಿ ಶಿವಣ್ಣ ಹಾಗೂ ರವಿಚಂದ್ರನ್​ ಬರ್ತ್​ಡೇ ದೊಡ್ಡದಾಗಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ
‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್
ಶಕ್ತಿಧಾಮದ ಮಕ್ಕಳ ಜತೆ ‘ಬೈರಾಗಿ’ ಹಾಡಿಗೆ ಡ್ಯಾನ್ಸ್ ಮಾಡಿದ ಶಿವರಾಜ್​ಕುಮಾರ್
Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು

ಇದನ್ನೂ ಓದಿ: ‘ಘೋಸ್ಟ್​’ ಸ್ವಾಗತಿಸಿದ ಕಿಚ್ಚ ಸುದೀಪ್​; ಶಿವರಾಜ್​ಕುಮಾರ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಅಂದುಕೊಂಡಂತೆ ನಡೆದರೆ ಇದು ಸ್ಯಾಂಡಲ್​ವುಡ್​ ಪಾಲಿಗೆ ಬಹುದೊಡ್ಡ ದಿನವಾಗಲಿದೆ. ಶಿವಣ್ಣ ಹಾಗೂ ರವಿಚಂದ್ರನ್ ಸ್ಯಾಂಡಲ್​ವುಡ್​ನಲ್ಲಿ ಅಜಾತಶತ್ರುಗಳು. ಈ ಕಾರಣಕ್ಕೆ ಬಹುತೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ಸಾಧ್ಯತೆ ಇದೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೆ ಪರಭಾಷೆಯ ಸ್ಟಾರ್​​ಗಳನ್ನು ಆಹ್ವಾನಿಸಲು ಚಿಂತನೆ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ರೂಪಿಸಲಾಗುತ್ತಿದೆ.

Published On - 4:32 pm, Thu, 4 August 22