ಯಶ್ (Yash) ನಟನೆಯ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಬಾಲಿವುಡ್ ಅಂಗಳದಲ್ಲಿ ಎಬ್ಬಿಸಿದ ತೂಫಾನ್ ಸದ್ಯಕ್ಕೆ ತಣ್ಣಗಾಗುವ ಸೂಚನೆ ಸಿಗುತ್ತಿಲ್ಲ. ಈ ಚಿತ್ರ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಮೂರನೇ ದಿನದ (ಏಪ್ರಿಲ್ 16) ಕಲೆಕ್ಷನ್ ಲೆಕ್ಕಾಚಾರ ಹೊರಬಿದ್ದಿದೆ. ಮೂರನೇ ದಿನ ಈ ಸಿನಿಮಾ 42.95 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಈ ಸಿನಿಮಾದ ಕಲೆಕ್ಷನ್ 143 ಕೋಟಿ ರೂಪಾಯಿ ಆಗಿದೆ. ನಾಲ್ಕೇ ದಿನಕ್ಕೆ ಚಿತ್ರದ ಕಲೆಕ್ಷನ್ 200 ಕೋಟಿ ರೂಪಾಯಿ ಗಡಿ ಸಮೀಪಿಸಲಿದೆ ಅನ್ನೋದು ಚಿತ್ರದ ಹೆಚ್ಚುಗಾರಿಕೆ.
ಮೊದಲ ದಿನ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 53.95 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ‘ವಾರ್’ ಹಾಗೂ ‘ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರಗಳ ದಾಖಲೆಯನ್ನು ಈ ಸಿನಿಮಾ ಮುರಿದು ಹಾಕಿತ್ತು. ಮೂರನೇ ದಿನದ ಕಲೆಕ್ಷನ್ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದರು. ಶುಕ್ರವಾರ (ಏಪ್ರಿಲ್ 15) ಈ ಸಿನಿಮಾದ ಗಳಿಕೆ 46.79 ಕೋಟಿ ರೂಪಾಯಿ ಆಗಿತ್ತು. ಈ ಮೂಲಕ ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಮೂರನೇ ದಿನವೂ ಚಿತ್ರದ ಅಬ್ಬರ ಜೋರಾಗಿದೆ.
ಸಿನಿಮಾಗೆ ಮೆಚ್ಚುಗೆ ವ್ಯಕ್ತವಾದರೆ ವೀಕೆಂಡ್ನಲ್ಲಿ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಇದರಿಂದ ಸಹಜವಾಗಿಯೇ ಸಿನಿಮಾದ ಕಲೆಕ್ಷನ್ ಹೆಚ್ಚುತ್ತದೆ. ಆದರೆ, ಸೋಮವಾರ ಸಿನಿಮಾ ಯಾವ ರೀತಿಯ ಕಲೆಕ್ಷನ್ ಮಾಡುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಚಿತ್ರ ಹೇಗೆ ಪರ್ಫಾರ್ಮೆನ್ಸ್ ಮಾಡಲಿದೆ ಎಂಬುದು ನಿರ್ಧಾರ ಆಗಲಿದೆ. ‘ಕೆಜಿಎಫ್ 2’ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆದರೆ ಸುಲಭವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
#KGF2 [#Hindi] is all set for a RECORD-SMASHING weekend… Day 3 is SUPER-SOLID – metros ROCKING, mass circuits STRONG… Day 4 [Sun] will be competing with Day 1 [Thu]… This one’s a #BO MONSTER… Thu 53.95 cr, Fri 46.79 cr, Sat 42.90 cr. Total: ₹ 143.64 cr. #India biz. pic.twitter.com/Dy1XPOqtQn
— taran adarsh (@taran_adarsh) April 17, 2022
ಕನ್ನಡದ ಸಿನಿಮಾವೊಂದು ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಈ ಮಟ್ಟಿಗೆ ಗಳಿಕೆ ಮಾಡಿದ್ದು ಇದೇ ಮೊದಲು. ಬಾಲಿವುಡ್ನಲ್ಲಿ ‘ಆರ್ಆರ್ಆರ್’ ಸಿನಿಮಾ ಗಳಿಕೆ 250 ಕೋಟಿ ರೂಪಾಯಿ ಸಮೀಪಿಸಿದೆ. ಈ ಗಳಿಕೆಯನ್ನು ‘ಕೆಜಿಎಫ್ 2’ ಮುರಿಯಲಿದೆಯೇ ಎಂಬುದು ಸದ್ಯದ ಪ್ರಶ್ನೆ. ಇನ್ನು, ತಮಿಳುನಾಡಿನಲ್ಲಿ ‘ಬೀಸ್ಟ್’ ಸಿನಿಮಾಗೆ ‘ಕೆಜಿಎಫ್ 2’ನಿಂದ ಹಿನ್ನಡೆ ಆಗಿದೆ. ತಮಿಳುನಾಡಿನ ಗಳಿಕೆ ವಿಚಾರದಲ್ಲಿ ದಳಪತಿ ವಿಜಯ್ ಚಿತ್ರವನ್ನು ಯಶ್ ಸಿನಿಮಾ ಹಿಂದಿಕ್ಕಿದೆ.
ಇದನ್ನೂ ಓದಿ: Sanjay Dutt: ಸತತ 2-3 ಗಂಟೆ ಕಣ್ಣೀರು ಹಾಕಿದ್ದ ‘ಕೆಜಿಎಫ್ 2’ ಅಧೀರ; ಕಾರಣವೇನು?
‘ಕೆಜಿಎಫ್ 2’ ಎದುರು ಸೋತ ‘ಬೀಸ್ಟ್’ ಚಿತ್ರಕ್ಕೆ ಈಗ ಉಳಿದಿದ್ದು ಒಟಿಟಿ ಆಯ್ಕೆ ಮಾತ್ರ; ಯಾವಾಗ ರಿಲೀಸ್?
Published On - 1:12 pm, Sun, 17 April 22