Kiccha Sudeep: ತೆರೆಮೇಲೆ ಸುದೀಪ್​ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್​ ಕಥೆ​

|

Updated on: Apr 05, 2023 | 12:14 PM

ಎರಡೂವರೆ ದಶಕಗಳ ವೃತ್ತಿಜೀವನದಲ್ಲಿ ಸುದೀಪ್​ ಅವರು ರಾಜಕೀಯದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೆ ‘ಕಿಚ್ಚ’ ಚಿತ್ರದಲ್ಲಿ ಮಾತ್ರ ಸಂಪೂರ್ಣ ಪೊಲಿಟಿಕಲ್​ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು.

Kiccha Sudeep: ತೆರೆಮೇಲೆ ಸುದೀಪ್​ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್​ ಕಥೆ​
ಕಿಚ್ಚ ಸುದೀಪ್
Follow us on

​ನಟ ಕಿಚ್ಚ ಸುದೀಪ್​ (Kichcha Sudeep) ಅವರು ಈವರೆಗೂ ರಾಜಕೀಯದಿಂದ ದೂರ ಉಳಿದುಕೊಂಡಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ಅವರ ಹೆಸರು ರಾಜಕೀಯದ ಅಂಗಳದಲ್ಲಿ ಹೆಚ್ಚಾಗಿ ಕೇಳಿಬರಲು ಆರಂಭಿಸಿದೆ. ರಿಯಲ್​ ಲೈಫ್​ನಲ್ಲಿ ಮಾತ್ರವಲ್ಲ ಸಿನಿಮಾದಲ್ಲಿಯೂ ಅವರು ಪೊಲಿಟಿಕಲ್​ ಕಥಾವಸ್ತುವನ್ನು ಟಚ್ ಮಾಡಿದ್ದು ಕಡಿಮೆ. ಸುದೀಪ್​ (Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು ಎರಡೂವರೆ ದಶಕ ಕಳೆದಿದೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅವರು ರಾಜಕಾರಣಿಯ ವೇಷ ಧರಿಸಿದ್ದು ಒಂದೇ ಒಂದು ಸಿನಿಮಾದಲ್ಲಿ ಮಾತ್ರ! ಹೌದು, ಸುದೀಪ್​ ಅಭಿನಯದ ‘ಕಿಚ್ಚ’ ಸಿನಿಮಾದಲ್ಲಿ (Kiccha Kannada Movie) ಅವರು ರಾಜಕಾರಣಿಯ ಪಾತ್ರ ಮಾಡಿದ್ದರು. ಆ ಚಿತ್ರ 2003ರಲ್ಲಿ ತೆರೆಕಂಡಿತ್ತು.

1997ರಲ್ಲಿ ಬಂದ ‘ತಾಯವ್ವ’ ಸಿನಿಮಾದಿಂದ 2022ರಲ್ಲಿ ತೆರೆಕಂಡ ‘ವಿಕ್ರಾಂತ್​ ರೋಣ’ ಚಿತ್ರದ ತನಕ ಸುದೀಪ್​ ಅವರು ರಾಜಕೀಯದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೆ ‘ಕಿಚ್ಚ’ ಚಿತ್ರದಲ್ಲಿ ಅವರು ಸಂಪೂರ್ಣ ಪೊಲಿಟಿಕಲ್​ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಾಮಾನ್ಯ ಯುವಕನೊಬ್ಬ ರಾಜಕೀಯಕ್ಕೆ ಎಂಟ್ರಿಯಾಗಿ ಮಿನಿಸ್ಟರ್​ ಪಟ್ಟ ಪಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿತ್ತು.

ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಇದನ್ನೂ ಓದಿ
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Kichcha Sudeep: ‘ಕನ್ನಡ್​’ ಎಂದರೆ ಸಹಿಸಲ್ಲ ಸುದೀಪ್​; ಹಿಂದಿ ಮಂದಿಗೆ ಕಿಚ್ಚ ಖಡಕ್​ ತಿರುಗೇಟು ನೀಡಿದ ವಿಡಿಯೋ ವೈರಲ್​
Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​

‘ಕಿಚ್ಚ’ ಚಿತ್ರಕ್ಕೆ ಪಿ.ಎ. ಅರುಣ್​ ಪ್ರಸಾದ್​ ಅವರು ನಿರ್ದೇಶನ ಮಾಡಿದ್ದರು. ರಾಮು ನಿರ್ಮಾಣ ಮಾಡಿದ್ದ ಈ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ನಿರುದ್ಯೋಗ ಸಮಸ್ಯೆ, ಅದರ ಹಿಂದೆ ಇರುವ ಶಿಕ್ಷಣ ಮಾಫಿಯಾ, ರಾಜಕೀಯದ ಕುತಂತ್ರ, ರಾಜಕಾರಣಿಗಳ ಹಣದ ಹಪಾಹಪಿ ಮುಂತಾದ ವಿಷಯಗಳೇ ‘ಕಿಚ್ಚ’ ಚಿತ್ರದಲ್ಲಿ ಹೈಲೈಟ್​ ಆಗಿದ್ದವು. ಜನಪರವಾಗಿ ಕೆಲಸ ಮಾಡುವ ಹಂಬಲ ಇಟ್ಟುಕೊಂಡು ರಾಜಕೀಯಕ್ಕೆ ಪ್ರವೇಶ ಪಡೆಯುವ ಕಥಾನಾಯಕ, ನಂತರ ತಾನೇ ಹಣ ಮಾಡಲು ಶುರುಮಾಡುತ್ತಾನೆ. ಕ್ಲೈಮ್ಯಾಕ್ಸ್​ನಲ್ಲಿ ಎಲ್ಲರ ಮುಖವಾಡ ಬಯಲು ಮಾಡುವ ಮೂಲಕ ದೊಡ್ಡ ಟ್ವಿಸ್ಟ್​ ನೀಡುತ್ತಾನೆ.

ಇದನ್ನೂ ಓದಿ: Kichcha Sudeep: ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸುದೀಪ್​? ರಾಜಕೀಯದಲ್ಲಿ ಧೂಳೆಬ್ಬಿಸ್ತಾರಾ ಕಿಚ್ಚ?

ಸುದೀಪ್​ ಅವರು ‘ಕಿಚ್ಚ’ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದರು. ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಯಿತು. ಹಾಗಿದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ನಿರೀಕ್ಷೆಯಂತೆ ಮೋಡಿ ಮಾಡಲಿಲ್ಲ. ಆ ಕಾರಣಕ್ಕೋ ಏನೋ ಸುದೀಪ್​ ಅವರು ಮುಂದಿನ ದಿನಗಳಲ್ಲಿ ಪೊಲಿಟಿಕಲ್ ಕಥಾಹಂದರ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಈಗ ರಿಯಲ್​ ಲೈಫ್​ನಲ್ಲಿ ಅವರ ಹೆಸರು ರಾಜಕೀಯ ಕ್ಷೇತ್ರದಲ್ಲಿ ಚಾಲ್ತಿಗೆ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.