ವಿಷ್ಣುವರ್ಧನ್ ಬರ್ತ್​ಡೇಗೆ ಕಾಮನ್ ಡಿಪಿ ಅನಾವರಣ ಮಾಡಿದ ಕಿಚ್ಚ ಸುದೀಪ್

ಸುದೀಪ್ ಅವರು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಅವರನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ‘ವಿಷ್ಣುವರ್ಧನ್’ ಹೆಸರಿನ ಸಿನಿಮಾ ಕೂಡ ಮಾಡಿದ್ದು, ಈ ಚಿತ್ರದಲ್ಲಿ ಅವರು ವಿಷ್ಣುವಿನ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು.

ವಿಷ್ಣುವರ್ಧನ್ ಬರ್ತ್​ಡೇಗೆ ಕಾಮನ್ ಡಿಪಿ ಅನಾವರಣ ಮಾಡಿದ ಕಿಚ್ಚ ಸುದೀಪ್
ವಿಷ್ಣುವರ್ಧನ್
Follow us
|

Updated on: Sep 18, 2023 | 8:21 AM

ನಟ ವಿಷ್ಣುವರ್ಧನ್ ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬ ನೋವಿನ ಮಧ್ಯೆಯೂ ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಹಲವು ರೀತಿಯಲ್ಲಿ ಸಾಮಾಜಿಕ ಕೆಲಸ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಷ್ಣುವರ್ಧನ್ (Vishnuvardhan) ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ಮಧ್ಯೆ ಕಿಚ್ಚ ಸುದೀಪ್ ಅವರು ವಿಷ್ಣು ಅವರ ‘ಕಾಮನ್ ಡಿಪಿ’ ಬಿಡುಗಡೆ’ ಮಾಡಿದ್ದಾರೆ. ಸದ್ಯ ಎಲ್ಲರೂ ಈ ಫೋಟೋನ ಪ್ರಾಫೈಲ್ ಪಿಕ್ಚರ್​ಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

ವಿಷ್ಣುವರ್ಧನ್ ಅವರಿಗೆ ಸಾಹಸ ಸಿಂಹ ಎಂಬ ಬಿರುದು ಇದೆ. ಈ ಕಾರಣದಿಂದ ಅದೇ ಥೀಮ್​ನಲ್ಲಿ ಕಾಮನ್ ಡಿಪಿ ಸಿದ್ಧಪಡಿಸಲಾಗಿದೆ. ಸಿಂಹದ ಮುಖ ಇರುವ ಆಸನದ ಮೇಲೆ ವಿಷ್ಣು ಕುಳಿತಿದ್ದಾರೆ. ಅವರ ಅಭಿಮಾನಿಗಳು ಜನರಿದ್ದಾರೆ. ‘ಹ್ಯಾಪಿ ಬರ್ತ್​ಡೇ ಯಜಮಾನ್ರೆ’ ಎಂದು ಕೆಳ ಭಾಗದಲ್ಲಿ ಬರೆಯಲಾಗಿದೆ. ಸುದೀಪ್ ಅವರು ಇದನ್ನು ಅನಾವರಣ ಮಾಡಿ ವಿಷ್ಣುವರ್ಧನ್ ಅವರಿಗೆ ಬರ್ತ್​ಡೇ ಶುಭಾಶಯ ತಿಳಿಸಿದ್ದಾರೆ.

‘ನಮ್ಮ ಪ್ರೀತಿಯ ವಿಷ್ಣು ಸರ್ ಅವರ ಸಿಡಿಪಿ ಬಿಡುಗಡೆ ಮಾಡಲು ತುಂಬಾ ಖುಷಿಯಿದೆ. ಅವರ ಎಲ್ಲಾ ಅಭಿಮಾನಿಗಳಿಗೆ ದೊಡ್ಡ ದಿನ’ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್​ನ ಅಭಿಮಾನಿಗಳು ರೀಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ.

ಸುದೀಪ್ ಅವರು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಅವರನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ‘ವಿಷ್ಣುವರ್ಧನ್’ ಹೆಸರಿನ ಸಿನಿಮಾ ಕೂಡ ಮಾಡಿದ್ದು, ಈ ಚಿತ್ರದಲ್ಲಿ ಅವರು ವಿಷ್ಣುವಿನ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಒಂದೇ ದಿನ ಕನ್ನಡದ ಮೂವರು ಸ್ಟಾರ್ ಕಲಾವಿದರ ಬರ್ತ್​ಡೇ; ಸಿನಿಪ್ರಿಯರಿಗೆ ಈ ದಿನ ಸಖತ್ ವಿಶೇಷ

ವಿಷ್ಣುವರ್ಧನ್ ಅವರು ‘ನಾಗರಹಾವು’ ಸಿನಿಮಾ ಮೂಲಕ ಫೇಮಸ್ ಆದರು. ಅವರು ಹೀರೋ ಆಗಿ ಗಮನ ಸೆಳೆದರು. ಆ ಬಳಿಕ ಅವರು ಸಾಲು ಸಾಲು ಹಿಟ್ ಸಿನಿಮಾ ನೀಡಿದರು. ಚಿತ್ರರಂಗದ ಬೇಡಿಕೆಯ ಹೀರೋ ಎನಿಸಿಕೊಂಡರು. 2009ರ ಡಿಸೆಂಬರ್ 30ರಂದು ವಿಷ್ಣು ನಿಧನ ಹೊಂದಿದರು. 2010ರಲ್ಲಿ ಅವರ ನಟನೆಯ ಕೊನೆಯ ಸಿನಿಮಾ ‘ಆಪ್ತರಕ್ಷಕ’ ಚಿತ್ರ ರಿಲೀಸ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ