ಒಂದೇ ದಿನ ಕನ್ನಡದ ಮೂವರು ಸ್ಟಾರ್ ಕಲಾವಿದರ ಬರ್ತ್​ಡೇ; ಸಿನಿಪ್ರಿಯರಿಗೆ ಈ ದಿನ ಸಖತ್ ವಿಶೇಷ

ಇಂದು ವಿಷ್ಣುವರ್ಧನ್, ಉಪೇಂದ್ರ ಹಾಗೂ ಶ್ರುತಿ ಅವರ ಜನ್ಮದಿನ. ಈ ಕಾರಣಕ್ಕೆ ಅಭಿಮಾನಿಗಳು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಿಸುವ ಕೆಲಸ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ಒಂದೇ ದಿನ ಕನ್ನಡದ ಮೂವರು ಸ್ಟಾರ್ ಕಲಾವಿದರ ಬರ್ತ್​ಡೇ; ಸಿನಿಪ್ರಿಯರಿಗೆ ಈ ದಿನ ಸಖತ್ ವಿಶೇಷ
ವಿಷ್ಣು, ಉಪೇಂದ್ರ, ಶ್ರುತಿ
Follow us
ರಾಜೇಶ್ ದುಗ್ಗುಮನೆ
|

Updated on: Sep 18, 2023 | 7:12 AM

ಸಿನಿಮಾ ಮಂದಿಯನ್ನು ಆರಾಧಿಸುವವರು ಅನೇಕರಿದ್ದಾರೆ. ಹೀಗಾಗಿ ಸೆಲೆಬ್ರಿಟಿಗಳ ಬರ್ತ್​ಡೇನ ಹಬ್ಬದ ರೀತಿ ಆಚರಿಸಲಾಗುತ್ತದೆ. ಒಂದೇ ದಿನ ಮೂವರು ಸೆಲೆಬ್ರಿಟಿಗಳ ಹುಟ್ಟುಹಬ್ಬ ಬಂದು ಬಿಟ್ಟರೆ? ಅಂಥ ವಿಶೇಷ ದಿನಕ್ಕೆ ಸೆಪ್ಟೆಂಬರ್ 18 ಸಾಕ್ಷಿ ಆಗಿದೆ. ಈ ದಿನದಂದು ವಿಷ್ಣುವರ್ಧನ್, ಉಪೇಂದ್ರ (Upendra) ಹಾಗೂ ಶ್ರುತಿ ಅವರ ಜನ್ಮದಿನ. ಈ ಕಾರಣಕ್ಕೆ ಅಭಿಮಾನಿಗಳು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಿಸುವ ಕೆಲಸ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ವಿಷ್ಣುವರ್ಧನ್

ಕನ್ನಡ ಚಿತ್ರರಂಗ ಕಂಡ ಓರ್ವ ಅದ್ಭುತ ನಟ ವಿಷ್ಣುವರ್ಧನ್. ಸುದೀಪ್ ಸೇರಿ ಅನೇಕ ಸ್ಟಾರ್ ಹೀರೋಗಳಿಗೆ ವಿಷ್ಣುವರ್ಧನ್ ಮಾದರಿ. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ನಮ್ಮೊಂದಿಗೆ ಇದ್ದಿದ್ದರೆ 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರಿಲ್ಲ ಎನ್ನುವ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ವಿಷ್ಣು ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿನಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ ಅನ್ನೋದು ವಿಶೇಷ.

1972ರಲ್ಲಿ ತೆರೆಗೆ ಬಂದ ‘ನಾಗರಹಾವು’ ಸಿನಿಮಾದಲ್ಲಿ ವಿಷ್ಣುವರ್ಧನ್ ನಟನೆಗೆ ಎಲ್ಲರೂ ಮರುಳಾದರು. ಈ ಚಿತ್ರದ ಮೂಲಕ ಅವರು ಜನಪ್ರಿಯತೆ ಪಡೆದರು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 2009ರ ಡಿಸೆಂಬರ್ 30ರಂದು ಅವರು ನಿಧನರಾದರು. 2010ರಲ್ಲಿ ರಿಲೀಸ್ ಆದ ‘ಆಪ್ತರಕ್ಷಕ’ ಅವರ ನಟನೆಯ ಕೊನೆಯ ಸಿನಿಮಾ.

ಉಪೇಂದ್ರ

ಉಪೇಂದ್ರ ಅವರು ಕೂಡ ಇಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರಿಗೆ ಅನೇಕರು ಶುಭಕೋರುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಇಂದಿನ ದಿನ ಸಖತ್ ವಿಶೇಷವಾಗಿದೆ. ಇಂದು ಗಣೇಶ ಚತುರ್ಥಿ. ಇದರ ಜೊತೆಗೆ ಉಪೇಂದ್ರ ಅವರ ಜನ್ಮದಿನದಂದು ‘ಯುಐ’ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಆಚರಣೆ ನಡೆಯಲಿದೆ.

ಉಪೇಂದ್ರ ಅವರು ಚಿತ್ರರಂಗಕ್ಕೆ ನಿರ್ದೇಶಕರಾಗಿ ಕಾಲಿಟ್ಟರು. ‘ತರ್ಲೆ ನನ್​ಮಗ’ ಅವರ ನಿರ್ದೇಶನದ ಮೊದಲ ಸಿನಿಮಾ. ಬಳಿಕ ‘ಶ್..’ ‘ಓಂ’, ‘ಆಪರೇಷನ್ ಅಂತ’ ‘ಎ’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದರು. ಆ ಸಮಯದಲ್ಲಿ ಹೀರೋ ಆಗಿಯೂ ಅವರು ಗಮನ ಸೆಳೆದರು. ಈಗ ‘ಯುಐ’ ರಿಲೀಸ್ ಆಗುತ್ತಿದ್ದು, ಇದರ ಟೀಸರ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: Upendra Birthday: ಉಪೇಂದ್ರ ಜನ್ಮದಿನ ಆಚರಣೆ ಎಲ್ಲಿ? ಸಂಪೂರ್ಣ ಮಾಹಿತಿ ನೀಡಿದ ಉಪ್ಪಿ

ಶ್ರುತಿ

ನಟಿ ಶ್ರುತಿ ಅವರು ಕನ್ನಡ ಚಿತ್ರರಂಗದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಹಲವು ರೀತಿಯ ಪಾತ್ರ ಮಾಡಿ ಅವರು ಜನಮನ ಗೆದ್ದಿದ್ದಾರೆ. ಭಾವನಾತ್ಮಕ ಪಾತ್ರಗಳನ್ನು ಮಾಡೋದರಲ್ಲಿ ಅವರದ್ದು ಎತ್ತಿದ ಕೈ. ಈ ಮೊದಲು ಅವರು ಪಾತ್ರಗಳ ಮೂಲಕ ಅನೇಕರಿಗೆ ಕಣ್ಣೀರು ಹಾಕುವ ಕೆಲಸ ಮಾಡಿದ್ದರು. ಅವರಿಗೂ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲಾ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಇತ್ತೀಚೆಗೆ ಶ್ರುತಿ ನಟನೆಯ ‘ತತ್ಸಮ ತದ್ಭವ’ ಹಾಗೂ ‘13’ ಸಿನಿಮಾಗಳು ರಿಲೀಸ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ