Upendra Birthday: ಉಪೇಂದ್ರ ಜನ್ಮದಿನ ಆಚರಣೆ ಎಲ್ಲಿ? ಸಂಪೂರ್ಣ ಮಾಹಿತಿ ನೀಡಿದ ಉಪ್ಪಿ

ಸ್ಟಾರ್​ಗಳ ಬರ್ತ್​ಡೇ ಬಂದರೆ ಅಭಿಮಾನಿಗಳಿಗೆ ಸಖತ್ ಉತ್ಸಾಹ. ಕೇಕ್, ಹಾರತುರಾಯಿ ತೆಗೆದುಕೊಂಡು ಹೋಗಿ ನಟನ ಮನೆ ಮುಂದೆ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸಿ ಖುಷಿಪಡುತ್ತಾರೆ. ಉಪೇಂದ್ರ ಬರ್ತ್​ಡೇಗೂ ಅಭಿಮಾನಿಗಳು ಇದೇ ರೀತಿಯಲ್ಲಿ ಸಂಭ್ರಮಿಸುವ ಆಲೋಚನೆಯಲ್ಲಿ ಇದ್ದರು. ಈ ಕಾರಣದಿಂದ ಉಪೇಂದ್ರ ಅವರು ಮೊದಲೇ ಮಾಹಿತಿ ನೀಡಿದ್ದಾರೆ.

Upendra Birthday: ಉಪೇಂದ್ರ ಜನ್ಮದಿನ ಆಚರಣೆ ಎಲ್ಲಿ? ಸಂಪೂರ್ಣ ಮಾಹಿತಿ ನೀಡಿದ ಉಪ್ಪಿ
ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: Sep 15, 2023 | 2:47 PM

ಉಪೇಂದ್ರ (Upendra) ಅವರು ಸೆಪ್ಟೆಂಬರ್ 18ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರ ಜನ್ಮದಿನ ಸಖತ್ ವಿಶೇಷ. ಏಕೆಂದರೆ ಅಂದು ಗಣೇಶ ಚತುರ್ಥಿ. ಜೊತೆಗೆ ಉಪೇಂದ್ರ ನಿರ್ದೇಶನದ ‘ಯುಐ’ (UI Movie) ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಊರ್ವಶಿ ಥಿಯೇರಟ್​ನಲ್ಲಿ ಅಭಿಮಾನಿಗಳ ಜೊತೆ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಹಾಗಾದರೆ ಹುಟ್ಟುಹಬ್ಬದ ಆಚರಣೆ ಎಲ್ಲಿ? ಆ ಬಗ್ಗೆ ಉಪೇಂದ್ರ ಅವರು ವಿಶೇಷ ವಿಡಿಯೋ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಮನೆ ಸಮೀಪ ಬರದಂತೆ ಅವರು ಕೋರಿದ್ದಾರೆ.

ಸ್ಟಾರ್​ಗಳ ಬರ್ತ್​ಡೇ ಬಂದರೆ ಅಭಿಮಾನಿಗಳಿಗೆ ಸಖತ್ ಉತ್ಸಾಹ. ಕೇಕ್, ಹಾರತುರಾಯಿ ತೆಗೆದುಕೊಂಡು ಹೋಗಿ ನಟನ ಮನೆ ಮುಂದೆ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸಿ ಖುಷಿಪಡುತ್ತಾರೆ. ಉಪೇಂದ್ರ ಬರ್ತ್​ಡೇಗೂ ಅಭಿಮಾನಿಗಳು ಇದೇ ರೀತಿಯಲ್ಲಿ ಸಂಭ್ರಮಿಸುವ ಆಲೋಚನೆಯಲ್ಲಿ ಇದ್ದರು. ಈ ಕಾರಣದಿಂದ ಉಪೇಂದ್ರ ಅವರು ಮೊದಲೇ ಮಾಹಿತಿ ನೀಡಿದ್ದಾರೆ.

‘ಎಲ್ಲಾ ಅಭಿಮಾನಿಗಳಿಗೆ ನಮಸ್ಕಾರ. ಸೆಪ್ಟೆಂಬರ್ 18 ತುಂಬಾನೇ ವಿಶೇಷ. ಈ ವರ್ಷ ಗಣೇಶ ಚತುರ್ಥಿ ಬಂದಿದೆ. ನನ್ನ ಅಭಿಮಾನಿಗಳ ಹಬ್ಬ ಕೂಡ ಹೌದು. ಅದೇ ರೀತಿ ‘ಯುಐ’ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 17 ರಾತ್ರಿ ಅಥವಾ ಸೆಪ್ಟೆಂಬರ್ 18ರ ಬೆಳಿಗ್ಗೆ ಕತ್ರಿಗುಪ್ಪೆ ಮನೆಯಲ್ಲಾಗಲೀ ಸದಾಶಿವ ನಗರದ ಮನೆಯಲ್ಲಾಗಲೀ ಇರಲ್ಲ’ ಎಂದಿದ್ದಾರೆ ಉಪೇಂದ್ರ. ಈ ಮೂಲಕ ಮನೆ ಸಮೀಪ ಬರದಂತೆ ಅವರು ಕೋರಿದ್ದಾರೆ.

‘ಸೆಪ್ಟೆಂಬರ್ 18ರಂದು ಮಧ್ಯಾಹ್ನ ಊರ್ವಶಿ ಥಿಯೇಟರ್ ಬಳಿ ಬನ್ನಿ. ಅಲ್ಲಿಯೇ ಕೇಕ್ ಕತ್ತರಿಸೋಣ. ಹುಟ್ಟುಹಬ್ಬ ಆಚರಿಸೋಣ. 2 ಗಂಟೆಯಿಂದ-8 ಗಂಟೆಯವರೆಗೆ ಆಚರಣೆ ಇರುತ್ತದೆ. ಸಂಜೆ 6:30ಕ್ಕೆ ಥಿಯೇಟರ್ ಒಳಗೆ ಟೀಸರ್ ನೋಡೋಣ’ ಎಂದಿದ್ದಾರೆ ಉಪೇಂದ್ರ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದೊಡ್ಡ ಪರದೆಯಲ್ಲಿ ‘ಯುಐ’ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳು ಹೇಳಿದಂತೆ ಕೇಳಿದ ಉಪೇಂದ್ರ; ಸೆಪ್ಟೆಂಬರ್ 18ಕ್ಕೆ ‘ಯುಐ’ ಚಿತ್ರದ ಟೀಸರ್

ಹಲವು ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿದ್ದಾರೆ. ಈ ಮೊದಲು ರಿಲೀಸ್ ಆಗಿರುವ ಪೋಸ್ಟರ್​ಗಳು ಗಮನ ಸೆಳೆದಿದ್ದವು. ಈಗ ಟೀಸರ್ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಈ ಮೂಲಕ ಹುಟ್ಟುಹಬ್ಬ ಹಾಗೂ ಗಣೇಶ ಚತುರ್ಥಿ ಉಪ್ಪಿ ಫ್ಯಾನ್ಸ್​ಗೆ ವಿಶೇಷ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ