ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಕ್ರಿಸ್ಮಸ್ ಪ್ರಯುಕ್ತ ತೆರೆಕಂಡ ಈ ಸಿನಿಮಾವನ್ನು ಮುಂಜಾನೆಯೇ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ತುಂಬಾ ಮಾಸ್ ಆಗಿ ಮೂಡಿಬಂದಿರುವ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಅವರ ಆ್ಯಕ್ಷನ್ ಅಬ್ಬರ ಕಂಡು ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ.
Kichcha Sudeep
Follow us on
ಬಹಳ ಅದ್ದೂರಿಯಾಗಿ ‘ಮ್ಯಾಕ್ಸ್’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂದು (ಡಿ.25) ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹಬ್ಬ. ಟ್ರೇಲರ್ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಇಂದು ಬೆಳ್ಳಂಬೆಳಗ್ಗೆಯೇ ದೊಡ್ಡ ಪರದೆಯಲ್ಲಿ ‘ಮ್ಯಾಕ್ಸ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸುದೀಪ್ ಜೊತೆ ಸುನಿಲ್, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುಕೃತಾ ವಾಗ್ಳೆ, ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ ‘ಮ್ಯಾಕ್ಸ್’ ಸಿನಿಮಾಗೆ ಕಲೈಪುಲಿ ಎಸ್. ಧಾನು ಅವರು ಬಂಡವಾಳ ಹೂಡಿದ್ದಾರೆ. ಚಿತ್ರದ ಫಸ್ಟ್ ಹಾಫ್ ಹೇಳಿದೆ ಎಂಬುದರ ವಿಮರ್ಶೆ ಇಲ್ಲಿದೆ..
‘ಮ್ಯಾಕ್ಸ್’ ಸಿನಿಮಾ ಆರಂಭದ ದೃಶ್ಯದಲ್ಲೇ ಸುದೀಪ್ ಪಾತ್ರ ಪರಿಚಯ. ಮಾಸ್ ಡೈಲಾಗ್ ಮೂಲಕ ಎಂಟ್ರಿ. ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿರುವ ಕಿಚ್ಚ.