‘ಇದಕ್ಕೆ ಯಾವುದೇ ಗೂಗಲ್ ಪೇ ಬೇಡ’; ಮಾತಿನ ಮಧ್ಯೆ ಬಂದ ಅನುಶ್ರೀಗೆ ಕಿಚ್ಚನ ಕ್ಲಾಸ್
Anchor Anushree: ‘ಬಡವ ರಾಸ್ಕಲ್ ಸಿನಿಮಾದಲ್ಲಿ ಅವರಿಗೋಸ್ಕರ ಸಾಲನ್ನು ಬರೆದಿದ್ದೀನಿ’ ಎಂದು ಧನಂಜಯ್ ಹೇಳಲು ಬಂದರು. ಆದರೆ, ಈ ಮಾತನ್ನು ಪೂರ್ಣಗೊಳಿಸೋಕೆ ಸುದೀಪ್ ಬಿಡಲೇ ಇಲ್ಲ. ಆಗ ಇವರ ಮಾತಿನ ಮಧ್ಯೆ ಅನುಶ್ರೀ ಬಂದರು.
ಕಿಚ್ಚ ಸುದೀಪ್ (Kichcha Sudeep) ಅವರು ಕ್ಲಾಸ್ ತೆಗೆದುಕೊಳ್ಳೋಕೆ ಎತ್ತಿದ ಕೈ. ಯಾವುದಾದರೂ ವಿಚಾರದಲ್ಲಿ ಅವರು ಮಾತನಾಡಿದರೆ ಅದಕ್ಕೊಂದು ತೂಕ ಇರುತ್ತದೆ. ಅವರು ತಿರುಗೇಟು ಕೊಟ್ಟರೆ ಎದುರಿದ್ದವರು ಮಾತನಾಡೋಕೂ ಸಾಧ್ಯ ಆಗುವುದಿಲ್ಲ. ‘ಹೊಯ್ಸಳ’ ಟ್ರೇಲರ್ ಲಾಂಚ್ ಇವೆಂಟ್ನಲ್ಲೂ ಇದೇ ರೀತಿಯ ಘಟನೆ ನಡೆಯಿತು. ಧನಂಜಯ್ (Dhananjay) ಹಾಗೂ ಸುದೀಪ್ ಮಾತಿನ ಮಧ್ಯೆ ಬಂದ ಆ್ಯಂಕರ್ ಅನುಶ್ರೀಗೆ ಕ್ಲಾಸ್ ತೆಗೆದುಕೊಂಡರು. ಈ ವಿಡಿಯೋ ಸಖತ್ ಫನ್ ಆಗಿತ್ತು. ಅಷ್ಟಕ್ಕೂ ವೇದಿಕೆ ಮೇಲೆ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಗೂಗಲ್ ಪೇ ವಿಚಾರ
ಕೆಆರ್ಜಿ ಸ್ಟುಡಿಯೋಸ್ನ ಯೋಗಿ ಹಾಗೂ ಕಾರ್ತಿಕ್ ಅವರನ್ನು ವೇದಿಕೆ ಮೇಲೆ ಕರೆದರು ಅನುಶ್ರೀ. ಆದರೆ, ಕಾರ್ತಿಕ್ ಅವರು ಬರೋಕೆ ನೋ ಎಂದರು. ‘ಕಾರ್ತಿಕ್ ಅವರನ್ನು ವೇದಿಕೆ ಮೇಲೆ ಕರೆಸೋಕೆ ನಾನು ಯೋಗಿ ಅವರಿಂದ ಹೆಚ್ಚಿನ ಹಣವನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದೀನಿ’ ಎಂದರು ಅನುಶ್ರೀ. ಇದನ್ನು ಕೇಳಿ ಎಲ್ಲರೂ ನಕ್ಕರು. ಈ ಮಾತನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು.
ಧನಂಜಯ್-ಸುದೀಪ್ ಮಾತುಕತೆ
ಮೊದಲು ವೇದಿಕೆ ಏರಿದ ಅಮೃತಾ ಅಯ್ಯಂಗಾರ್ ಅವರು ಧನಂಜಯ್ ಅವರನ್ನು ಬಾಯ್ತುಂಬ ಹೊಗಳಿದರು. ನಂತರ ವೇದಿಕೆ ಏರಿದ ಧನಂಜಯ್ ಅವರು ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಮಾತನಾಡಿ ಮುಗಿಸಿದರು. ಈ ವಿಚಾರವನ್ನು ಸುದೀಪ್ ಪ್ರಸ್ತಾಪಿಸಿದರು. ‘ಪ್ರತಿ ಮಾತಿಗೆ ಅಮೃತಾ ಧನಂಜಯ್ ಅವರನ್ನು ಹೊಗಳುತ್ತಿದ್ದರು. ಸಿನಿಮಾ ವಿಚಾರಕ್ಕೆ ಈ ರೀತಿ ಹೇಳಿದರೋ ಅಥವಾ ವೈಯಕ್ತಿಕವಾಗಿ ಅವರು ಈ ಮಾತನ್ನು ಆಡಿದರೋ ಗೊತ್ತಿಲ್ಲ. ಆದರೆ, ಧನಂಜಯ್ ಮಾತ್ರ ಅಮೃತಾ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಇದು ನ್ಯಾಯ ಅಲ್ಲ’ ಎಂದು ಸುದೀಪ್ ಹೇಳಿದರು.
ಇದನ್ನೂ ಓದಿ: ‘ಅಮೃತಾ ಅಯ್ಯಂಗಾರ್ ವಿಚಾರದಲ್ಲಿ ನೀನು ಮಾಡಿದ್ದು ತಪ್ಪು’; ವೇದಿಕೆ ಮೇಲೆ ಧನಂಜಯ್ಗೆ ತಿಳಿ ಹೇಳಿದ ಸುದೀಪ್
‘ಬಡವ ರಾಸ್ಕಲ್ ಸಿನಿಮಾದಲ್ಲಿ ಅವರಿಗೋಸ್ಕರ ಸಾಲನ್ನು ಬರೆದಿದ್ದೀನಿ’ ಎಂದು ಧನಂಜಯ್ ಹೇಳಲು ಬಂದರು. ಆದರೆ, ಈ ಮಾತನ್ನು ಪೂರ್ಣಗೊಳಿಸೋಕೆ ಸುದೀಪ್ ಬಿಡಲೇ ಇಲ್ಲ. ಆಗ ಇವರ ಮಾತಿನ ಮಧ್ಯೆ ಅನುಶ್ರೀ ಬಂದರು. ‘ಸರ್ ಅವರು ಅಮೃತಾಗಾಗಿ ಸಾಲನ್ನು ಬರೆದಿದ್ದಾರೆ’ ಎಂದರು. ಮಾತಿನ ಮಧ್ಯೆ ಬಂದ ಅನುಶ್ರೀಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ನಾನು ನಿಮ್ಮ ಬಳಿ ಕೇಳಿದ್ನಾ? ಇದಕ್ಕೆ ಯಾವುದೇ ಗೂಗಲ್ ಪೇ ಬೇಕಾಗಿಲ್ಲ. ಇರಿ ಒಂದು ನಿಮಿಷ’ ಎಂದರು. ಆಗ ಅನುಶ್ರೀ ಸೈಲೆಂಟ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 am, Tue, 21 March 23