ಸುದೀಪ್​​ಗೆ ಉತ್ತರ ಭಾರತದವರು ‘ಬಾಜಿರಾವ್’ ಹೀರೋ ಎಂದು ಕರೆಯುತ್ತಿದ್ದುದು ಏಕೆ? ಕಿಚ್ಚ ಬಿಚ್ಚಿಟ್ರು ಅಚ್ಚರಿಯ ಮಾಹಿತಿ

| Updated By: ರಾಜೇಶ್ ದುಗ್ಗುಮನೆ

Updated on: Jul 20, 2022 | 2:33 PM

ಕೆಲ ತಿಂಗಳ ಹಿಂದೆ ಸುದೀಪ್ ಹಾಗೂ ಅಜಯ್​ ದೇವಗನ್ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ದಕ್ಷಿಣ ಭಾರತ ಹಾಗೂ ಬಾಲಿವುಡ್ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಚರ್ಚೆಯ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ಸುದೀಪ್​​ಗೆ ಉತ್ತರ ಭಾರತದವರು ‘ಬಾಜಿರಾವ್’ ಹೀರೋ ಎಂದು ಕರೆಯುತ್ತಿದ್ದುದು ಏಕೆ? ಕಿಚ್ಚ ಬಿಚ್ಚಿಟ್ರು ಅಚ್ಚರಿಯ ಮಾಹಿತಿ
ಸುದೀಪ್
Follow us on

ಕಿಚ್ಚ ಸುದೀಪ್ (Kichcha Sudeep) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರು ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡುವ ಮೂಲಕ ಅವರು ಮಾಡಿದ ಮೋಡಿ ತುಂಬಾ ದೊಡ್ಡದು. ಸುದೀಪ್ ಅವರು ಬಾಲಿವುಡ್​ ಮಂದಿಗೂ ಚಿರಪರಿಚಿತರು. ಈಗ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಮೂಲಕ ಸುದೀಪ್ ಅವರು ಹೊಸ ದಾಖಲೆ ಬರೆಯಲು ರೆಡಿ ಆಗಿದ್ದಾರೆ. 3ಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಉತ್ತಮ ಪ್ರಚಾರ ನೀಡಲಾಗುತ್ತಿದೆ. ಹಲವು ಮಾಧ್ಯಮಗಳಿಗೆ ಸುದೀಪ್ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಸುದೀಪ್ ಹಾಗೂ ಅಜಯ್​ ದೇವಗನ್ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ದಕ್ಷಿಣ ಭಾರತ ಹಾಗೂ ಬಾಲಿವುಡ್ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಚರ್ಚೆಯ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ‘ಕಂಟೆಂಟ್ ಚೆನ್ನಾಗಿದ್ದರೆ ಜನರು ಸಿನಿಮಾ ನೋಡುತ್ತಾರೆ. ಅದಕ್ಕೆ ನೀವು ಫೋರ್ಸ್​ ಮಾಡಬೇಕು ಎಂಬುದು ಇರುವುದಿಲ್ಲ. ತನ್ನಿಂದ ತಾನೆಯೇ ಎಲ್ಲವೂ ಆಗುತ್ತದೆ’ ಎಂದಿದ್ದಾರೆ ಸುದೀಪ್. ಈ ಮೂಲಕ ಯಾವ ಭಾಷೆ ಎಂಬುದು ಮುಖ್ಯವಲ್ಲ, ಯಾವ ರೀತಿಯ ಸಿನಿಮಾ ಮಾಡುತ್ತೇವೆ ಅನ್ನೋದು ಮುಖ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ಎಲ್ಲದಕ್ಕೂ ಒಂದು ಅಂತ್ಯ ಎಂಬುದಿದೆ. ಅದೇ ರೀತಿ ನಿರ್ಬಂಧಗಳಿಗೂ ಒಂದು ಅಂತ್ಯ ಇದೆ. ಈ ಮೊದಲು ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಟಿವಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದವು. ನಾನು ದೆಹಲಿ, ಗೋವಾ, ಮುಂಬೈ ಅಥವಾ ಜೈಪುರಕ್ಕೆ ಹೋದಾಗ ಎಲ್ಲರೂ ನನ್ನನ್ನು ‘ಬಾಜಿರಾವ್​ ಹೀರೋ’ ಎಂದು ಕರೆಯುತ್ತಿದ್ದರು. ನನ್ನ ‘ಕೆಂಪೇಗೌಡ’ ಸಿನಿಮಾ ಹಿಂದಿಗೆ ‘ಬಾಜಿರಾವ್’ ಎಂದು ಡಬ್ ಆಗಿತ್ತು. ಅಂದು ನಾವು ಟಿವಿ ಸ್ಟಾರ್ಸ್​ ಆಗಿ ಪರಿಚಯಗೊಂಡಿದ್ದೆವು. ಈಗ ಚಿತ್ರಮಂದಿರಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದೇವೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ
Vikrant Rona: ‘ವಿಕ್ರಾಂತ್​ ರೋಣ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಯಾವಾಗ? ಪ್ಲ್ಯಾನ್​ ಬಗ್ಗೆ ವಿವರ ನೀಡಿದ ಸುದೀಪ್​
ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ

ಇದನ್ನೂ ಓದಿ: Kichcha Sudeep: ಸುದೀಪ್-ಅಜಯ್​ ದೇವಗನ್​ ನಡುವಿನ ಟ್ವೀಟ್​ ಸಮರಕ್ಕೆ ಮೂರನೇ ವ್ಯಕ್ತಿ ಕಾರಣ; ಕಿಚ್ಚ ಹೇಳಿದ್ದೇನು?

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಮೂಡಿ ಬರುತ್ತಿರುವುದು ವಿಶೇಷ.