Suniel Shetty: ‘ಪೈಲ್ವಾನ್’ ಚಿತ್ರದ ಸಹನಟ ಸುನೀಲ್ ಶೆಟ್ಟಿಗೆ ಜನ್ಮದಿನದ ಶುಭಾಶಯ ಕೋರಿದ ಕಿಚ್ಚ ಸುದೀಪ್
Kichcha Sudeep: ನಟ ಕಿಚ್ಚ ಸುದೀಪ್ ‘ಪೈಲ್ವಾನ್’ ಚಿತ್ರದ ಸಹನಟ ಸುನೀಲ್ ಶೆಟ್ಟಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಪೈಲ್ವಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಅಲ್ಲಿಂದ ನಟ ಕಿಚ್ಚ ಸುದೀಪ್ ಅವರಿಗೆ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಪೈಲ್ವಾನ್ ಚಿತ್ರದಲ್ಲಿ ಸರ್ಕಾರ್ ಪಾತ್ರದಲ್ಲಿ ಅಭಿನಯಿಸಿದ್ದ, ಸುನೀಲ್ ಶೆಟ್ಟಿ, ತಮ್ಮ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದರು. ಇದೀಗ ಸುನೀಲ್ ಅವರ 60ನೇ ಹುಟ್ಟುಹಬ್ಬಕ್ಕೆ ಸುದೀಪ್ ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಅವರು, ‘ಹುಟ್ಟುಹಬ್ಬದ ಶುಭಾಶಯಗಳು. ಆದಷ್ಟು ಬೇಗ ಸಿಗೋಣ’ ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಮಾಡಿರುವ ಟ್ವೀಟ್ ಇಲ್ಲಿದೆ:
A very very Happy bday to you @SunielVShetty Anna… Wishing you the best of health and happiness. Hoping to catch up wth you soon. ?♥️?
— Kichcha Sudeepa (@KicchaSudeep) August 11, 2021
ನಟ ಸುನೀಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಮಗಳು ಆಥಿಯಾ ಶೆಟ್ಟಿ ಹಂಚಿಕೊಂಡ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಆಥಿಯಾ ಹಂಚಿಕೊಂಡ ಪೋಸ್ಟ್ನಲ್ಲಿ ತಂದೆಯಾಗಿ ಸುನೀಲ್ ಶೆಟ್ಟಿ ಹಂಚಿಕೊಂಡ ಪ್ರೀತಿಗೆ, ಸಮಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದು, ಅವರನ್ನು ಪಡೆಯುವುದಕ್ಕೆ ತಾನು ಪುಣ್ಯ ಮಾಡಿದ್ದೆ ಎಂದು ಬರೆದುಕೊಂಡಿದ್ದರು. ಹಾಗೆಯೇ ಆದರ್ಶ ವ್ಯಕ್ತಿಯಾಗಿ ನಿಂತು, ಅವರನ್ನು ಪೂರ್ಣವಾಗಿ ಬೆಂಬಲಿಸಿದ್ದಕ್ಕೆ ಆಥಿಯಾ ಕೃತಜ್ಞತೆ ಸಲ್ಲಿಸಿದ್ದರು. ಇದರೊಂದಿಗೆ ಎರಡು ಸುಂದರ ಕಪ್ಪು ಬಿಳುಪಿನ ಚಿತ್ರಗಳನ್ನೂ ಆಥಿಯಾ ಹಂಚಿಕೊಂಡಿದ್ದರು.
Suniel Shetty: ತಂದೆ ಸುನೀಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಚಿತ್ರ ಹಂಚಿಕೊಂಡು ಶುಭಾಶಯ ಕೋರಿದ ಆಥಿಯಾ ಶೆಟ್ಟಿ
ನಟ ಸುನೀಲ್ ಶೆಟ್ಟಿಗೆ ಬಾಲಿವುಡ್ ಸೇರಿದಂತೆ ಚಿತ್ರರಂಗದ ಅನೇಕರು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. 60 ವರ್ಷವಾದರೂ ಕಟ್ಟುಮಸ್ತಾದ ದೇಹವನ್ನು ಕಾಪಿಟ್ಟುಕೊಂಡು ಈಗಲೂ ಚಿತ್ರಗಳಲ್ಲಿ ಮಿಂಚುತ್ತಿರುವ ಅವರ ಪ್ರತಿಭೆ ಮತ್ತಷ್ಟು ಬೆಳೆಯಲಿ ಎಂದು ಚಿತ್ರರಂಗದ ಸಹವರ್ತಿಗಳು ಶುಭ ಕೋರಿದ್ದಾರೆ.
ಇದನ್ನೂ ಓದಿ:
ಲೈವ್ನಲ್ಲೇ ಯಾಮಾರಿದ ದಿವ್ಯಾ ಸುರೇಶ್; ವೈರಲ್ ಆಯ್ತು ವಿಡಿಯೋ
ಅವಕಾಶ ಕೊಡಿ ಸಾಕು, ಒಂದು ರೂಪಾಯಿ ಸಂಭಾವನೆಯೂ ಬೇಡ; ನಿರ್ದೇಶಕನ ಎದುರು ಗೋಗರೆದ ಆಲಿಯಾ
(Kichcha Sudeepa wishes Bollywood actor Suniel Shetty on his birthday)
Published On - 3:37 pm, Wed, 11 August 21