ಸಿಂಹದ ಜೊತೆ ಪೋಸ್ ಕೊಟ್ಟು ಟ್ರೋಲರ್​​ಗಳಿಗೆ ಉತ್ತರ ಕೊಟ್ಟ ಕಿರಣ್ ರಾಜ್

'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ತಮ್ಮ ಮುಂದಿನ ಸಿನಿಮಾಗಾಗಿ ಸಿಂಹದ ಜೊತೆ ತರಬೇತಿ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಂಹ ದಾಳಿ ನಡೆಸಿದೆ ಎಂಬ ವದಂತಿಗಳಿಗೆ ಕಿರಣ್ ರಾಜ್ ಸ್ಪಷ್ಟನೆ ನೀಡಿದ್ದು, ಇದು ಕೇವಲ ತರಬೇತಿಯ ‘ಫ್ರೆಂಡ್ಲಿ ಅಟ್ಯಾಕ್’ ಅಷ್ಟೇ ಎಂದು ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಸಿಂಹದ ಜೊತೆ ಪೋಸ್ ಕೊಟ್ಟು ಟ್ರೋಲರ್​​ಗಳಿಗೆ ಉತ್ತರ ಕೊಟ್ಟ ಕಿರಣ್ ರಾಜ್
ಕಿರಣ್ ರಾಜ್

Updated on: Sep 16, 2026 | 7:56 PM

ಮುಖ್ಯಾಂಶಗಳು

  • ಸಿಂಹದ ಜೊತೆ ಕಿರಣ್ ರಾಜ್ ಸಾಹಸ
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
  • ಘಟನೆ ಕುರಿತು ನಟ ಕಿರಣ್ ರಾಜ್ ನೀಡಿದ ಸ್ಪಷ್ಟನೆ ಏನು?

ಕಿರಣ್ ರಾಜ್ ‘ಕರ್ಣ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಸಿನಿಮಾಗಳಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ವಿಷಯವಾಗಿ ಕಿರಣ್ ರಾಜ್ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ಅಷ್ಟಕ್ಕೂ ವೈರಲ್ ಆದ ವಿಡಿಯೋ ಏನು? ಇದು ತಪ್ಪು ಅರ್ಥ ಬರಲು ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಕಿರಣ್ ರಾಜ್ ಅವರು ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರು ಕೇವಲ ಸಿನಿಮಾಗಳನ್ನು ಒಪ್ಪಿ ನಟಿಸೋದಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಈಗ ಕಿರಣ್ ರಾಜ್ ಅವರು ಮುಂದಿನ ಚಿತ್ರಕ್ಕಾಗಿ ಸಿಂಹದ ಜೊತೆ ಟ್ರೇನಿಂಗ್ ಪಡೆಯುತ್ತಿದ್ದಾರೆ. ಈ ಸಂದರ್ಭದ ವಿಡಿಯೋನ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ವಿಡಿಯೋದಲ್ಲಿ ಕಿರಣ್ ರಾಜ್ ಅವರು ಸಿಂಹದ ಬಳಿ ನಡೆದು ಬಂದಿದ್ದಾರೆ. ಆಗ ಸಿಂಹ ಅವರ ಮೇಲೆ ಅಟ್ಯಾಕ್ ಮಾಡೋಕೆ ಬರೋ ರೀತಿಯಲ್ಲಿ ವಿಡಿಯೋ ಇದೆ. ಆ ಬಳಿಕ ಅಲ್ಲೇ ಇರುವ ವ್ಯಕ್ತಿ ಸಿಂಹದಿಂದ ಅವರನ್ನು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇದು ಟ್ರೇನಿಂಗ್ ಮೊದಲ ದಿನ ನಡೆದ ಫ್ರೆಂಡ್ಲಿ ಅಟ್ಯಾಕ್ ಅಷ್ಟೇ. ಕಿರಣ್ ಅವರು ಆ ಬಳಿಕ ಹಂಚಿಕೊಂಡಿರುವ ಮತ್ತೊಂದು ವಿಡಿಯೋನಲ್ಲಿ ಸಿಂಹದ ಜೊತೆಗೆ ಆರಾಮವಾಗಿ ವ್ಯವಹರಿಸುತ್ತಿದ್ದಾರೆ. ಸಿಂಹದ ಆರೈಕೆ ಸಹ ಮಾಡಿದ್ದಾರೆ.

ಇದನ್ನೇ ಕೆಲವರು ದೊಡ್ಡ ವಿಷಯವಾಗಿ ಮಾಡಿದ್ದರು. ‘ಕಿರಣ್ ರಾಜ್ ಮೇಲೆ ಸಿಂಹ ಅಟ್ಯಾಕ್ ಮಾಡಿದೆ’ ಎಂದು ಸುದ್ದಿ ಹಬ್ಬಿಸಲಾಗಿದೆ. ಇದಕ್ಕೆ ಕಿರಣ್ ರಾಜ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ನಾನು ನನ್ನ ಮುಂದಿನ ಚಿತ್ರಕ್ಕಾಗಿ ಸಿಂಹದ ಜೊತೆ ಟ್ರೇನಿಂಗ್ ಪಡೆಯುತ್ತಿದ್ದೇನೆ. ಆಗ ನಡೆದ ಫ್ರೆಂಡ್ಲಿ ಅಟ್ಯಾಕ್ ಅಷ್ಟೇ’ ಎಂದು ಕಿರಣ್ ರಾಜ್ ಸ್ಪಷ್ಟಪಡಿಸಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ’ ಎಂದು ಕೂಡ ಹೇಳಿದ್ದಾರೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸದಂತೆ ಕೋರಿಕೊಂಡಿದ್ದಾರೆ. ಸದ್ಯ ವಿಡಿಯೋಗೆ ನಾನಾ ರೀತಿಯ ಕಮೆಂಟ್ ಬರುತ್ತಿದೆ. ಕಿರಣ್ ಅವರ ಕಮಿಟ್​​ಮೆಂಟ್​​ನ ಅನೇಕರು ಹೊಗಳಿದ್ದಾರೆ.

ಇದನ್ನೂ ಓದಿ: ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್

ಕಿರಣ್ ರಾಜ್ ಅವರು ‘ಜಾಕಿ 42’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಕುದುರೆ ಓಡಿಸೋ ಜಾಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಟ್ರೇಲರ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:53 am, Wed, 9 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us