AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಮೊದಲಾರ್ಧ? ಇಲ್ಲಿದೆ ಫುಲ್​ ರಿಪೋರ್ಟ್​

‘ಕೋಟಿಗೊಬ್ಬ 2’ ಸಿನಿಮಾ ಹಿಟ್​ ಆಗಿತ್ತು. ಈ ಕಾರಣಕ್ಕೆ ‘ಕೋಟಿಗೊಬ್ಬ 3’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕೊವಿಡ್​ ಎರಡನೇ ಅಲೆ ನಂತರದಲ್ಲಿ ತೆರೆಗೆ ಬರುತ್ತಿರುವ ದೊಡ್ಡ ಬಜೆಟ್​ನ ಎರಡನೇ ಸಿನಿಮಾ ಇದಾಗಿದೆ.

ಹೇಗಿದೆ ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಮೊದಲಾರ್ಧ? ಇಲ್ಲಿದೆ ಫುಲ್​ ರಿಪೋರ್ಟ್​
ಸುದೀಪ್​
TV9 Web
| Edited By: |

Updated on: Oct 15, 2021 | 12:00 PM

Share

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಇಂದು (ಅಕ್ಟೋಬರ್​ 15) ರಿಲೀಸ್​ ಆಗಿದೆ. 2019ರಲ್ಲಿ ತೆರೆಗೆ ಬಂದ ‘ಪೈಲ್ವಾನ್​’ ಚಿತ್ರದ ಬಳಿಕ ಸುದೀಪ್ ಅವರು ಬಿಗ್​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳಲು ಬರೋಬ್ಬರಿ ಎರಡು ವರ್ಷಗಳ ಗ್ಯಾಪ್​ ಆಯಿತು. ಈಗ ‘ಕೋಟಿಗೊಬ್ಬ 3’ ತೆರೆಗೆ ಬರುತ್ತಿರುವುದರಿಂದ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಎದುರು ದೊಡ್ಡ ಕಟೌಟ್​ ನಿಲ್ಲಿಸಿ ಹೂವಿನ ಹಾರ ಹಾಕಲಾಗಿದೆ. ಕೆಲವೆಡೆ ಹಾಲಿನ ಅಭಿಷೇಕ ಕೂಡ ಮಾಡಲಾಗಿದೆ.

‘ಕೋಟಿಗೊಬ್ಬ 2’ ಸಿನಿಮಾ ಹಿಟ್​ ಆಗಿತ್ತು. ಈ ಕಾರಣಕ್ಕೆ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಕೊವಿಡ್​ ಎರಡನೇ ಅಲೆ ನಂತರದಲ್ಲಿ ತೆರೆಗೆ ಬರುತ್ತಿರುವ ದೊಡ್ಡ ಬಜೆಟ್​ನ ಎರಡನೇ ಸಿನಿಮಾ ಇದಾಗಿದೆ. ಈ ಕಾರಣಕ್ಕೂ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರ ಇಟ್ಟುಕೊಂಡಿದ್ದಾರೆ. ಹಾಗಾದರೆ, ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಆ ಬಗ್ಗೆ ಇಲ್ಲಿದೆ ಡಿಟೇಲ್ಸ್​.

  • ಸಾಮಾನ್ಯವಾಗಿ ಸುದೀಪ್​ ಅವರ ಎಂಟ್ರಿ ಸೀನ್​ ತುಂಬ ಮಾಸ್​ ಆಗಿರುತ್ತದೆ. ಆದರೆ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಅವರು ಭಿನ್ನವಾಗಿ ಎಂಟ್ರಿ ನೀಡಿದ್ದಾರೆ. ಅದು ಅಭಿಮಾನಿಗಳಿಗೆ ಸಖತ್​ ಮಜಾ ನೀಡಲಿದೆ.
  • ಆಶಿಕಾ ರಂಗನಾಥ್​ ಮತ್ತು ಸುದೀಪ್​ ಡ್ಯಾನ್ಸ್​ ಮಾಡಿರುವ ‘ಪಟಾಕಿ ಪೋರಿಯೋ’ ಹಾಡು ಈ ಚಿತ್ರದ ಶುರುವಿನಲ್ಲೇ ಬರುತ್ತದೆ. ಆ ಮೂಲಕ ಆರಂಭದಲ್ಲೇ ಭರ್ಜರಿ ಮನರಂಜನೆ ಸಿಗಲಿದೆ. ಆ ಬಳಿಕ ಒಂದು ರೊಮ್ಯಾಂಟಿಕ್​ ಸಾಂಗ್​ ಬರಲಿದೆ.
  • ‘ಕೋಟಿಗೊಬ್ಬ 3’ ಫಸ್ಟ್​ ಹಾಫ್​ನಲ್ಲಿ ಸೆಂಟಿಮೆಂಟ್​ ದೃಶ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಫೈಟಿಂಗ್​, ರೊಮ್ಯಾಂಟಿಕ್​ ದೃಶ್ಯಗಳು ಮಾತ್ರವಲ್ಲದೇ ಈ ಭಾವುಕ ಸನ್ನಿವೇಶಗಳು ಕೂಡ ನೋಡುಗರನ್ನು ಆಕರ್ಷಿಸುತ್ತವೆ.
  • ವಿಲನ್​ ಆಗಿ ಕಾಣಿಸಿಕೊಂಡಿರುವ ನವಾಬ್​ ಶಾ ಅವರು ಮೊದಲಾರ್ಧದಲ್ಲೇ ಎಂಟ್ರಿ ನೀಡುತ್ತಾರೆ. ಅವರ ರಗಡ್​ ಲುಕ್​ ಎಲ್ಲರಿಗೂ ಇಷ್ಟ ಆಗುತ್ತದೆ. ಅವರ ಪಾತ್ರ ಈ ಸಿನಿಮಾದ ಮುಖ್ಯ ಹೈಲೈಟ್​ ಆಗಿದೆ.
  • ಮಧ್ಯಂತರದವರೆಗೂ ಈ ಸಿನಿಮಾದ ನಿರೂಪಣೆ ಸರಾಗವಾಗಿ ಸಾಗುತ್ತದೆ. ಇಂಟರ್​ವಲ್​ಗೂ ಮುನ್ನ ಒಂದು ದೊಡ್ಡ ಟ್ವಿಸ್ಟ್​ ಎದುರಾಗುತ್ತದೆ. ಆ ಮೂಲಕ ದ್ವಿತೀಯಾರ್ಧದ ಬಗ್ಗೆ ಸಖತ್​ ಕುತೂಹಲ ಮೂಡುವಂತೆ ಮಾಡುತ್ತದೆ.
  • ಚಿತ್ರದ ಫಸ್ಟ್​ ಹಾಫ್​ನಲ್ಲಿ ಹೆಚ್ಚು ಸಾಹಸ ದೃಶ್ಯಗಳಿಲ್ಲ. ಭರ್ಜರಿ ಫೈಟಿಂಗ್​ ಸೀನ್​ ನೋಡಬೇಕೆಂದರೆ ದ್ವಿತೀಯಾರ್ಧಕ್ಕೆ ಕಾಯುವುದು ಅನಿವಾರ್ಯ.

ಇದನ್ನೂ ಓದಿ:  ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

‘ಕೋಟಿಗೊಬ್ಬ 3’ ರಿಲೀಸ್​ ಸಂದರ್ಭದಲ್ಲೇ ಕಿಚ್ಚನ ಪುತ್ಥಳಿ; ಉದ್ಘಾಟನೆಗೆ ಆಗಮಿಸಲಿದ್ದಾರೆ ಸುದೀಪ್​

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!