ವೈಶಾಖ್ ಅಂತ್ಯಕ್ರಿಯೆಯಲ್ಲಿ ಹೈಡ್ರಾಮಾ, ನಟಿ ಕೃಷಿ ವಿರುದ್ಧ ಕುಟುಂಬಸ್ಥರ ಆಕ್ರೋಶ
Krishi Thapanda: ಅರವಿಂದ್ ರೆಡ್ಡಿ, ಕೃಷಿ ಮತ್ತು ಈಗ ಮೃತರಾಗಿರುವ ವೈಶಾಖ್ ವಿರುದ್ಧ ದೂರು ನೀಡಿದ್ದರು. ಇದೀಗ ವೈಶಾಖ್ ನಿಧನ ಹೊಂದಿದ್ದಾರೆ. ಕೃಷಿ ತಾಪಂಡ ಅವರ ಅಪಾರ್ಟ್ಮೆಂಟ್ನಲ್ಲಿಯೇ ಉದ್ಯಮಿ ವೈಶಾಖ್ ನಿಧನ ಹೊಂದಿದ್ದು, ಇದೀಗ ಗೆಳೆಯನ ಅಂತ್ಯಕ್ರಿಯೆಗೂ ಹೋಗದ ಪರಿಸ್ಥಿತಿ ಕೃಷಿ ಅವರಿಗೆ ಎದುರಾಗಿದೆ.

ನಟಿ ಕೃಷಿ ತಾಪಂಡ (Krishi Thapanda) ಅವರ ಜೀವನದಲ್ಲಿ ಕಳೆದ ಕೆಲ ತಿಂಗಳಿಂದ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಮೊದಲಿಗೆ ಉದ್ಯಮಿ ಅರವಿಂದ್ ರೆಡ್ಡಿ ಜೊತೆಗೆ ವಿವಾದ ಎದ್ದಿತ್ತು. ಅರವಿಂದ್ ರೆಡ್ಡಿ ವಿರುದ್ಧ ದೂರು ಸಹ ಕೃಷಿ ದಾಖಲಿಸಿದ್ದರು. ಆ ಬಳಿಕ ಅರವಿಂದ್ ರೆಡ್ಡಿ, ಕೃಷಿ ಮತ್ತು ಈಗ ಮೃತರಾಗಿರುವ ವೈಶಾಖ್ ವಿರುದ್ಧ ದೂರು ನೀಡಿದ್ದರು. ಇದೀಗ ವೈಶಾಖ್ ನಿಧನ ಹೊಂದಿದ್ದಾರೆ. ಕೃಷಿ ತಾಪಂಡ ಅವರ ಅಪಾರ್ಟ್ಮೆಂಟ್ನಲ್ಲಿಯೇ ಉದ್ಯಮಿ ವೈಶಾಖ್ ನಿಧನ ಹೊಂದಿದ್ದು, ಇದೀಗ ಗೆಳೆಯನ ಅಂತ್ಯಕ್ರಿಯೆಗೂ ಹೋಗದ ಪರಿಸ್ಥಿತಿ ಕೃಷಿ ಅವರಿಗೆ ಎದುರಾಗಿದೆ.
ವೈಶಾಖ್ ಅವರ ಅಂತ್ಯಕ್ರಿಯೆ ಇಂದು (ಜೂನ್ 25) ಚಾಮರಾಜನಗರದ ಚಿತಾಗಾರದಲ್ಲಿ ಅಂತ್ಯಕ್ರಿಯ ನಡೆಯಿತು. ನಟಿ ಕೃಷಿ ತಾಪಂಡ ಅಂತಿಮ ದರ್ಶನ ಪಡೆಯಲು ಬರುತ್ತಿದ್ದಂತೆ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ವೈಶಾಖ್ ಕುಟುಂಬದವರು ನಟಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ವೈಶಾಖ್ ಅವರ ಮಾವ ಇನ್ನಿತತರರು ಸೇರಿ ನಟಿಯನ್ನು ಅಂತಿಮ ದರ್ಶನ ಪಡೆಯುವುದರಿಂದ ತಡೆದುದ್ದಲ್ಲದೆ, ನಟಿಯನ್ನು ಅಲ್ಲಿಂದ ಹೊರಗೆ ಕಳಿಸಿದರು. ಗೆಳೆಯನ ಅಂತಿಮ ದರ್ಶನ ಪಡೆಯಲಾಗದೆ, ಅಂತಿಮ ಸಂಸ್ಕಾರದಲ್ಲಿ ಭಾಗಿ ಆಗಲಾರದೆ ನಟಿ ಅಲ್ಲಿಂದ ಹೊರನಡೆದರು.
ಕೃಷಿ ತಾಪಂಡ ಮತ್ತು ವೈಶಾಖ್ ಲಿವಿನ್ ರಿಲೇಷನ್ನಲ್ಲಿದ್ದರು ಎನ್ನಲಾಗಿದೆ. ವೈಶಾಖ್ಗೆ ಅದಾಗಲೆ ಮದುವೆ ಆಗಿತ್ತು. ಕಾರು, ಆಟೊಮೊಬೈಲ್, ಗ್ಯಾರೇಜ್, ಸ್ಪೇರ್ ಪಾರ್ಟ್ಸ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ವೈಶಾಖ್, ಪತ್ನಿಯೊಂದಿಗೆ ವೈಮನಸ್ಯ ಮಾಡಿಕೊಂಡಿದ್ದರು. ವೈಶಾಖ್, ಬಹುತೇಕ ಕೃಷಿ ಅವರ ಆರ್ಆರ್ ನಗರದ ಅಪಾರ್ಟ್ಮೆಂಟ್ ಫ್ಲ್ಯಾಟ್ನಲ್ಲಿಯೇ ಇರುತ್ತಿದ್ದರು. ಇಬ್ಬರ ನಡುವೆ ‘ಆತ್ಮೀಯ ಸಂಬಂಧ’ ಇತ್ತು.
ಇದನ್ನೂ ಓದಿ:ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಈ ಹಿಂದೆ ಕೃಷಿ ತಾಪಂಡ, ಉದ್ಯಮಿ ಅರವಿಂದ್ ರೆಡ್ಡಿ ನಡುವೆ ವಿವಾದ ಉಂಟಾದಾಗ, ವೈಶಾಖ್, ಉದ್ಯಮಿ ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿತ್ತು. ಈ ಕುರಿತಾಗಿ ಅರವಿಂದ್ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ವೈಶಾಖ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕವೂ ವೈಶಾಖ್ ಹಾಗೂ ಕೃಷಿ ಜೊತೆಗೇ ಇದ್ದರು.
ಉದ್ಯಮದಲ್ಲಿ ಹಿನ್ನಡೆ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಇನ್ನಿತರೆಗಳಿಂದ ಬೇಸತ್ತು ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಕೃಷಿ ಅವರ ಫ್ಲ್ಯಾಟ್ಗೆ ಬಂದ ವೈಶಾಖ್, ಕೃಷಿ ಅವರಿಗೆ ಕೊನೆಯ ಸಂದೇಶ ಕಳಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಕೃಷಿ ಅವರು ನೆಲಮಂಗಲಕ್ಕೆ ಹೋಗಿದ್ದರಂತೆ. ಕೃಷಿ ಅವರು ವೈಶಾಖ್ ಮನೆಯವರಿಗೆ ಮಾಹಿತಿ ನೀಡಿದ್ದರಾದರೂ ಅವರು ಬರುವುದಷ್ಟರಲ್ಲಿ ವೈಶಾಖ್ ಮೃತಪಟ್ಟಿದ್ದರು. ಇದೀಗ ಪ್ರಕರಣ ಕುರಿತಾಗಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




