AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nanu Kusuma: ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ‘ನಾನು ಕುಸುಮ’ ಸಿನಿಮಾ ಜೂನ್​ 30ಕ್ಕೆ ಬಿಡುಗಡೆ; ಏನಿದರ ವಿಶೇಷ?

Nanu Kusuma Kannada Movie: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುವ ಹುಡುಗಿಯೊಬ್ಬಳು ಏನೆಲ್ಲ ಶೋಷಣೆಗಳನ್ನು ಅನುಭವಿಸುತ್ತಾಳೆ ಎಂಬುದನ್ನು ‘ನಾನು ಕುಸುಮ’ ಸಿನಿಮಾದಲ್ಲಿ ವಿವರಿಸಲಾಗಿದೆ. ಕೃಷ್ಣೇಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Nanu Kusuma: ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ‘ನಾನು ಕುಸುಮ’ ಸಿನಿಮಾ ಜೂನ್​ 30ಕ್ಕೆ ಬಿಡುಗಡೆ; ಏನಿದರ ವಿಶೇಷ?
ಗ್ರೀಷ್ಮಾ ಶ್ರೀಧರ್, ಕೃಷ್ಣೇಗೌಡ
ಮದನ್​ ಕುಮಾರ್​
|

Updated on: Jun 20, 2023 | 3:08 PM

Share

ನಿರ್ಮಾಪಕ ಕೃಷ್ಣೇಗೌಡ (Krishne Gowda) ಅವರು ಗಮನಾರ್ಹ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುತ್ತಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದಲ್ಲಿ ಬಂದ ‘ಪಿಂಕಿ ಎಲ್ಲಿ’ ಸಿನಿಮಾ ಸಾಕಷ್ಟು ಸುದ್ದು ಮಾಡಿತ್ತು. ಈಗ ಅದೇ ರೀತಿ ‘ನಾನು ಕುಸುಮ’ ಸಿನಿಮಾ (Nanu Kusuma Movie) ಕೂಡ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ಈ ಸಿನಿಮಾ ಸಹ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಕುತೂಹಲ ಮೂಡಿಸಿದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್​ 30ರಂದು ರಾಜ್ಯಾದ್ಯಂತ ‘ನಾನು ಕುಸುಮ’ ಚಿತ್ರ ಬಿಡುಗಡೆ ಆಗಲಿದೆ. ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಕೃಷ್ಣೇಗೌಡ ಅವರು ಮಾಡಿದ್ದಾರೆ. ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುವ ಹುಡುಗಿಯೊಬ್ಬಳು ಅಲ್ಲಿ ಏನೆಲ್ಲ ಶೋಷಣೆಗಳನ್ನು ಅನುಭವಿಸುತ್ತಾಳೆ ಎಂಬುದನ್ನು ‘ನಾನು ಕುಸುಮ’ ಸಿನಿಮಾದಲ್ಲಿ ವಿವರಿಸಲಾಗಿದೆ. ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕೃಷ್ಣೇಗೌಡ, ಸೌಮ್ಯ ಭಾಗವತ್, ಕಾವ್ಯಾ ಶ್ರೀಧರ್, ವಿಜಯ್, ಪ್ರತಿಭಾ ಸಂಶಿಮಠ್ ಸೇರಿದಂತೆ ಹಲವು ಕಲಾವಿದರು ‘ನಾನು ಕುಸುಮ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಚಿತ್ರರಂಗದಲ್ಲಿನ ಅನೇಕ ಖ್ಯಾತನಾಮರ ಗಮನವನ್ನು ಈ ಸಿನಿಮಾ ಸೆಳೆದಿದೆ.

ಇದೊಂದು ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ

‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ದಲ್ಲಿ ಪ್ರದರ್ಶನಗೊಂಡು ಪ್ರಥಮ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ‘ನಾನು ಕುಸುಮ’ ಸಿನಿಮಾದ ಹೆಗ್ಗಳಿಕೆ. ‘ತ್ರಿಶೂರ್ ಫಿಲ್ಮ್​ ಫೆಸ್ಟಿವಲ್’, ‘ಇಂಡಿಯನ್ ಪನೋರಮಾ’, ‘ರಾಜಸ್ಥಾನ್ ಫಿಲ್ಮ್​ ಫೆಸ್ಟಿವಲ್’ ಹೀಗೆ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗಿದೆ. ಅಲ್ಲದೇ ಹಲವು ಪ್ರಶಸ್ತಿ ಮತ್ತು ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳಿಸಿದ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಹಿಂದೇಟು ಹಾಕುತ್ತದೆ. ಆದರೆ ನಿರ್ಮಾಪಕ ಕೃಷ್ಣೇಗೌಡ ಅವರು ಹಾಗಲ್ಲ. ‘ಪಿಂಕಿ ಎಲ್ಲಿ’ ಚಿತ್ರವನ್ನು ಕೂಡ ಅವರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದರು. ಈಗ ‘ನಾನು ಕುಸುಮ’ ತೆರೆಕಾಣಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಇದೊಂದು ಓದಿ: Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ 2 ಪ್ರಮುಖ ಪ್ರಶಸ್ತಿ

‘ನಾನು ಕುಸುಮ’ ಸಿನಿಮಾಕ್ಕೆ ಅರ್ಜುನ್ ರಾಜಾ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಸ್ಪತ್ರೆ, ವಾರ್ಡ್, ಗಲ್ಲಿ, ಮನೆ ಸೇರಿದಂತೆ ಸಿನಿಮಾದ ಕಥೆಯಲ್ಲಿ ಬರುವ ಅನೇಕ ಸ್ಥಳಗಳನ್ನು ನೈಜ ಲೊಕೇಶನ್​ಗಳಲ್ಲೇ ಚಿತ್ರೀಕರಣ ಮಾಡಲಾಗಿದೆ. ಸಿಂಕ್ ಸೌಂಡ್​ನಲ್ಲಿ ಧ್ವನಿ ಗ್ರಹಣ ಮಾಡಿರುವುದು ಸಿನಿಮಾದ ಮತ್ತೊಂದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ