Kriti Kharbanda: ಕೃತಿ ಕರಬಂಧ ಜನ್ಮದಿನ; ‘ಗೂಗ್ಲಿ’ ನಟಿಗೆ ಕನ್ನಡದ ನಂಟು ಬೆಳೆದಿದ್ದು ಹೀಗೆ…

2010ರಲ್ಲಿ ‘ಚಿರು’ ಸಿನಿಮಾ ಮೂಲಕ ಕೃತಿ ಕರಬಂಧ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿ ಅವರು ನಟಿಸಿದರು. ಕೃತಿ ಕರಬಂಧ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದ ಸಿನಿಮಾ ‘ಗೂಗ್ಲಿ’. ಈ ಚಿತ್ರದಿಂದ ಅವರಿಗೆ ಇರೋ ಬೇಡಿಕೆ ಹೆಚ್ಚಿತು. ಡಾಕ್ಟರ್ ಸ್ವಾತಿ ಹೆಸರಿನ ಪಾತ್ರ ಮಾಡಿದ್ದರು.

Kriti Kharbanda: ಕೃತಿ ಕರಬಂಧ ಜನ್ಮದಿನ; ‘ಗೂಗ್ಲಿ’ ನಟಿಗೆ ಕನ್ನಡದ ನಂಟು ಬೆಳೆದಿದ್ದು ಹೀಗೆ…
ಕೃತಿ ಕರಬಂಧ
Follow us
| Updated By: ಮದನ್​ ಕುಮಾರ್​

Updated on: Oct 29, 2023 | 11:03 AM

ನಟಿ ಕೃತಿ ಕರಬಂಧ ಅವರಿಗೆ ಇಂದು (ಅಕ್ಟೋಬರ್ 29) ಜನ್ಮದಿನದ (Kriti Kharbanda Birthday) ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೋ ಪೋಸ್ಟ್ ಮಾಡಿ ವಿಶಸ್ ತಿಳಿಸಲಾಗುತ್ತಿದೆ. ಕೃತಿ ಕರಬಂಧ (Kriti Kharbanda) ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ. ಕೃತಿ ಹಲವು ಹಿಟ್ ಚಿತ್ರಗಳನ್ನು (Kannada Cinema) ನೀಡಿದ್ದಾರೆ. ಆ ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು. ಕೃತಿ ಜನಿಸಿದ್ದು 1990ರ ಅಕ್ಟೋಬರ್ 29ರಂದು. ದೆಹಲಿಯಲ್ಲಿ ಅವರ ಜನನ ಆಯಿತು. ಅವರದ್ದು ಪಂಜಾಬಿ ಹಿಂದಿ ಫ್ಯಾಮಿಲಿ. ನಂತರ ಅವರ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಯಿತು. ಬೆಂಗಳೂರಿನ ಬಾಲ್ಡ್ವಿನ್ ಗರ್ಲ್ಸ್​ ಹೈಸ್ಕೂಲ್​, ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್​ನಲ್ಲಿ ಕೃತಿ ಶಿಕ್ಷಣ ಪಡೆದರು. ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್​ನಲ್ಲಿ ಅವರು ಪದವಿ ಹೊಂದಿದರು. ಜ್ಯುವೆಲರಿ ಡಿಸೈನಿಂಗ್​ನಲ್ಲಿ ಕೃತಿ ಡಿಪ್ಲೊಮಾ ಪಡೆದಿದ್ದಾರೆ.

ಕಾಲೇಜಿನಲ್ಲಿದ್ದಾಗ ಕೃತಿ ಮಾಡೆಲಿಂಗ್ ಮಾಡುತ್ತಿದ್ದರು. ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಮೂಡಲು ಇದು ಕೂಡ ಕಾರಣ. ‘ಭೀಮಾ ಜ್ಯುವೆಲರಿ’ ಮೊದಲಾದ ಜಾಹೀರಾತುಗಳಲ್ಲೂ ಅವರು ನಟಿಸಿದ್ದರು. 2009ರಲ್ಲಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನ ‘ಬೋಣಿ’ ಅವರ ನಟನೆಯ ಮೊದಲ ತೆಲುಗು ಸಿನಿಮಾ. 2010ರಲ್ಲಿ ‘ಚಿರು’ ಸಿನಿಮಾ ಮೂಲಕ ಕೃತಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾ ಶೂಟಿಂಗ್ ವೇಳೆ ಹೋಟೆಲ್​ನಲ್ಲಿ ಕೃತಿ ಕರಬಂಧ​ಗೆ ಕೆಟ್ಟ ಅನುಭವ; ನಟಿ ದೂರಿದ್ದು ಯಾರನ್ನ?

‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿ ಅವರು ನಟಿಸಿದರು. ಕೃತಿ ಕರಬಂಧ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದ ಸಿನಿಮಾ ‘ಗೂಗ್ಲಿ’. ಈ ಚಿತ್ರದಿಂದ ಅವರಿಗೆ ಇರೋ ಬೇಡಿಕೆ ಹೆಚ್ಚಿತು. ಈ ಚಿತ್ರದಲ್ಲಿ ಯಶ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಡಾಕ್ಟರ್ ಸ್ವಾತಿ ಹೆಸರಿನ ಪಾತ್ರ ಮಾಡಿದ್ದರು. ಪವನ್ ಒಡೆಯರ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ 2013ರಲ್ಲಿ ರಿಲೀಸ್ ಆಯಿತು. ಆ ಬಳಿಕ ಕೃತಿ ಸ್ಯಾಂಡಲ್​ವುಡ್​ನಲ್ಲಿ ಫೇಮಸ್ ಆಗಿ ಬಿಟ್ಟರು. ಬ್ಯಾಕ್​ ಟು ಬ್ಯಾಕ್ ಕನ್ನಡದ ಸಿನಿಮಾಗಳನ್ನು ಮಾಡೋಕೆ ಅವರು ಆರಂಭಿಸಿದರು. 2014ರಲ್ಲಿ ‘ತಿರುಪತಿ ಎಕ್ಸ್​ಪ್ರೆಸ್’, ‘ಸೂಪರ್ ರಂಗ’, ‘ಬೆಳ್ಳಿ’, ‘ಮಿಂಚಾಗಿ ನೀನು ಬರಲು’ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡವು. 2017ರಲ್ಲಿ ‘ಮಾಸ್ತಿ ಗುಡಿ’ ಚಿತ್ರದಲ್ಲಿ ಕೃತಿ ಬಣ್ಣ ಹಚ್ಚಿದರು.

ಸದ್ಯ ಕೃತಿ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. 2019ರಲ್ಲಿ ‘ಹೌಸ್​​ಫುಲ್​ 4’ ರಿಲೀಸ್ ಆಯಿತು. ಅಕ್ಷಯ್ ಕುಮಾರ್, ರಿತೇಶ್ ದೇಶ್​​ಮುಖ್ ಮೊದಲಾದವರು ನಟಿಸಿದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತು. 2021ರಲ್ಲಿ ರಿಲೀಸ್ ಆದ ‘14 ಫೆರೆ’ ಚಿತ್ರ ರಿಲೀಸ್ ಆಯಿತು. ಇದಾದ ಬಳಿಕ ಕೃತಿ ನಟನೆಯ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಅವರ ಜನ್ಮದಿನಕ್ಕೆ ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ