ಮಿಲಿಯನ್ಗಟ್ಟಲೆ ವೀಕ್ಷಣೆ ಕಂಡ ‘ಕುದ್ರು’ ಹಾಡುಗಳು; ಏನು ಈ ಸಿನಿಮಾದ ವಿಶೇಷ?
ಭಾಸ್ಕರ್ ನಾಯ್ಕ್ ಅವರು ‘ಕುದ್ರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಡೈನಾ ಡಿಸೋಜ, ಫರ್ಹಾನ್, ಹರ್ಷಿತ್ ಶೆಟ್ಟಿ, ಗಾಡ್ವಿನ್, ಪ್ರಿಯಾ ಹೆಗ್ಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಹಾಡುಗಳು ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿವೆ.
ಹಾಡುಗಳು ಚೆನ್ನಾಗಿದ್ದರೆ ಸಿನಿಮಾ ರಿಲೀಸ್ಗೂ ಮುನ್ನವೇ ಪ್ರೇಕ್ಷಕರನ್ನು ಸೆಳೆದುಕೊಳ್ಳಬಹುದು. ಹಾಡುಗಳಿಂದಲೇ ಸಿನಿಮಾ ಹಿಟ್ ಆದ ಎಷ್ಟೋ ಉದಾಹರಣೆ ಇದೆ. ಪ್ರತಿ ದಿನ ಹಲವು ಸಿನಿಮಾಗಳ ಸಾಂಗ್ಸ್ (New Kannada Songs) ರಿಲೀಸ್ ಆಗುತ್ತವೆ. ಅವುಗಳ ನಡುವೆ ಮಿಲಿಯನ್ ವೀವ್ಸ್ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲೂ ಹೊಸ ಚಿತ್ರತಂಡಗಳಿಗೆ ಇದು ನಿಜಕ್ಕೂ ಸವಾಲಿನ ಕೆಲಸ. ಕನ್ನಡದ ‘ಕುದ್ರು’ ಸಿನಿಮಾ (Kudru Movie) ತಂಡ ಆ ಸಾಧನೆ ಮಾಡಿದೆ. ಈ ಚಿತ್ರದ ಹಾಡುಗಳು (Kudru Movie Songs) ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿವೆ. ಆ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಕೌತುಕ ಮೂಡಿಸಿವೆ. ಅಕ್ಟೋಬರ್ 13ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಭಾಸ್ಕರ್ ನಾಯ್ಕ್ ಅವರು ‘ಕುದ್ರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಡೈನಾ ಡಿಸೋಜ, ಫರ್ಹಾನ್, ಹರ್ಷಿತ್ ಶೆಟ್ಟಿ, ಗಾಡ್ವಿನ್, ಪ್ರಿಯಾ ಹೆಗ್ಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಹಾಡುಗಳು ಸದ್ದು ಮಾಡಿವೆ. ‘ಉಡಾಯಿಸು..’ ಹಾಡು ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಹಾಗೆಯೇ, ‘ಬದುಕು ಬವಣೆ..’ ಗೀತೆ 1.1 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಅದೇ ರೀತಿ ‘ಫೇರ್ವೆಲ್ ಪಾರ್ಟಿ..’ ಹಾಡು ಯುವ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
‘ಉಡಾಯಿಸು..’ ಹಾಡು:
‘ಕುದ್ರು’ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆ ಇದೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಡುವಿನ ಸಾಮರಸ್ಯದ ಕಥೆಯನ್ನು ಈ ಸಿನಿಮಾ ಮೂಲಕ ಹೇಳಲಾಗುವುದು. ಸ್ನೇಹಿತರ ಕಥೆ ಕೂಡ ಇದರಲ್ಲಿ ಇದೆ. ಹೊಸ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ‘ಬದುಕು ಬವಣೆ..’ ಹಾಡು ಯಕ್ಷಗಾನದ ಸೊಗಡಿನಲ್ಲಿ ಮೂಡಿಬಂದಿದೆ. ಬದುಕಿನ ಬಗ್ಗೆ ಅನೇಕ ಸಂದೇಶಗಳನ್ನು ನೀಡುವ ರೀತಿಯಲ್ಲಿದೆ ಈ ಹಾಡಿನ ಸಾಹಿತ್ಯ. ‘ಉಡಾಯಿಸು..’ ಗೀತೆಯಲ್ಲಿ ಯುವ ಹೃದಯಗಳ ಸ್ನೇಹದ ಕ್ಷಣಗಳು ಸೆರೆ ಆಗಿವೆ.
‘ಬದುಕು ಬವಣೆ..’ ಹಾಡು:
ದ್ವೀಪ ಎಂಬುದು ‘ಕುದ್ರು’ ಶೀರ್ಷಿಕೆಯ ಅರ್ಥ. ಒಂದು ದ್ವೀಪದಲ್ಲಿ ವಾಸಿಸುವ ಬೇರೆ ಬೇರೆ ಸಮುದಾಯದ ಕುಟುಂಬಗಳ ಕಹಾನಿಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಅಕ್ಟೋಬರ್ 13ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆದಿದೆ.
ಇದನ್ನೂ ಓದಿ: ದುಬೈನಲ್ಲಿ ಅದ್ದೂರಿಯಾಗಿ ರಿಲೀಸ್ ಆಯ್ತು ‘ಕುದ್ರು’ ಹಾಡು; ಈ ಚಿತ್ರದಲ್ಲಿದೆ ಕೋಲ, ಕಂಬಳ, ಯಕ್ಷಗಾನ
ಕೋಮು ಸಂಘರ್ಷದ ಕಾರಣದಿಂದ ಕರಾವಳಿ ಪ್ರದೇಶ ಆಗಾಗ ಸುದ್ದಿ ಆಗುತ್ತದೆ. ಅಂಥ ಒಂದು ಸೂಕ್ಷವಾದ ವಿಚಾರವನ್ನು ಇಟ್ಟುಕೊಂಡು ಭಾಸ್ಕರ್ ನಾಯ್ಕ್ ಅವರು ಸಿನಿಮಾ ಮಾಡಿರುವುದರಿಂದ ಪ್ರೇಕ್ಷಕರಲ್ಲಿ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.