‘ದಿಲ್ ಪಸಂದ್’ ಟೈಟಲ್ ಲಾಂಚ್ನಲ್ಲಿ ರವಿ ಡಿ. ಚನ್ನಣ್ಣನವರ್; ಅಚ್ಚರಿಯ ವಿಚಾರ ಬಿಚ್ಚಿಟ್ಟ ಡಾರ್ಲಿಂಗ್ ಕೃಷ್ಣ
ರಶ್ಮಿ ಫಿಲಮ್ಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.
ಡಾರ್ಲಿಂಗ್ ಕೃಷ್ಣ ಅವರು ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ‘ಲವ್ ಮಾಕ್ಟೇಲ್’ ಹಿಟ್ ಆದ ನಂತರ ಸಾಕಷ್ಟು ಸಿನಿಮಾ ಆಫರ್ ಅವರಿಗೆ ಬಂದಿದೆ. ಆದರೆ, ಅವರಿಗೆ ಪೊಲೀಸ್ ಆಗಬೇಕು ಎನ್ನುವ ಕನಸು ಇತ್ತು. ಅದು ಈಡೇರಿಲ್ಲ. ಈ ವಿಚಾರವನ್ನು ಅವರು ‘ದಿಲ್ ಪಸಂದ್’ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ರಶ್ಮಿ ಫಿಲಮ್ಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು. ಚಿತ್ರಕ್ಕೆ ‘ದಿಲ್ ಪಸಂದ್’ ಎಂದು ಹೆಸರಿಡಲಾಗಿದೆ. ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್, ‘ನನ್ನ ಹದಿಮೂರು ವರ್ಷದ ವೃತ್ತಜೀವನದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಭಾಗವಹಿಸಿರುವ ಮೊದಲ ಸಿನಿಮಾ ಸಮಾರಂಭ ಇದು. ಅದಕ್ಕೆ ಕಾರಣ ನನ್ನ ಸುಮಂತ್ ಕ್ರಾಂತಿ ಅವರ ಗೆಳೆತನ. ನಾನು ಅಪ್ಟಟ್ಟ ಕನ್ನಡಾಭಿಮಾನಿ. ಕನ್ನಡ ಚಲನಚಿತ್ರಗಳು ನನಗೆ ಪ್ರಾಣ. ನಾಟಕದಲ್ಲಿ ಅಭಿನಯಿಸಿದ ಅನುಭವವೂ ಇದೆ’ ಎಂದರು. ಅಲ್ಲದೆ, ಚಿತ್ರಕ್ಕೆ ಶುಭ ಹಾರೈಸಿದರು.
‘ಇದು ಲಾಕ್ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ಈ ಕಥೆ ಸಿದ್ಧವಾದ ಕೂಡಲೇ ನಾಯಕ ಕೃಷ್ಣ ಅವರಿಗೆ ಹೇಳಿದೆ. ಈ ಸಂದರ್ಭಕ್ಕೆ ಸೂಕ್ತವಾದ ಕಥೆ ಇದು, ಮುಂದುವರೆಯಿರಿ ಎಂದರು. ‘ದಿಲ್ ಪಸಂದ್’ನಷ್ಟೇ ನಮ್ಮ ಚಿತ್ರವೂ ಸಿಹಿಯಾಗಿರಲಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಮನಸ್ಸಿಗೆ ಹತ್ತಿರವಾದವರು ಅಂದುಕೊಳ್ಳಬಹುದು’ ಎಂದು ನಿರ್ದೇಶಕ ಶಿವತೇಜಸ್ ಶೀರ್ಷಿಕೆ ಬಗ್ಗೆ ಹೇಳಿದರು.
‘ನನಗೆ ಮೊದಲಿನಿಂದಲೂ ಪೊಲೀಸ್ ಅಧಿಕಾರಿಗಳು ಅಂದರೆ ಇಷ್ಟ. ಏಕೆಂದರೆ ನನ್ನ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು. ನನ್ನ ಅಪ್ಪನಿಗೆ ನಾನು ಪೊಲೀಸ್ ಆಗಲಿ ಎಂಬ ಆಸೆಯಿತ್ತು. ನಾನು ನಟನಾದೆ. ‘ಲವ್ ಮಾಕ್ಟೇಲ್’ ಚಿತ್ರದ ಮೂಲಕ ಬರಹಗಾರನೂ ಆದೆ. ನನ್ನ ಈ ಬೆಳವಣಿಗೆಯಲ್ಲಿ ನನ್ನ ಹೆಂಡತಿ ಮಿಲನ ಪಾತ್ರ ದೊಡ್ಡದು’ ಎಂದರು ಡಾರ್ಲಿಂಗ್ ಕೃಷ್ಣ.
ಇದನ್ನೂ ಓದಿ: ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್: ‘ದಿಲ್ ಪಸಂದ್’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ
‘ಲವ್ ಮಾಕ್ಟೇಲ್’ ನೋಡುವಂತೆ ರವಿ ಡಿ. ಚನ್ನಣ್ಣನವರ್ಗೆ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?